ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೭ ಸರ್ಗ, ೨.] ಯುದ್ಧಕಾಂಡವು. ಗಲಿ, ನೀನು ನಮಗೆ ಮೇಲೆಮೇಲೆ ಉತ್ಸಾಹವನ್ನು ಮಾತ್ರ ಕೊಡುತ್ತಿರ ಬೇಕು ! ತ್ರಿಕೂಟಶಿಖರದಲ್ಲಿರುವ ಆ ಲಂಕೆಯನ್ನು ನಾವು ಕಣ್ಣಿಂದ ನೋ ಡಿದರೆ ಸಾಕು ' ಅದು ನಮ್ಮ ಕಣ್ಣಿಗೆ ಬಿದ್ದ ಮಾತ್ರದಲ್ಲಿಯೇ ರಾವಣ ನು ಹತನಾದಂತೆಯೇ ತಿಳಿ' ಭಯಂಕರವಾದ ಆ ಮಹಾಸಮುದ್ರಕ್ಕೆ ಸೇ। ತುವನ್ನು ಕಟ್ಟದಿದ್ದರೆಮಾತ್ರ, ದೇವೇಂದ್ರನೊಡಗೂಡಿದ ದೇವಾಸುರರಾ ದರೂ ಲಂಕೆಯನ್ನು ಸಾಧಿಸಲಾರರು' ಲಂಕೆಯವರೆಗೂ ಸಮುದ್ರದಲ್ಲಿ ಸೇ ತುವನ್ನು ಮಾತ್ರ ಕಟ್ಟಿಬಿಟ್ಟರೆ, ಅಕ್ಷಣವೇ ನಮ್ಮ ವಾನರಸೇನೆಯು ಅದರಲ್ಲಿ ಪ್ರವೇಶಿಸಿ ಜಯಿಸಿ ಬರುವುದರಲ್ಲಿ ಸಂದೇಹವೇ ಇಲ್ಲ. ಸೇತುವ ನ್ನು ಕಟ್ಟಿದಾಗಲೇ ವಾನರರಿಗೆ ಜಯವೆಂದು ತಿಳಿ' ನಮ್ಮ ಕಡೆಯ ಈ ವಾನ ರರೋಬ್ಬೊಬ್ಬರೂ ಯದ್ಯದಲ್ಲಿ ಮಹಾಶೂರರು ! ಒಬ್ಬೊಬ್ಬರೂ ಕಾಮ ರೂಪಿಗಳು ! ಆ ಲಂಕೆಯನ್ನೇ ಅಲ್ಲಿನ ರಾಕ್ಷಸರೊಡನೆ ಕಿತ್ತು ತರುವುದ ಕ್ಕೂ ಇರರಿಗೆ ಶಕ್ತಿಯುಂಟು! ಆದುದರಿಂದ ನೀನುಮಾತ್ರ ಈಗ ಧೈಯ್ಯ ಗೆಡಬಾರದು : ಸಮಸ್ತಕಾರಗಳಿಗೂ ಭಂಗವನ್ನುಂಟುಮಾಡತಕ್ಕ ಈ ನಿನ್ನ ವ್ಯಸನವನ್ನು ಸಂಪೂರ್ಣವಾಗಿ ಬಿಟ್ಟುಬಿಡಬೇಕು ! ಲೋಕದಲ್ಲಿ ಮನು ಷ್ಯನು ವ್ಯಸನಪಿಡಿತನಾದಪಕ್ಷದಲ್ಲಿ, ಅವನ ಸಹಜವಾದ ಶೌರವೂ ನತಿ ಸುವುದು ! ಎಲೈ ಪ್ರಾಜ್ಞನೆ / ಶೌರವನ್ನೇ ಮುಖ್ಯವಾಗಿ ಅವಲಂಬಿಸಿರು ವ ಪುರುಷನು ಇಂತಹ ಕಾಲಗಳಲ್ಲಿ ವ್ಯಸನವನ್ನು ಬಿಡಬೇಕಾದುದುಮಾತ್ರ ವೇ ಅಲ್ಲ' ಕೂಡಿದಮಟ್ಟಿಗೆ ಮನಸ್ಸಿನಲ್ಲಿ ಧೈಯ್ಯವನ್ನೂ ಹೊಂದಿರಬೇಕು! ಆ ದುದರಿಂದ ಶೌ‌ಪ್ರಧಾನನಾದವನಿಗೆ ಅವಶ್ಯವಾಗಿರಬೇಕಾದ ಧೈರವ ನ್ನೇ ನೀನೂ ಅವಲಂಬಿಸು ' ಲೋಕದಲ್ಲಿ ಶೂರರಾದ ಪುರುಷರಿಗೆ, ಅದರಲ್ಲಿ ಯೂ ಮಹಾತ್ಮರಾದ ನಿನ್ನಂತವರಿಗೆ, ಕೈತಪ್ಪಿ ಹೋದ ವಿಷಯವನ್ನು ಕುರಿ ತಾಗಲಿ, ಕೆಟ್ಟು ಹೋದ ವಸ್ತುವನ್ನು ಕುರಿತಾಗಲಿ ದುಃಖಿಸುವುದು ಸ ಧ್ವಧಾ ಯುಕ್ತವಲ್ಲ. ಹಾಗೆ ದುಃಖಿಸುವುದರಿಂದ ಸಾರಗಳೂ ಕೆಡು ವುವುನೀನಾದರೋ ಬುದ್ಧಿವಂತರಲ್ಲಿ ಮೇಲೆನಿಸಿದವನು ಸಮಸ್ತ ಶಾ ಸ್ವಾರಗಳನ್ನೂ ಚೆನ್ನಾಗಿ ಬಲ್ಲವನು. ಇದರಮೇಲೆ ನನ್ನಂತಹ ಸಹಾಯಕ ರೂ "ನಿನಗಿರುವಾಗ ಶತ್ರುವನ್ನು ಜಯಿಸಲಾರೆಯಾ ? ಅದಕ್ಕೆ ತಕ್ಕ ಪ್ರಯತ್ನವನ್ನು ಮಾಡು. ಎಲೈ ರಘುವಂಶೋತ್ತಮನೆ ! ನೀನು ಯುದ್ಧ