ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೩.] ಯುದ್ದ ಕಾಂಡವು. ೨೨೯೭ ಮಸ್ತಭೂಮಂಡಲದಲ್ಲಿಯೂ ಪ್ರಸಿದ್ಧಿ ಹೊಂದಿದವನು ಎಣೆಯಿಲ್ಲದ ಪರಾ ಕ್ರಮವುಳ್ಳವನು ಅಂತಹ ರಾಮನು ತನ್ನ ತಮ್ಮನಾದ ಲಕ್ಷ್ಮಣನೊಡನೆ ಕೂಡಿರುವಾಗ, ಸತ್ವದೇಶ ಸತ್ವ ಕಾಲ ಸರಾವಸ್ಥೆಗಳಲ್ಲಿಯೂ, ತನ್ನನ್ನು ಮಾತ್ರವೇ ಅಲ್ಲದೆ, ತನಗೆ ಸೇರಿದವರೆಲ್ಲವನ್ನೂ ನಿರಪಾಯವಾಗಿ ರಕ್ಷಿಸಬ ಲ್ಲನು ಅವನ ಕ್ಷೇಮಕ್ಕೆ ಎಂದಿಗೂ ಲೋಪವಿಲ್ಲ ಅವನಿಗೆ ತಿಳಿಯದ ನೀತಿ ಶಾಸ್ತ್ರಗಳಿಲ್ಲ' ಎಷೆ ಶತ್ರುಸೈನ್ಯಗಳು ಗುಂಪುಗುಂಪಾಗಿ ಬಂದರೂ ಲಕ್ಷ ಮಾಡದೆ ಲೀಲಾಮಾತ್ರದಿಂದ ಧ್ವಂಸಮಾಡಬಲ್ಲನು ಅವನಲ್ಲಿರುವ ಬಲ ಪೌರುಷಗಳನ್ನು ಅತ್ಯಮೂಂದು ಹೇಳುವುದಕ್ಕಿಲ್ಲಿ ಜಯಲಕ್ಷ್ಮಿಗೆ ನಿತ್ಯಸಿವಾ ಸವಾಗಿರುವನು ಯಾವ ಶತ್ರುಗಳನ್ನಾದರೂ ಹುಟ್ಟಡಗಿಸಬಲ್ಲನು ಮತ್ತು ಕೇವಲ ಬಪೌರುಷದಿಗಳಿಂದಮಾತ್ರವೇ ಅಲ್ಲದೆ,ಸಮಸಸೌಭಾಗ್ಯಲಕ್ಷಣ ಗಳಿಂದಲೂ ಕೂಡಿರುವ ರಾಮನನ್ನು ಈ ಪ್ರಪಂಚದಲ್ಲಿ ಬೇರೊಬ್ಬ ಕೂ ಲ್ಲುವುದೆಂದರೇನು? ಆ ರಾಮನು ಎಷ್ಟು ಮಾತ್ರವೂ ರಾಕ್ಷಸರಿಂದ ಹತನಾಗಿಲ್ಲ ಇದು ನಿಜವು (ಹಾಗಿದ್ದರೆ ಇಲ್ಲಿ ರಾಮನ ತಲೆಯೂ, ಬಿಲ್ಲೂ ಬಿದ್ದಿರುವದ ಕ್ಕೆ ಕಾರಣವೇನೆಂದು ಕೇಳುವೆಯಾ ? ಎಲೆ ಸೀತೆ ! ಇದು ರಾವಣನ ಮೋ ಸವೇ ಹೊರತು ಬೇರೆಯಾ' ಅವನ ಬುದ್ಧಿಯೂ, ಅವನ ಕಾರವೂ ಬಹಳ ಅಯೋಗ್ಯವಾದುದು ಸಮಸ್ತ ಪ್ರಾಣಿಗಳಿಗೆ ಅವನು ಏರಿJ•ಧಿಯು ! ಬಹಳ ಕರಸ್ವಭಾವವುಳ್ಳವನು 'ಮಾಯೆಗಳೆಲ್ಲವನ್ನೂ ಬಲ್ಲವನು ' ಸಿನ್ನ ನ್ನ ಮೋಸಪಡಿಸುವುದಕ್ಕಾಗಿಯೂ ಈ ಮಾ ಯಯನ್ನು ಪ್ರಯೋಗಿಸಿರುವನು ಎಲೆ ಸೀತೆ ಇನ್ನು ನಿನ್ನ ಸಮಸ್ಯಶೋಕವೂ ಸಿಗಿತು ಶುಭವೂ ನಿನ್ನನ್ನ ಸಮೀಪಿಸುತ್ತಿರುವುದು ನಿಶ್ಚಯವಾಗಿ ಇನ್ನು ಮೇಲೆ ಲಕ್ಷ್ಮಿಯು ನಿನ್ನ ನ್ನು ಸೇರುವಳು ಇದು ನಿಜವು ನನ್ನ ಪ್ರಿಯವಾಕ್ಯವನ್ನು ಗಮನಿಸಿ ಕೇಳ | ರಾಮನು ವಾನರಸೇನೆಯೊಡನೆ ಸಮುದ್ರವನ್ನು ದಾಟಿ ಅದರ ದಕ್ಷಿಣ ತೀರ ದಲ್ಲಿ ಆ ಸೇನೆಯನ್ನಿಳಿಸಿರುವನು. ಆ ರಾಮನು ಲಕ್ಷ ಣನೊಡನೆ ಕೃತಕೃತ್ಯ ನಾಗಿ ಬಂದು ನಿಂತಿರುವುದನ್ನೂ ನೋಡಿದೆನು ಸಮುದ್ರತೀರದಲ್ಲಿ ವಾನರ ಸೈನ್ಯದಿಂದ ಸುರಕ್ಷಿತನಾಗಿರುವನು ಆಗಲೇ ರಾವಣನು ರಾಮನ ಸಂಗತಿ ಯನ್ನು ತಿಳಿದುಬರುವುದಕ್ಕಾಗಿ ವೇಗಶಾಲಿಗಳಾದ ಕೆಲವುದೂತರನ್ನು ಕಳು ಹಿಸಿದ್ದನು, ಅದರಂತೆಯೇ ಅವರು ಅಲ್ಲಿಗೆ ಹೋಗಿಬಂದು, ಆಗಲೇ ರಾಮನು 145