ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೨.] ಯುದ್ಧಕಾಂಡವು. ೨೨೯೩ ಣಾ ! ಈ ರಾಮನ ತಲೆಯೊಡನೆ ನನ್ನ ತಲೆಯನ್ನೂ, ಅವನ ದೇಹದೊ ಡನೆ ಈ ನನ್ನ ದೇಹವನ್ನೂ ಬೇರೆಬೇರೆಯಾಗಿ ಸೇರಿಸಿಡು ! ನಾನೂ ಮ ಹಾತ್ಮನಾದ ಆ ಪತಿಯನ್ನೇ ಹಿಂಬಾಲಿಸಿ ಹೋಗುವೆನು, ( ನಾನು ಪತಿ ಯನ್ನಗಲಿದಮೇಲೆ ದಿಕ್ಕಿಲ್ಲದ ಈ ಹಾಳುಬದುಕನ್ನು ಒಂದು ಮುಹೂ ರ್ತಮಾತ್ರವೂ ಸಹಿಸಲಾರೆನು, ನಾನು ತಂದೆಯ ಮನೆಯಲ್ಲಿದ್ದಾಗ, ವೇದ ವಿತ್ತುಗಳಾದ ಅನೇಕಬ್ರಾಹ್ಮಣರು ಆಗಾಗ ಬಂದು (ಯಾವಸೀಯರು ತನ್ನ ಪತಿಯನ್ನು ಪ್ರೇಮಿಸುವರೋ, ಅವರಿಗೆ ಬಹಳ ಶ್ರೇಯಸ್ಕರಗಳಾದ ಪುಣ್ಯಲೋಕಗಳುಂಟು” ಎಂದು ಹೇಳುತಿದ್ದುದನ್ನು ಕೇಳಿರುವೆನು; ತಾಳ್ಮೆ ಯೂ, ಇಂದ್ರಿಯನಿಗ್ರಹವೂ, ದಾನವೂ, ಧರ್ಮವೂ, ಸತ್ಯವೂ, ಕೃತಜ್ಞ ತೆಯೂ, ಅಹಿಂಸೆ ಮೊದಲಾದ ಇನ್ನೂ ಅನೇಕಸದ್ದುಣಗಳೂ ಯಾವನಲ್ಲಿ ಪೂರ್ಣವಾಗಿ ತುಂಬಿದ್ದು, ಅಂತಹ ಪತಿಯನ್ನೇ ಕಳೆದುಕೊಂಡಮೇಲೆ ಇನ್ನು ನನಗೆ ಬೇರೆ ಗತಿಯೇನು?) ಎಂದು ನಾನಾವಿಧವಾಗಿ ವಿಲಪಿಸುತಿ ದೃಳು, ಮತ್ತು ಆಕೆಯ ಅಗಲವಾಗಿ ಬಿಚ್ಚಿದ ಕಣ್ಣುಗಳಿಂದ, ಅತಿರಸ್ಸನ್ನೂ ಧನುಸ್ಸನ್ನೂ, ಬಾರಿಬಾರಿಗೂ ನೋಡಿ ಸಂಕಟದಿಂದ ತತ್ತಳಿಸುತಿದ್ದಳು, ಹೀಗೆ ಸೀತೆಯು ಬಹಳವಾಗಿ ವಿಲಪಿಸುತ್ತಿರುವಾಗಲೇ ದ್ವಾರಪಾಲಕನಾದ ರಾಕ್ಷಸನೊಬ್ಬನು ಪ್ರಭುವಾದ ರಾವಣನಬಳಿಗೆ ಬಂದು ಮಹಾರಾಜನಿಗೆ ಜಯವಾಗಲಿ” ಎಂದು ಹೇಳಿ ಕೈಮುಗಿದು ನಮಸ್ಕರಿಸಿ, ಮಹಾಪ್ರಭೂ ! ನಮ್ಮ ಸೇನಾಪತಿಯಾದ ಪ್ರಹಸನು ಸಮಸ್ತ ಮಂತ್ರಿಗಳೊಡನೆ ಕೂಡಿ ತಮ್ಮನ್ನು ನೋಡುವುದಕ್ಕಾಗಿ ನಿರೀಕ್ಷಿಸುತ್ತಿರುವನು. ಈ ವಿಷಯವನ್ನು ತಮಗೆ ತಿಳಿಸುವುದಕ್ಕಾಗಿ ನನ್ನನ್ನು ಕಳುಹಿಸಿದನು ಎಲೆ ಮಹಾರಾಜನೆ ? ನಿಜವಾಗಿ ಯಾವುದೋ ದೊಡ್ಡ ಕಾರವಿರಬೇಕು ? ಅದನ್ನು ಈಗಲೇ ನಡೆಸಿ ರಬೇಕಾಗಿದ್ದರೂ, ನೀನು ರಾಜನಾದುದರಿಂದ ನಿನ್ನಾಜ್ಞೆಯನ್ನು ನಿರೀ ಕ್ಷಿಸಬೇಕಾಯಿತು ಅದು ಬಹಳ ಕಷ್ಟಸಾಧ್ಯವಾಗಿರುವುದು ಆದುದರಿಂದ ನೀನು ಎಷ್ಟೇ ಆವಶ್ಯಕಾಲ್ಯವಿದ್ದರೂ ಬಿಟ್ಟು, ಈಗಲೇ ಹೋಗಿ ಅವರಿಗೆ ದರ್ಶನವನ್ನು ಕೊಡುವುದು ಮೇಲು” ಎಂದನು ದ್ವಾರಪಾಲಕನ ಮಾತ ನ್ನು ಕೇಳಿ ರಾವಣನು, ಆಗಲೇ ಅಶೋಕವನವನ್ನು ಬಿಟ್ಟು, ಮಂತ್ರಿಗಳನ್ನು ನೋಡುವುದಕ್ಕಾಗಿ ಹೊರಟನು. ರಾವಣನು ರಾಮನ ಪರಾಕ್ರಮವನ್ನೇ ಮ