ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•. ಶ್ರೀಮದ್ರಾಮಾಯಣವು [ಸರ್ಗ.1೨. ಸೀತೆಯು ಮಾಯಾರಾಮಶಿರಸ್ಸನ್ನು ನೋಡಿ ವಿಲಪಿಸಿದುದು+w ಸೀತೆಯು, ತನ್ನ ಮುಂದೆ ತಂದಿರಿಸಿದ್ದ, ಕೃತ್ರಿಮವಾದ ರಾಮತಿರ ಸ್ಪನ್ನೂ, ಉತ್ತಮವಾದ ಮಾಯಾಧನುಸ್ಸನ್ನೂ, ನೋಡಿದಳು ಹಾಗೆಯೇ ಹನುಮಂತನು ಹಿಂದೆ ತನಗೆ ತಿಳಿಸಿದರಾಮ ಸುಗ್ರೀವ ಸಂಬಂಧವನ್ನು, ಈ ಗ ರಾವಣನ ಬಾಯಿಂದಲೂ ಕೇಳಿದಳು, ಮತ್ತು ತನ್ನ ಪ್ರಿಯನಾದ ರಾ ಮನ ಕಣ್ಣುಗಳಂತೆಯೇ ಅಂದವಾದ ಕಣ್ಣುಗಳನ್ನೂ, ಅದೇಮುಖವರ್ಣ ವನ್ನೂ, ಆದೇವಿಧವಾದ ಮುಖದ ಸೊಗಸನೂ ,ಅದೇ ತಲೆಕೂದಲುಗಳ ನ್ಯೂ , ಅದೇ ಕುರುಳುಗಳ ಸೊಬಗನ್ನೂ, ಈ ಮಾಯಾಶಿರಸ್ಸಿನಲ್ಲಿಯೂ ನೋಡಿದಳು. ತಾನು, ಗುರುತಿಗಾಗಿ ಹನುಮಂತನ ಕೈಯಲ್ಲಿ, ರಾಮನಿಗೆ ಕಳುಹಿಸಿಕೊಟ್ಟ ಚೂಡಾಮಣಿಯ 'ಅಲ್ಲಿರುವುದನ್ನು ಕಂಡಳು ಈ ಹೋಲಿಕೆಗಳೆಲ್ಲವೂ, ಅವಳಿಗೆ ಅದೇ ನಿಜವಾದ ರಾಮನ ತಲೆಯೆಂಬ ಭ್ರಾಂತಿಯನ್ನು ಹುಟ್ಟಿಸಿತು. ಅವಳ ದುಃಖವು ಮಿತಿಮೀರಿ ಹೋಯಿತು. ಸಂಕಟವನ್ನು ತಡೆಯಲಾರದೆ, ಕುರರಪಕ್ಷಿಯಂತೆ ಅತಿದೀನಧ್ವನಿಯಿಂದ ರೋದಿಸುವುದಕ್ಕೆ ತೊಡಗಿ, ರಾಮನ ಸ್ಥಿತಿಗಾಗಿ ಕೈಕೇಯಿಯನ್ನು ನಿಂ ದಿಸುತ್ತ, ಎಲೆ ಕೈಕೇಯಿ ! ನಿನ್ನ ಕೋರಿಕೆಯು ಕೈಗೂಡಿತೆ ! ರಘುಕುಲ ಕೈಲ್ಲವೂ ಆನಂದವರ್ಧಕನಾದ ನನ್ನ ಪ್ರಿಯನು ಇದೋ ಹತನಾಗಿರುವನು! ನಿನ್ನ ಇಷ್ಟಾರ್ಥವು ಕೈಗೂಡಿತೆ? ಕಲಹವನ್ನೇ ಉದ್ದೇಶವಾಗಿಟ್ಟುಕೊಂಡು ಇಷ್ಟನರ್ಥಗಳನ್ನು ತಂದಿಟ್ಟೆಯಲ್ಲಾ? ಅಯ್ಯೋ ? ಆ ನನ್ನ ಪ್ರಿಯನಾದ ರಾಮನನ್ನು ಕಾಡಿಗೊಡಿಸುವ ನೆಡಿಂದ, ಅವನನ್ನು ಕೊಲ್ಲಬೇಕೆಂಣಿಸಿ ಕೊನೆಗೆ ಕುಲವನ್ನೇ ಹಾಳುಮಾಡಿಬಿಟ್ಟೆಯಲ್ಲಾ ? ನಿನ್ನ ಕಲಹವು ಕುಲನಾ ಶದಲ್ಲಿಯೇ ಪರವಸಾನಹೊಂದಿತು'ಎಲೆ ಕೈಕೇಯಿ'ನೀನು ಹಾಗೆ ಲೋಕಾ ಭಿರಾಮನಾದ ಆ ರಾಮನಿಗೆ, ನಾರುಬಟ್ಟೆಯನ್ನು ಡಿಸಿ ನನ್ನೊಡನೆ ಸೇರಿಸಿ ಕಾಡಿಗೆ ಕಳುಹಿಸಿದೆಯಲ್ಲವೆ? ಸಯ್ಯಲೋಕಪ್ರಿಯನಾದ ಆ ರಾಮನು ನಿನಗೆ ಮಾಡಿದ ಅಂತಹ ಅಪ್ರಿಯವೇನು?ಎಂದು ಕೈಕೇಯಿಯನ್ನು ನಾನಾವಿಧವಾ ಗಿ ನಿಂದಿಸಿದಳು. ದುಃಖದಿಂದ ದೀನಳಾಗಿ ನಡುಗುತ್ತ ಆ ಸೀತೆಯು, ಹೀಗೆ ಕೈಕೇಯಿಯನ್ನು ನಿಂದಿಸುತ್ತಿದ್ದ ಹಾಗೆಯೇ, ಸ o! ಓವನ ತಡೆಯಲಾರದೆ