ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೮ ಶ್ರೀಮದ್ರಾಮಾಯಣವು (ಸರ್ಗ, ೨. ದಲ್ಲಿ ಧನುರ್ಧಾರಿಯಾಗಿ ನಿಂತರೆ, ನಿನಗಿದಿರಾಗಿ ನಿಲ್ಲುವ ವೀರನು, ಈ ಮೂರುಲೋಕಗಳಲ್ಲಿಯೂ ಒಬ್ಬನಾದರೂ ಇರುವನೆಂದು ನನಗೆ ತೋರ ಲಿಲ್ಲ'ನೀನು ಈ ನಮ್ಮ ವಾನರರಮೇಲೆ ಹೊರಿಸಿದ ಕಾರಭಾರವು ಎಂದಿಗೂ ಕೆಡಲಾರದು, ಶೀಘ್ರದಲ್ಲಿಯೇ ನೀನು ಅಪಾರವಾದ ಸಮುದ್ರವನ್ನೂ ದಾ ಟವೆ!ಸೀತೆಯನ್ನೂ ನೋಡುವೆ 'ಇದುವರೆಗೆ ದುಃಖಿಸಿದುದೇ ಸಾಕು! ಇನ್ನಾ ದರೂ ಕೋಧವನ್ನ ವಲಂಬಿಸು ' ಕ್ಷತ್ರಿಯರು ನಿರುದ್ಯೋಗಿಗಳಾಗಿದ್ದ ಪಕ್ಷ ದಲ್ಲಿ ಮಂದಭಾಗ್ಯರಾಗುವರು. ಕೋಪಸ್ವಭಾವವುಳ್ಳವನನ್ನು ಕಂಡರೆ ಎಲ್ಲ ರೂ ಭಯಪಡುವರು'ಇನ್ನು ನೀನು ನಮ್ಮಲ್ಲರೊಡನೆ ಸೇರಿ ಸಮುದ್ರವನ್ನು ದಾಟುವುದಕ್ಕೆ ಉಪಾಯವೇನೆಂಬುದನ್ನು ಈಗಲೇ ನಿನ್ನ ಸೂಕ್ಷಬುದ್ದಿ ಯಿಂದ ವಿಚಾರಮಾಡು. ಈ ನಮ್ಮ ಸೇನೆಯೆಲ್ಲವೂ ಸಮುದ್ರವನ್ನು ದಾಟಿ ದಕ್ಷಣವೇ ನಮಗೆ ಜಯವು ಸಿದ್ಧವೆಂದೇ ತಿಳಿ' ಆದುದರಿಂದ ಮೊದಲು ನೀ ನು ಸೇತುಬಂಧನಕ್ಕೆ ಉಪಾಯವೇನೆಂಬುದನ್ನು ನೋಡಬೇಕು, ಈ ವಾನರ ರಲ್ಲಿ ಒಬ್ಬೊಬ್ಬರೂ ಮಹಾಶೂರರು' ಒಬ್ಬೊಬ್ಬರೂ :ಕಾಮರೂಪಿಗಳು | ಆದರೂ ಅವರು ಆಯುಧಸಹಾಯವಿಲ್ಲದೆ ಹೇಗೆ ಯುದ್ಧಮಾಡಬಲ್ಲರೆಂದು ನೀನು ಶಂಕಿಸಬೇಡ : ಕಲ್ಲುಮರಗಳಿಂದಲೇ ನಿನ್ನ ಸಮಸ್ತಶತ್ರುಗಳನ್ನೂ ಧ್ವಂಸಮಾಡಬಲ್ಲರು ' ನಾವು ಹೇಗಾದರೂ ಪ್ರಯತ್ನ ಪಟ್ಟು ಆ ಸಮುದ್ರ ವನ್ನು ಮಾತ್ರ ದಾಟಿಬಿಟ್ಟರೆ, ರಾವಣನು ಯುಜ್ಯದಲ್ಲಿ ಸತ್ತಂತೆಯೇ ನಾನು ನಿಶ್ ಯಿಸಿರುವೆನು ಎಲೆ ಯುದೊತ್ತುಕನೆ! ಇನ್ನು ಹೆಚ್ಚಾಗಿ ಹೇಳುವುದ ರಿಂದೇನು? ಸರೈ ಪ್ರಕಾರದಿಂದಲೂ 'ನಿನಗೆ ಜಯವು ಸಿದ್ದವು ನನಗೆ ಆಗಲೇ ಶುಭನಿಮಿತ್ತಗಳೂ ತೋರುತ್ತಿರುವುವು ಮತ್ತು ಈಗ ನನ್ನ ಮನಸ್ಸಿನ ಹರ್ಷ ವೇ ಮುಂದಿನ ಜಯವನ್ನು ಸೂಚಿಸುತ್ತಿರುವುದು.” ಎಂದನು. *ಇಲ್ಲಿಗೆ ಎ ರಡನೆಯ ಸರ್ಗವು.

  • ಈ ಸರ್ಗದಲ್ಲಿ ರಾಮನು ಲೋಕೇಶ್ವರನಾದ ಮನುಷ್ಯಭಾವವನ್ನನುಸರಿಸಿ, (“ಸಮುದ್ರವನ್ನು ದಾಟುವ ಬಗೆಯೇ” ನೆಂದು ದುಃಖಿಸಿದುದೂ, ಅದಕ್ಕಾಗಿ ಸುಗ್ರೀ ವನು ಸಮಾಧಾನಹೇಳಿ ಧೈರವನ್ನು ಪದೇಶಿಸಿದುದೂ, ಅದರಮೇಲೆ ರಾಮನು ಧೈರವ ನ್ನು ಹೊಂದಿ, ಮುಂದೆ ಹನುಮಂತನನ್ನು ಕುರಿತು ತನ್ನ ಶತ್ರುವಿನ ದುರ್ಗರಹ ಕ್ಯಾದಿಗಳನ್ನು ಕೇಳಿದುದೂ, ಲೋಕಕ್ಕೆ ನೀತಿಯನ್ನುಪದೇಶಿಸುವುದಕ್ಕಾಗಿಯೇಹೊರ ತು ಬೇರೆಯಲ್ಲವೆಂದು ತಿಳಿಯಬೇಕು.