ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯೪ ಶ್ರೀಮದ್ರಾಮಾಯಣವು (ಸರ್ಗ ೩೩. ನಸ್ಸಿನಲ್ಲಿ ಗುಣಿಸುತ್ತ, ಆ ಮಂತ್ರಿಗಳಿದ್ದ ಸಭೆಗೆ ಪ್ರವೇಶಿಸಿ, ತಾನು ಮುಂ ದೆ ನಡೆಸಬೇಕಾದ ಕಾಠ್ಯವನ್ನು ಮಂತ್ರಿಗಳೊಡನೆ ಆಲೋಚಿಸಿ, ಯುದ್ಧ ಕಾಕ್ಯಗಳಿಗೆ ತಕ್ಕ ಸನ್ನಾ ಹಗಳನ್ನು ನಿಶ್ಚಯಿಸಿಕೊಂಡನು. ಆತ್ತಲಾಗಿ ರಾವ ಇನು ಅಶೋಕವನವನ್ನು ಬಿಟ್ಟು ಹೊರಟ ಉತ್ಮರಕ್ಷಣದಲ್ಲಿಯೇ, ಅಲ್ಲಿದ್ದ ಮಾಯಾನಿರ್ಮಿತವಾದ ರಾಮನ ತಲೆಯೂ, ಆ ಧನುಸೂ ಅಗೋಚರಗಳಾ ದುವು. ಇತ್ತಲಾಗಿ ರಾಕ್ಷಸೇಶ್ವರನಾದ ರಾವಣನು, ಭಯಂಕರಪರಾಕ್ರಮ ವುಳ್ಳ ತನ್ನ ಸಮಸ್ತ ಮಂತ್ರಿಗಳೊಡನೆ ಕಲೆತು, ಮುಂದೆ ರಾಮನ ವಿಷಯ ದಲ್ಲಿ ತಾನು ಮಾಡಿಕೊಳ್ಳಬೇಕಾದ ಸನ್ನಾ ಹಗಳೇನೆಂಬುದನ್ನು ಮಂತ್ರಾ ಲೋಚನೆಯಿಂದ ನಿಶ್ಚಯಿಸಿಕೊಂಡು, ಆಗ ತನ್ನ ಸಮೀಪದಲ್ಲಿ ತನಗೆ ಶ್ರೇಯಃಕಾಂಕ್ಷಿಗಳಾದ ಸೇನಾಪತಿಗಳನ್ನು ನೋಡಿ ಎಲೆ ಬಲಾಧ್ಯಕ್ಷರ ! ಈಗಲೇ ನೀವು ನಮ್ಮರಣಭೇರಿಗಳನ್ನು ಸ್ಪಷ್ಟವಾಗಿ ಮೊಳಗಿಸಿ, ತೀಪು ದಲ್ಲಿಯೇ ನಮ್ಮ ಸೇನೆಗಳೆಲ್ಲವನ್ನೂ ಕರೆಸಬೇಕು * ಕಾರಣವೇನೆಂದು ಯಾ ರಿಗೂ ತಿಳಿಸಕೂಡದು!” ಎಂದನು ಆಗ ಅಲ್ಲಿದ್ದ ಸೇನಾಪತಿಗಳೆಲ್ಲರೂ ವಿನ ಯದಿಂದ, 'ಮಹಾರಾಜನೆ ' ಅಪ್ಪಣೆ!” ಎಂದು ಹೇಳಿ, ರಾಜಾಜ್ಞೆಯಂತೆ ತಮ್ಮ ತಮ್ಮ ಸೇನೆಗಳೆಲ್ಲವನ್ನೂ ಕರೆಸಿ, ಆ ಸೇನೆಯೆಲ್ಲವೂ ಸಿದ್ಧವಾಗಿ ಬಂದು ನಿಂತಿರುವ ಸಂಗತಿಯನ್ನು ತಮ್ಮ ಪ್ರಭುವಾದ ರಾವಣನಿಗೆ ತಿಳಿಸಿದರು. ಇಲ್ಲಿಗೆ ಮೂವತ್ತೆರಡನೆಯ ಸರ್ಗವು ವಿಭೀಷಣನ ಭಾರೆಯಾದ ಸರಮೆಯು ಸೀತೆಯನ್ನು - ಸಮಾಧಾನಪಡಿಸಿದುದು ಹೀಗೆ ಸೀತೆಯು ಕೃತ್ರಿಮವಾದ ರಾಮಶಿರಸ್ಸನ್ನು ನೋಡಿ ಫ್ರಾಂತಿ ಪಟ್ಟು ಬಹಳವಾಗಿ ದುಃಖಿಸುವುದನ್ನು ನೋಡಿ, ಆಕೆಯಲ್ಲಿ ನಿಜವಾದ ಪ್ರೇ

  • ಇಲ್ಲಿ ರಾವಣನು ತನ್ನ ಮನಸ್ಸಿನಲ್ಲಿರುವ ಯುದ್ಧದ ಕಾರಣವನ್ನು ಪ್ರಕಟ ವಾಗಿ ಪಟ್ಟಣದಲ್ಲಿ ಸಾರಿಸಿದ ಪಕ್ಷದಲ್ಲಿ, ಈ ವೃತ್ತಾಂತವು ಸೀತೆಯಕಿವಿಗೂ ಬಿಳುವುದಲ್ಲ ವೆ? ಆಗ ತಾನು ಇದುವರೆಗೂ ಸೀತೆಯನ್ನು ಮೋಸಗೊಳಿಸುವುದಕ್ಕಾಗಿ ಅವಳೊಡನೆ ಹೇಳಿಬಂದಿರುವ ರಾಮವಧವೃತ್ತಾಂತವೆಲ್ಲವೂ ಅವಳಿಗೆ ಸುಳ್ಳೆಂದು ತೋರಿ ಹೋಗು ವುದರಿಂದ, ಇಲ್ಲಿ ಕಾರಣವನ್ನು ಮರೆಸಿಟ್ಟನೆಂದು ತಿಳಿಯಬೇಕು.