ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯ಆ ಶ್ರೀಮದ್ರಾಮಾಯಣವು (ಸರ್ಗ, ೩೩. ಸಮುದ್ರವನ್ನು ದಾಟಿ ಬಂದುದಾಗಿ ವೃತ್ತಾಂತವನ್ನೂ ತಂದಿರುವರು. ಎಲೆ ವಿಶಾಲಾಕ್ಷಿ' ಈ ವೃತ್ತಾಂತವನ್ನು ಕೇಳಿದುದರಿಂದಲೇ ಈಗ ರಾವಣನು ಮಂ ತ್ರಿಗಳೊಡನೆ ಕಲೆತು ಆಲೋಚಿಸುತ್ತಿರುವನು” ಎಂದಳು. ಹೀಗೆ ಸರಮೆಯು ಮಾತಾಡುತ್ತಿರುವಾಗಲೇ, ಅತ್ತಲಾಗಿ ಪಟ್ಟಣದೊಳಗೆ ಸೈನಿಕರ ಯುದ್ಧ ಸನ್ನಾ ಹದಿಂದ ಹುಟ್ಟಿದ ಭಯಂಕರವಾದ ಕೋಲಾಹಲಧ್ವನಿಯೂ, ರಣ ವಾದ್ಯಧ್ವನಿಗಳೂ ಸೀತೆಯ ಕಿವಿಗೆ ಕೇಳಿಸಿದವು ಆಗ ಸರಮೆಯೂ, ಆ ರಣ ಭೇರೀಧ್ವನಿಯನ್ನು ಕೇಳಿ ಮೃದುವಾಕ್ಯದಿಂದ ಸೀತೆಯನ್ನು ಕುರಿತು ಎಲೆ ಭೀರು ನೀನು ನಿಷ್ಕಾರಣವಾಗಿ ಭಯಪಡುವವಳೆಂದು ಈಗ ನಿನಗೆ ಚೆನ್ನಾ ಗಿ ಗೊತ್ತಾಯಿತೆ? ಆದೋ ಅಲ್ಲಿ ಕೇಳಿದೆಯಾ ? ಸೈನಿಕರನ್ನು ಯುದ್ಧಕ್ಕಾಗಿ ಪ್ರೋತ್ಸಾಹಿಸುವ ರಣಭೇರಿಯು ಎಷ್ಟು ಭಯಂಕರವಾಗಿನುಡಿಸಲ್ಪಡುವುದು ನೋಡು ಗುಡುಗಿನಂತೆ ಗಂಭೀರವಾದ ಆ ಧ್ವನಿಯನ್ನು ಚೆನ್ನಾಗಿ ಕೇಳು ? ಆದೋ' ಸೈನಿಕರ ಕೋಲಾಹಲಗಳನ್ನು ಕೇಳಿದೆಯಾ? ಈಗ ಅಲ್ಲಲ್ಲಿ ಮಾವುತ ರು ತಮ್ಮ ಮದದಾನೆಗಳನ್ನು ಅಲಂಕರಿಸುತ್ತಿರುವರು ' ರಥಿಕರು ರಥಗಳಿಗೆ ಕುದುರೆಗಳನ್ನು ಕಟ್ಟುತ್ತಿರುವರು : ಅಲ್ಲಲ್ಲಿ ರಾವುತರು ಸಾವಿರಾರು ಸಂಖ್ಯೆ ಯಿಂದ ಸೇರಿ, ಕೈಯಲ್ಲಿ ಪ್ರಾಸಗಳನ್ನು ಹಿಡಿದು ಯುದ್ರೋತ್ಸಾಹದಿಂದ ಸುತ್ತುತ್ತಿರುವರು' ಅಲ್ಲಲ್ಲಿ ಪದಾತಿಗಳು ಯುದ್ಧಸನ್ನದ್ಧರಾಗಿ ಗುಂಪು ಕೂಡುತ್ತಿರುವರು ಹೀಗೆ ಆದತದರ್ಶನವುಳ್ಳ ರಥಗಜತುರಗಪದಾತಿಗ ಛಂಬ ಚತುರಂಗಸೈನ್ಯಗಳೂ, ಪ್ರವಾಹದಿಂದ ಮೊಳಗುವ ಸಮುದ್ರ ದಂತೆ ಉತ್ಸಾಹದಿಂದ ಸಿಂಹನಾದಗಳನ್ನು ಮಾಡುತ್ತ, ಅಲ್ಲಿನ ರಾಜಮಾ ರ್ಗಗಳನ್ನು ತುಂಬಿ ಮಹಾವೇಗದಿಂದ ಹೊರಟು ಬರುತ್ತಿರುವುವು. ಎಲೆ ಸೀತೆ ! ಈಗಲೇ ಸಾಣೆಹಿಡಿದು ಥಳಥಳಿಸುತ್ತಿರುವ ಶಸ್ತ್ರಗಳಿಂದಲೂ, ಗು ರಾಣಿಗಳಿಂದಲೂ, ಯುದ್ಧಕವಚಗಳಿಂದಲೂ, ಆನೆ, ಕುದರೆ, ಮೊದಲಾದ ಚತುರಂಗಸೈನ್ಯಗಳ ಭೂಷಣಗಳಿಂದಲೂ ಮೇಲೆಹೊರಟು ಪ್ರಸರಿಸು ತಿರುವ ಕಾಂತಿಯು, ನಾನಾವರ್ಣಗಳಿಂದ ಆಕಾಶದಲ್ಲಿ ವ್ಯಾಪಿಸಿ, ದೊಡ್ಡ ಕಾಡಿನಲ್ಲಿ ಹಬ್ಬಿ ಬೆಳೆದ ಕಾಡುಗಿಚ್ಚು ಇಲ್ಲಿನ ಬಗೆಬಗೆಯ ಮೂಲಿಕೆಗಳ ಸಂ ಬಂಧದಿಂದ ನಾನಾವರ್ಣದ ಕಾಂತಿಯನ್ನು ಹರಡುವಂತೆ ವಿಚಿತ್ರವರ್ಣ ದಿಂದ ಕಾಣುವುದು ನೋಡು ' ಆನೆಗಳಿಗೆ ಕಟ್ಟಿದ ಗಂಟೆಗಳ ಧ್ವನಿಯನ್ನೂ,