ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೨.] ಯುದ್ಧಕಾಂಡವು. ೨೨೯೧ ಬುದನ್ನು ಕಾಣೆಯಾಗಿ ನಾನು ನಿನ್ನನ್ನೇ ನಂಬಿ ಬಂದವಳಲ್ಲವೆ? ಕ್ಷಣಮಾತ್ರ ವೂ ನಿನ್ನ ನ್ನ ಗದೆ ಅನುಸರಿಸುತಿದ್ದವಳಲ್ಲವೆ ? ಇಂತಹ ನಾನು ಇಷ್ಟು ದು ರವಸ್ಥೆಯಲ್ಲಿರುವಾಗಲೂ ಉಪೇಕ್ಷಿಸಬಹುದೆ ? ಎಲೆ ಕಾಕುತ್ಮನೆ' ನೀನು ವಿವಾಹದಲ್ಲಿ ನನ್ನ ಕೈಯನ್ನು ಹಿಡಿದಾಗ, ನನ್ನೊಡನೆ ಸೇರಿಯೇ ಎಲ್ಲವ ನ್ನೂ ನಡೆಸುವುದಾಗಿ ಪ್ರತಿಜ್ಞೆ ಮಾಡಲಿಲ್ಲವೆ ? ಅದನ್ನಾದರೂ ಸ್ಮರಿಸಿ ಕೊಂಡು ಈಗ ದುಃಖಿತಳಾದ ನನ್ನನ್ನು ನಿನ್ನೊಡನೆ ಕರೆದುಕೊಂಡು ಹೋ ಗು' ರಾಮಾ ! ನೀನು ಲೋಕೋತ್ತರವಾದ ನಡತೆಯುಳ್ಳವನು ! ನಿನ್ನ ವಿ ಗು' ರಾಮಾ ! ನೀನು ಲೆ. ಯೋಗದಿಂದ ಕಂದಿಕುಂದಿ ಕೃಶಳಾಗಿರುವ ಪ್ರಿಯಪತ್ತಿ ಯಾದ ನನ್ನನ್ನು ಪೇಕ್ಷಿಸಿ, ಹೀಗೆ ಈ ಲೋಕವನ್ನೇ ಬಿಟ್ಟು ನೀನು ಪರಲೋಕಕ್ಕೆ ಹೋಗ ಬಹುದೆ? ಹಾಕಷ್ಟವೆ? ಮೊದಲು ಮಂಗಳದ್ರವ್ಯಗಳಿಂದಲಂಕರಿಸುವುದಕ್ಕೆ ಯೋಗ್ಯವಾಗಿ, “ನನ್ನೊಬ್ಬಳಿಂದಲೇ ಆಲಿಂಗಿಸಲ್ಪಡುತಿದ್ದ ಈ ನನ್ನ ಪ್ರಿಯ ನ ದೇಹವನ್ನು , ಅಯ್ಯೋ! ಈಗ ಹದ್ದು ಮೊದಲಾದ ಮಾಂಸಭಕ್ಷಕಗಳೆಲ್ಲ ವೂ ಇಲ್ಲಿಂದಲ್ಲಿಗೆ ಎಳೆದಾಡುವಂತಾಯಿತಲ್ಲಾ ' + ವನವಾಸವು ಮುಗಿದ ಮೇಲೆ ಭೂರಿದಕ್ಷಿಣೆಗಳುಳ್ಳ ಆಗಿ ಹೋಮಾದಿಯಾಗಗಳ ಮೂಲಕವಾಗಿ ದೇವತೆಗಳ ಪೂಜೆಯನ್ನು ನಡೆಸಿ, ಯಜ್ಞಸಂಬಂಧವಾದ ಅಗ್ನಿಹೋತ್ರದಿಂ ದ ತಕ್ಕ ಸಂಸ್ಕಾರವನ್ನೂ ಹೊಂದುವುದಕ್ಕಿಲ್ಲದೆ ಹೋಯಿತಲ್ಲಾ ! ಹಿಂದೆ ಅಯೋಧ್ಯೆಯನ್ನು ಬಿಟ್ಟು ಕಾಡಿಗೆ ಹೊರಟುಬಂದ ನಾವು ಮೂವರಲ್ಲಿ, ಈಗ ಲಕ್ಷ್ಮಣನೊಬ್ಬನೇ ನಮ್ಮ ಪಟ್ಟಣಕ್ಕೆ ಹಿಂತಿರುಗಿ ಹೋದರೆ, ಅವನನ್ನು ~- - - ---- -

  • ಇದರಿಂದ ರಾಮನಿಗೆ ಭಾಗ್ಯಾಂತರವಿಲ್ಲವೆಂದು ಸೂಚಿತವಾಗುವುದು

+ ವನವಾಸಕ್ಕೆ ಮೊದಲು ರಾಮನಿಗೆ ಅಗ್ನಾಧಾನವಿರಲಿಲ್ಲ, ಈ ವನವಾಸಣಾ ಲವು ಕಳೆದಮೇಲೆ ಅಯೋಧ್ಯೆಗೆ ಬಂದು ಅಗ್ನಾಧಾನಾಗ್ನಿ ಷೋಮಾದಿಗಳನ್ನು ನಡೆಸಿ ಆಮೇಲೆ ಕ್ರಮವಾಗಿ ಆಯುಸ್ತುತೀರಿದಾಗ ಅಸಂಸ್ಕೃತಾಗ್ನಿ ಯಿಂದಲೇದೇಹಸಂಸ್ಕಾ ರವನ್ನು ಹೊಂದಬೇಕಾಗಿತ್ತೆಂದೂ, ಹಾಗಿಲ್ಲದೆ ಮಧ್ಯ ಕಾಲದಲ್ಲಿ ಆಕಸ್ಮಿ ಕಮರಣವುಂಟಾ ಯಿತೆಂದೂ ಹೇಳಿ ಸೀತೆಯು ದು ಖಿಸಿದುದಾಗಿ ಇಲ್ಲಿನ ಭಾವವು, ಇದರಿಂದ ರಾಮನು ವನವಾಸಕ್ಕೆ ಮೊದಲು ಯಾಗಾದಿಗಳನ್ನನುಷ್ಯ ಸಲಿಲ್ಲವೆಂದು ವ್ಯಕ್ತವಾಗುವುದು ಈ ವಿಚಾರವು ಅಯೋಧ್ಯಾಕಾಂಡದಲ್ಲಿ ಚೆನ್ನಾಗಿ ವಿವರಿಸಲ್ಪಟ್ಟಿದೆ