ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೦೩ ಸರ್ಗ ೩೪ ] ಯುದ್ಧಕಾಂಡವು ಈ ಮಹಾಸಮುದ್ರವನ್ನು ಹಾರಿಬಂದೀತು ಇಲ್ಲಿ ಸೀತೆಯನ್ನೂ ನೋಡಿತು ಯುದ್ಧದಲ್ಲಿ ತಾನು ಏಕಾಕಿಯಾಗಿ ನಿಂತು, ನಮ್ಮ ಕಡೆಯ ರಾಕ್ಷಸರೆಲ್ಲರ ನ್ಯೂ ಧ್ವಂಸ ಮಾಡಿತು ಇದಕ್ಕಿಂತಲೂ ನಿನಗೆ ಬೇರ ನಿವರ್ಶನವೇಕ' ಕೇವ ಲಮನುಷ್ಯ ಮಾತ್ರನಾದ ಬೇರೆ ಯಾವನು ತಾನೇ ಇಷ್ಟು ಕೆಲಸಗಳನ್ನು ಮಾಡಬಲ್ಲನು ? ಆದುದರಿಂದ, ರಾಮನನೂ, ಅವನ ಕಡೆಯವರನ್ನೂ ಸೀ ನು ಸಾಮಾನ್ಯರೆಂದೆಣಿಸಬೇಡ” ಎಂದು ಅನೇಕವಿಧದಿಂದ ಬೋಧಿಸಿದರು ಹಾಗೆಯೇ ಇನ್ನೂ ಅನೇಕಮಂತ್ರಿವೃದ್ದರೂ ಅವನಿಗೆ ಬುದ್ದಿವಾದಗಳನ್ನು ಹೇಳಿದರು ಎಲೆ ದೇವಿ ' ಏನಾದರೇನು ? ಹಣದಾಸಯುಳ್ಳವನು ತನ್ನ ಪ್ರಾಣವನ್ನಾ ದರೂ ಬಿಡುವನೆಂಕೊರತು ಹಣವನ್ನು ಬಿಡಲಾರನಲ್ಲವೆ ? ಹಾಗೆಯೇ ರಾವಣನು ನಿನ್ನನ್ನು ಬಿಡುವುದಕ್ಕೂಪ್ಪಲಿ ಫತುಕನಾದ ಆ ರಾವಣನು ಯುದ್ಧದಲ್ಲಿ ತಾನು ಸತ್ತರೆ ನಿನ್ನನ್ನು ಬಿಡುವುದಿಲ್ಲವೆಂದು ತನ್ನ ಮಂತ್ರಿಗಳೊಡನೆ ಸೇರಿ ಸಿಕ್ಕ ಯ ಮಾಡಿಕೊಂಡಿರುವ ಅವಸಿಗೆ ಮರಣಕ್ಕಾಗಿಯೇ ಈ ವಿಧವಾದ ದುರ್ಬುದ್ಯ ಯು ಹುಟ್ಟಿರುವುದೇ ರತು ಬೇರೆ ಯಲ್ಲ ' ಅವನನ್ನೂ ಅವನ ಕಡೆಯ ರಾಕ್ಷಸರನ್ನೂ ಯುದ್ಧದಲ್ಲಿ ಕೊಂದಲ್ಲದೆ ಕೇವಲಭ್ಯಕ್ಕಾಗಿ ನಿನ್ನನ್ನು ಬಿಟ್ಟುಬಿಡುವವನಲ್ಲ ಎಲೆ ಸೀತೆ | ನೀನು ಚಿಂತಿಸಬೇಡ ' ನಿನ್ನ ಪತಿಯಾದ ರಾಮನು ಮುಂದಿನ ಯುದ್ಧದಲ್ಲಿ ತನ್ನ ತೀಕ್ಷಬಾಇಗಳಿಂದ ತಪ್ಪದೆ ರಾವಣನನ್ನು ಕೊಂದು, ನಿನ್ನನ್ನು ತನ್ನೊ ಡನೆ ಅಯೋಧ್ಯೆಗೆ ಕರೆದುಕೊಂಡು ಹೋಗುವನು. ಈ ಶಭದಯವ ನ್ನು ಈ ನಿನ್ನ ನೇತ್ರಸೌಭಾಗ್ಯವೇ ಸೂಚಿಸುತ್ತಿರುವುದು” ಎಂದಳು ಸರ ಮಯು ಈ ಮಾತನ್ನು ಹೇಳಿ ಮುಗಿಸುವಷ್ಟರಲ್ಲಿಯೇ, ಈ ಶುಭವಾಕ್ಯಕ್ಕೆ ಉಪಶ್ರುತಿಯಂತೆ ಅತ್ತಲಾಗಿ ವಾನರಸೈನ್ಯಗಳ ಸಿಂಹನಾದವೂ, ಅಲ್ಲಿನ ಭೇರೀ ಶಂಖಾರಿವಾದ್ಯಧ್ವನಿಗಳೂ, ಭೂಮಿಯನ್ನೇ ನಡುಗಿಸುವಂತೆ ಕೇಳಿ ಸಿತು ಲಂಕೆಯಲ್ಲಿದ್ದ ರಾವಣನ ಸೈನಿಕರೆಲ್ಲರೂ ಆ ವಾನರಸೈನ್ಯಗಳ ಸಿಂ ಹನಾದವನ್ನು ಕೇಳಿ ಭಯದಿಂದ ಬೆಜ್ಜರಬಿದ್ದವರಾಗಿ, ರಾವಣನ ದೋಷ ಹಿಂದ, ತಮಗೂ ಇನ್ನು ಉಳಿಗಾಲವಿಲ್ಲವೆಂದು ತಿಳಿದು, ಕಾಂತಿಗುಂದಿ ದೈ ನ್ಯದಿಂದ ತತ್ತಳಿಸುತಿದ್ದರು ಇಲ್ಲಿಗೆ ಮೂವತ್ತು ನಾಲ್ಕನೆಯ ಸರ್ಗವು.