ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܐܦ ܦ ೨ ಶ್ರೀಮದ್ರಾಮಾಯಣವು [ಸರ್ಗ, ೩೨• ನೋಡಿ ಕೌಸಲ್ಯಯು ಆತುರದಿಂದ ಬಂದು, “ಸೀತೆಯೂ ರಾಮನೂ ಎಲ್ಲಿ ರುವರು?” ಎಂದು ಕೇಳುವುದರಲ್ಲಿ ಸಂದೇಹವಿಲ್ಲ. ಆಗ ಲಕ್ಷಣನು ಕಸ ಲೈಯ ಮಾತಿಗೆ ಏನೆಂದು ಉತ್ತರವನ್ನು ಕೊಡುವನು? ಮೊದಲೇ ಭಯಾ ತುರದಿಂದ ಬಂದ ಆ ಕೌಸಲೈಯೊಡನೆ ಲಕ್ಷಣನು ( ಅರ್ಧರಾತ್ರಿಯಲ್ಲಿ ರಾಕ್ಷಸರು ಬಂದು ರಾಮನನ್ನೂ, ಅವನ ಮಿತ್ರಬಲವನ್ನೂ ಕೊಂದರೆಂದು ಹೇಳಬೇಕಾಗುವುದಲ್ಲವೆ? ಈ ಮಾತನ್ನು ಕೇಳಿದರ ಕೌಸಲ್ಯಯ ಗತಿಯೇನು? ನಿದ್ರಿಸುತಿದ್ದಾಗ ನಿನಗೆ ರಾಕ್ಷಸರಿಂದುಂಟಾದ ವಧವನ್ನೂ, ನಾನು ರಾಕ್ಷ ಸರ ಕೈಗೆ ಬಿದ್ದಿರುವುದನ್ನೂ ಕೌಸಲ್ಯಯು ಕೇಳಿದಕ್ಷಣವೇ ಎದೆಯೊಡೆ ದು ಪ್ರಾಣವನ್ನು ಬಿಡುವಳು. ಹೀಗೆ ದುರ್ಮರಣಕ್ಕೆ ಯೋಗ್ಯನಲ್ಲದ ಮ ಹಾರಾಜಕುಮಾರನಾದ ಆ ರಾಮನು, ಸಮುದ್ರದಂತೆ ಅತಿಪ್ರಚಂಡರಾದ ಖರಾದಿರಾಕ್ಷಸರನ್ನೆಲ್ಲಾ ಲೀಲಾಮಾತ್ರದಿಂದಲೇ ಕೊಂದು, ಆ ಮಹಾಸ ಮುದ್ರವನ್ನೂ ದಾಟಿ ಬಂದು, ಕೊನೆಗೆ ನಿರ್ಭಾಗ್ಯಳಾದ ನನ್ನ ನಿಮಿತ್ತವಾಗಿ ಹಸುವಿನ ಹಚ್ಚೆಯಂತೆ ಅತ್ಯಲ್ಪ ನಾದ ಆ ಪ್ರಹಸ್ಯನಿಂದ ಹತನಾಗುವು ದೆಂದರೇನು? (ಅಗಾಧವಾದ ಮಹಾಸಮುದ್ರವನ್ನು ದಾಟಿ ಬಂದವನು ಹ ಸುವಿನ ಹಜ್ಜೆಯಿಂದುಂಟಾದ ಹಳ್ಳದಲ್ಲಿ ಮುಳುಗಿ ಸತ್ತಂತಾಯಿತಲ್ಲವೆ') ಅ ಯೋ? ನಾನು ಕುಲಘಾತುಕಿಯೆಂಬುದನ್ನು ತಿಳಿಯದೆ, ರಾಮನು ಅಜ್ಞಾ ನದಿಂದ ನನ್ನನ್ನು ಕೈಹಿಡಿದನು ಕೈಹಿಡಿದ ಹೆಂಡತಿಯಾದ ನಾನೇ ಅವನಿ ಗೆ ಮೃತ್ಯುವಾದೆನು' ನಾನು ಪೂರಜನ್ಮದಲ್ಲಿ ಯಾರೋ ಕನ್ಯಾದಾನವ ನ್ನು ಮಾಡುತಿದ್ದಾಗ ಅವರ ಕೈಯನ್ನು ಹಿಡಿದು ತಡೆದಿರಬೇಕು' ಆ ಪಾಸ ದಿಂದಲೇ ಈಗ ನಾನು ಸತ್ವರಕ್ಷಕ ನಾಗಿಯೂ, ಸಾತಿಥಿಪೂಜಕನಾಗಿ ಯೂ ಇರುವ ಅಂತಹ ರಾಮನಿಗೆ ಕೈಹಿಡಿದ ಹೆಂಡತಿಯಾಗಿದ್ದರೂ, ಅವ ನೊಡನೆ ಭೋಗವನ್ನನುಭವಿಸುವ ಕಾಲದಲ್ಲಿ ಇಂತಹ ದುಃಖಕ್ಕೆ ಗುರಿಯಾ ದೆನು. ರಾವಣಾ! ಇನ್ನು ನೀನಾದರೂ ಶೀಘ್ರದಲ್ಲಿಯೇ ನನ್ನನ್ನು ಕೊಂದು, ಈರಾಮನ ದೇಹದೊಡನೆ ಸೇರಿಸಿ ಬಿಡು' ಈ ರೀತಿಯಿಂದಲಾದರೂ ಪತಿಪತ್ನಿ ಯರನ್ನು ಸೇರಿಸಿದ ಪುಣ್ಯಕ್ಕೆ ಭಾಗಿಯಾಗು' ಇದರಿಂದ ನಿನಗೆ ಸಕ್ಕೋತ ಮವಾದ ಶ್ರೇಯಸ್ಸುಂಟು: ಈ ಸಮಯದಲ್ಲಿ ಇದೇ ಸರೊತ್ತಮವಾದ ಕಲ್ಯಾಣವು ! ಈಗಲೇ ಈ ಕಾವ್ಯವನ್ನು ತಪ್ಪದೆ ನಡೆಸಿಬಿಡು ! ರಾವ