ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯o ಶ್ರೀಮದ್ರಾಮಾಯಣವು [ಸರ್ಗ ೩೨, ಕಾಲವೆಂಬ ದು (ಪರಮಾತ್ಮನು), ಅವರವರ ದುಷ್ಕರ್ಮಗಳನ್ನು ಪಕ್ಷಮಾ ಡುವರೀತಿಗೆ ತಕ್ಕಂತೆ, ಭವಿಷ್ಯದರ್ಧಗಳನ್ನು ತಿಳಿದ ಪ್ರಾಜ್ಞನಾದ ಸುರು ಷನಿಗೂಕೂಡ ಅವರವರ ವಿಷಯವಾದ ಪ್ರಜ್ಞೆಯು ಬದಲಾಯಿಸಿಹೋ ಗುವುದು, ಹಾಗೆಯೇ ನಿನ್ನ ವಿಷಯದಲ್ಲಿಯೂ! ಆ ಜ್ಯೋತಿಷ್ಠರ ಪ್ರಜ್ಞೆಯು ಕೆಟ್ಟು ಹೋಗಿರಬಹುದಾದುದರಿಂದಲೇ, ಅವರ ಮಾತು ಅಸತ್ಯವೆನಿಸಿಕೊಂ ಡಿತು ಎಲೆ' ಪ್ರಿಯನೆ ' ನೀನು ಸಮಸ್ತ ವ್ಯಸನಗಳನ್ನೂ ನಿವಾರಿಸುವುದಕ್ಕೆ ಬೇಕಾದ ಉಪಾಯಗಳೆಲ್ಲವನ್ನೂ ತಿಳಿದವನು ನೀತಿಶಾಸ್ತ್ರಗಳನ್ನು ಚೆನ್ನಾಗಿ ಬಲ್ಲವನು ಹೀಗಿರುವಾಗಲೂ ನೀನು ಮೃತ್ಯುವಿನ ಕೈಗೆ ಸಿಕ್ಕಿಬಿದ್ದುದು ಹೇ ಗೆ? ಹಾ ಕಷ್ಟವೆ? ನೀನು ಸಮುದ್ರತೀರದಲ್ಲಿ ಬಂದಿಳಿದ ಆ ರಾತ್ರಿಯು ಎ ಷ್ಟು ಘೋರವಾದುದು' ಕ್ರೂರವಾಗಿಯೂ, ಭಯಂಕರವಾಗಿಯೂ ಇದ್ದ ಆಕಾಲರಾತ್ರಿಯು, ಕಮಲದಂತೆ ಕಣ್ಣುಳ್ಳ ನಿನ್ನ ಸೌಂದಯ್ಯವನ್ನು ನೋಡಿ ಮೋಹಿಸಿ,ನಿನ್ನ ನಾಲಿಂಗಿಸುವುದಕ್ಕಾಗಿಯೇ ನನ್ನಿಂದ ನಿನ್ನ ನಗಲಿಸಿ ಕದ್ದು ರಬೇಕು!ಎಲೆಮಹಾಬಾಹೂ'ದಿಕ್ಕಿಲ್ಲದೆ ದುಃಖಿಸುತ್ತಿರುವ ನನ್ನನ್ನು ಬಿಟ್ಟು, ಈ ಭೂಮಿಯನ್ನಾಲಿಂಗಿಸಿ ಮಲಗಿರುವೆಯಲ್ಲಾ ! ನನಗಿಂತಲೂ ಈ ಭೂ ಮಿಯೇ ನಿನಗೆ ಪ್ರಿಯತಮಳಾದಳೆ? ಪುರುಷೋತ್ತಮನಾದ ನಿನಗಿದು ಯು ಕ್ಯವೆ? ಎಲೆ ವೀರನೆ' ಚಿನ್ನದ ಕಟ್ಟುಗಳಿಂದ ರಮ್ಯವಾದ ಯಾವ ಈ ನಿನ್ನ ಧನುಸ್ಸನು ನಾವಿಬ್ಬರೂ ಸೇರಿ ಯಾವಾಗಲೂ ಗಂಧಮಾಲಾದಿಗಳಿಂದ ಪೂಜಿಸುತಿದ್ದೆವೋ, ಅಂತಹ ಪ್ರಿಯಧನನ್ನೂ ಹೀಗೆ ದಿಕ್ಕಿಲ್ಲದ ಸ್ಥಿತಿಯನ್ನು ಹೊಂದಿತಲ್ಲಾ' ಎಲೆ ದೋಷರಹಿತನೆ' ನೀನಾದರೋ ಈಗ ಸ್ವರ್ಗದಲ್ಲಿ ಸಮ ಸ್ವಪಿತೃದೇವತೆಗಳೊಡಗೂಡಿರುವ ಪೂಜ್ಯನಾದ ನಿನ್ನ ತಂದೆ ದಶರಥಮ ಹಾರಾಜನೊಡನೆ ಸೇರಿ ಸುಖದಿಂದಿರುವೆ ಮತ್ತು ಇದಕ್ಕೆ ಮೊದಲೇ ಸ್ವರ್ಗವನ್ನು ಸೇರಿದವರಾಗಿಯ, ದೊಡ್ಡ ಧರ್ಮಕಾರಗಳನ್ನು ನಡೆಸಿ ಆಯಾಸತ್ಕರ್ಮಗಳಿಗೆ ತಕ್ಕ ಪದವಿಯಲ್ಲಿರುವವರಾಗಿಯೂ, ಪುಣ್ಯಶಾಲಿ ಗಳಾಗಿಯೂ ಇರುವ ನಿನ್ನ ವಂಶದ ಪುರಾತನರಾಜರನ್ನು ನೀನು ವಿಮಾನಸ್ಥ ನಾಗಿ ನೋಡುತ್ತಿರುವೆ? ಎಲೆ ರಾಜನೆ ! ನೀನೇಕೆ ನನ್ನನ್ನು ಕಣ್ಣೆತ್ತಿಯ ನೋಡುವುದಿಲ್ಲ? ನೀನೇಕೆ ನನ್ನೊಡನೆ ಮಾತಾಡುವುದಿಲ್ಲ ? ನಾನು ಇನ್ನೂ ಏನೂತಿಳಿಯದ ಬಾಲೆಯಲ್ಲವೆ ? ಬಾಲ್ಯದಲ್ಲಿಯೇ 'ನಿನ್ನನ್ನು ಕೈಹಿಡಿದವಳೆಂ