ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೦೫ ಸರ್ಗ, ೩೫.] ಯುದ್ಧಕಾಂಡವು. *ಆಕ್ಷಕಿ, ತ್ರಯಿ, ವಾರ್ತೆ, ದಂಡನೀತಿಗಳೆಂಬ ನಾಲ್ಕು ವಿದ್ಯೆಗಳಲ್ಲಿಯೂ ಚೆನ್ನಾಗಿ ಶಿಕ್ಷಿತನಾಗಿ, ನೀತಿಶಾಸ್ತ್ರವನ್ನನುಸರಿಸಿ ನಡೆದುಕೊಳ್ಳುವನೋ, ಅಂತಹ ರಾಜನೇ ಚಿರಕಾಲದವರೆಗೆ ರಾಜ್ಯವನ್ನಾಳುವನು. ಅಂತಹ ರಾಜನೆ ಶತ್ರುಗಳನ್ನೂ ಅಡಗಿಸಬಲ್ಲನು. ಯಾವರಾಜನು, ತನ್ನ ಬಲವು ಕ್ಷೀಣಿಸಿದ ಕಾಲದಲ್ಲಿ ಶತ್ರುಗಳೊಡನೆ ಸಂಧಿಯನ್ನು ಮಾಡಿಕೊಳ್ಳುತ್ತ, ತನ್ನ ಬಲವು ಹೆಚ್ಚಿರುವಕಾಲದಲ್ಲಿ ಅವರೊಡನೆ ವಿರೋಧವನ್ನು ಬೆಳೆಸಿ, ಕ್ರಮವಾಗಿ ಅವೆ ರನ್ನು ನಿಗ್ರಹಿಸಿಬಿಡುವನೋ, ಅಂತಹ ರಾಜನು ದೊಡ್ಇಶ್ವರವನ್ನ ನುಭವಿಸುವನು, ತನ್ನ ಬಲವು ಶತ್ರುಬಲಕ್ಕಿಂತಲೂ ಹೀನವಾಗಿದ್ದರಾಗಲಿ, ಶತ್ರುವು ಸಮಾನಬಲವುಳ್ಳವನಾಗಿರಾಗಲಿ, ಅಂತಹ ಶತ್ರುವೊಡನೆ ಅವಶ್ಯ ವಾಗಿ ಸಂಧಿಯನ್ನೇ ಮಾಡಿಕೊಳ್ಳಬೇಕು ಶತ್ರುವಿನ ಬಲಕ್ಕಿಂತಲೂ ತನ್ನ ಬಲವು ಹೆಚ್ಚಿದ್ದ ಪಕ್ಷದಲ್ಲಿ, ಅಂತಹ ಶತ್ರುವನ್ನು ಪೇಕ್ಷಿಸಿ ಸುಮ್ಮನಿರದೆ ಅವ ನೊಡನೆ ವೈರವನ್ನಿ ಟ್ಯುಕೂಳ್ಳಬೇಕು ಆದುದರಿಂದ ವತ್ಥ ರಾವಣಾ' ಈಗ ರಾಮನೊಡನೆ ಸೀನು ಸಂಧಿಯನ್ನು ಮಾಡಿಕೊಳ್ಳುವುದೇ ಮೇಲು ಹೇ ಗಿದ್ದರೂ ರಾಮನು ನಿನಗಿಂತಲೂ ಪ್ರಬಲನು ಈಗ ನಮಗೂ ರಾಮನಿಗೂ, ಯಾವ ಕಾರಣಕ್ಕಾಗಿ ವೈರವು ಬೆಳೆದು ಹೋಗಿರುವುದೋ ಆ ಕಾರಣವನ್ನು ಮೊದಲು ಪರಿಹರಿಸಬೇಕು ಆದುದರಿಂದ ಸೀತೆಯನ್ನು ಆತನಿಗೆ ಹಿಂತಿರುಗಿ ಕೊಟ್ಟುಬಿಡು ವಾನೋಪಾಯದಿಂದಲ್ಲದೆ ಒಲಶಾಲಿಗಳೊಡನೆ ಸಂಧಿಯು ನಡೆಯದು ಆದುದರಿಂದ ಸೀತೆಯನ್ನು ಕೊಟ್ಟುಬಿಡುವುದೇ ಈಗ ಕಾಲೋಚಿ -.- ತಂದೆಯೆಂದು ತಿಳಿಯಬೇಕು ಕಲವರು ಸೈತಾಮಹಶಬ್ದಕ್ಕೆ ತಂದೆಯೆಂದೇ ಅರಮಾ ಡುವರು ವೃದ್ರೋ ಮಾತಾಮಹೋSನೀತ” ಎಂದು ಕೆಲವು ಕಡೆಗಳಲ್ಲಿ ವಾರಾಂ ತರವೂ ಉಂಟು - ಇಲ್ಲಿ (ಆನಿ ಕಹೀಂ ತಯೀ೦ ವಾರ್ತಾ೦ ದಂಡನೀತಿ೦ಚ ಪಾರಿವಃ | ತದಿ_ದಿ. ಸಕ್ಕಿ ಯೋರೇತ್ಯಂತ ಯೆದ್ವಿನಮಾ ತ || ಆಕ್ಷಕ್ಯಾತ್ಮ ವಿಜ್ಞಾನಂ ಧಮ್ಮಾ ಧರ್‌ ತಯಿಸ್ಸಿತ ಅಲ್ಫಾನತುವಾರ್ತಾಯಾಂ ದಂಡನೀತ್ಯಾಂನಯಾನಯ್ಯ। ವಿದ್ಯಾಶ್ತಸ್ರ ಏವೈತಾ ಯೋಗಕ್ಷೇಮಾಯ ದೇಹಿನಾಂ | ವಿದ್ಯಾ ವಿನೀತೋ ನೃಪತಿರ್ವ ಕೃಛೇಷ್ಯವಸೀದತಿ|”ಎಂಬಕಾಮಂದಕನೀತಿವಚನಗಳನ್ನು ಅನುಸಂಧಿಸಿಕೊಳ್ಳಬೇಕು