ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಶ್ರೀಮದ್ರಾಮಾಯಣವು [ಸರ್ಗ, ೩೫. ( ರಾಮನಿಗೆ ಸೀತೆಯನೊಪ್ಪಿಸುವುದೇ ಆವಶ್ಯಕಾವ್ಯ " ವೆಂದು ಮಾಲ್ಯವಂತನು ರಾವಣನಿಗೆಬೋಧಿಸಿದುದು ; ಹೀಗೆ ವಾನರಸೈನ್ಯದಲ್ಲಿ ಶಂಖಧ್ವನಿಗಳಿಗೂ,ಭೇರೀ ಭಾಂಕಾರಗಳೂ, ತುಮುಲವಾಗಿ ಹೊರಡುತ್ತಿರುವಾಗಲೇ, ಮಹಾಬಾಹುವಾದ ರಾಮನು ಲಂಕೆಯನ್ನು ಮುತ್ತುವುದಕ್ಕಾಗಿ ಮುಂದೆ ಮುಂದೆ ಸಾಗಿ ಬರುತಿದನು ಆ ತಲಾಗಿ ಗಣಕಸೆ-ಶ್ವರನಾದ ರಾವಣನೂಕೂಡ ಈ ಕಪಿಗಳ ಕೋಲಾಹ ಲವನ್ನು ಕೇಳಿ ಚಿಂತಾಕ್ರಾಂತನಾಗಿ, ಮುಹೂರ್ತ ಕಾಲದವರೆಗೆ ತನ್ನಲ್ಲಿ ತಾ ನೇ ಆಲೋಚಿಸಿ, ತನ್ನ ಮುಂದಿದ ಮಂತ್ರಿಗಳನ್ನು ಕಣ್ಣಿಟ್ಟು ನೋಡಿದನು. ಹೀಗೆ ಮಹಾಬಲಾಢನಾದ ರಾವಣನು ತನ್ನ ದೃಷ್ಟಿ ಸಂಜ್ಞೆಯಿಂದಲೇ ಮಂತ್ರಿಗಳನ್ನು ಸಮೀಪಕ್ಕೆ ಕರೆದು, ಸಭಾಸ್ಥಾನವೆಲ್ಲವೂ ಪ್ರತಿಧ್ವನಿಸುವಂ ತೆ ಅವರನ್ನು ಹೀಗಳೆ ಯವ ಕೂರವಾಕ್ಯದಿಂದ 14 ಎಲೆ ಮಂತ್ರಿಗಳೆ 1 ಬ ಹಳ ಚೆನ್ನಾ ಯಿತು' ರಾಮನು ಸಮುದ್ರವನ್ನು ದಾಟಿ ಬಂದ ಸಾಹಸವನ್ನೂ , ಅವನ ಪರಾಕ್ರಮವನ್ನೂ, ಅವನ ಸೈನ್ಯದ ಪ್ರಾಒಲ್ಯವನ್ನೂ ನೀವು ನಿ ಮ್ಮ ಬಾಯಿಂದಲೇ ನನ್ನ ಮುಂದೆ ಹೇಳಿ ಹೇಳಿ ಕೊಂಡಾಡುತ್ತಿರುವಿರಿ' ನನ ಗೂ ಅವೆಲ್ಲವನ್ನೂ ಕೇಳಿಕೇಳಿ ಸಾಕಾಯಿತು ' ನೀವೆಲ್ಲರೂ ಯುದ್ಧದಲ್ಲಿ ಅಮೋಘಪರಾಕ್ರಮವುಳ್ಳವರೆಂಬುವನನ್ನು ನಾನು ಚೆನ್ನಾಗಿಬಲ್ಲೆನು ಹೀ ಗಿರುವಾಗಲೂ ನೀವು ಆ ರಾಮನ ಪರಾಕ್ರಮವನ್ನು ಕೇಳಿದಂದಿನಿಂದ ಎದೆಗುಂದಿ, ಒಬ್ಬರಿಗೊಬ್ಬರು ಮುಖವನ್ನು ನೋಡಿ ಕೊಳ್ಳುತ್ತ, ನಿರು ಹರಾಗಿ ಸುಮ್ಮನಿರುವುದನ್ನೂ ನಾನು ಬಲ್ಲೆನು ಹೀಗೆ ಭಯಪಡುವುದು ರಾಕ್ಷಸರಾದ ಸಿಮಗೆ ಕೇವಲ ಸ್ವರೂಪವಿರುದ್ಯವು ” ಎಂದನು ಆಗ ರಾವ ಇನ ತಾಯಿಗೆ * ಚಿಕ್ಕ ತಂದೆಯಾಗಿಯೂ, ಬಹಳ ಪ್ರಾಜ್ಞನಾಗಿಯೂ ಇ ಡ್ಡ ಮಾಲ್ಯವಂತನೆಂಬ ರಾಕ್ಷಸನು ರಾವಣನು ಹೇಳಿದ ಆ ಕರವಾಕ್ಯವ ನ್ನು ಕಳಿ ಅವನನ್ನು ಕುಂತು, 'ಎಲೆ ರಾಜನೆ ' ಯಾವ ರಾಜ್ಯಾಧಿಪತಿಯು

  • ಇಲ್ಲಿ 'ಮಾತು ಪೈ ತಾಮಸೂJಬ್ರವೀತ್” ಎಂದು ಮೂಲವು ರಾವಣನ ತಾಯಿಯಾದ ಕೈಕಸಿಯು ಸುಮಾಲಿಯೆಂಬವನ ನುಗಳು, ಈ ವಿಷಯವು ಉತ್ತರ ರಾಮಾಯಣದಲ್ಲಿ ಹೇಳಲ್ಪಡುವುದು ಈ ಮಾಲ್ಯವಂತನೆಂಬವನು ಸುಮಾರಿಯ ತಮ್ಮ ನು, ಆದುದರಿಂದ ಇಲ್ಲಿ ರಾವಣನ ತಾಯಿಯಾದ ಕೈಕಸಿಗೆ ಮಾಲ್ಯವಂತನು ಚಿಕ್ಕ