ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೩೫ ] ಯುದ್ಧಕಾಂಡವು. ೨೩೦೯ ಗರ್ಭದಿಂದ ಕತ್ತೆಯ ಮರಿಗಳು ಹುಟ್ಟುತ್ತಿರುವುವು ಹೆಗ್ಗಣಗಳು ಮುಂಗಿಸಿ ಗಳೊಡನೆ ಓಲಾಡುತ್ತಿರುವುವು ಬೆಕ್ಕುಗಳು ಹುಲಿಗಳೊಡನೆಯೂ, ಹಂದಿ ಗಳು ನಾಯಿಗಳೊಡನೆಯೂ ಸೇರಿ ಕ್ರೀಡಿಸುತ್ತಿರುವುವು ಅಲ್ಲಲ್ಲಿ ಕಿನ್ನರರು ರಾಕ್ಷಸರೊಡನೆಯೂ, ರಾಕ್ಷಸರು ಅಲ್ಲಲ್ಲಿ ಉತ್ಪಾತಸೂಚಕವಾಗಿ ಜನಿಸಿದ ಮನುಷ್ಯರೊಡನೆಯೂ ಕಲೆತಿರುವರು ಬಿಳುಪು ಮತ್ತು ಕೆಂಪುಬಣ್ಣಗಳಿಂದ ಕಲೆತ ಪಾದವುಳ, ಪಾರಿವಾಳಗಳು, ಕಾಲಪ್ರೇರಿತಗಳಾಗಿ ರಾಕ್ಷಸರ ವಿನಾ ಶವನ್ನು ಸೂಚಿಸುತ್ತೆ ಅಲ್ಲಲ್ಲಿ ತಿರುಗುತ್ತಿರುವುವು. ಮನೆಗಳಲ್ಲಿ ಮುದು ಮಾತುಗಳನ್ನು ಕಲಿಸಿ ಸಾಕಿದ ಶುಕಕಾರಿಕಾದಿಪಕ್ಷಿಗಳೆಲ್ಲವೂ ಈಗ 'ವೀ ಚೀ, ಕೂಚಿ” ಎಂದು ಕೂರವಾಗಿ ಕೂಗುತ್ತಿರುವುವು ಅಲ್ಲಲ್ಲಿ ಮೃಗಪಕ್ಷಿ ಗಳು ಮೊದಲಾದ ಜಂತುಗಳು ಒಂದಕ್ಕೊಂದು ಜಗಳವಾಡಿ ಸೋತು ಪಲಾಯನಮಾಡಿದರೂ, ತಿರುಗಿ ಗುಂಪುಗೂಡಿ ಬಂದು, ಕಲಹಕ್ಕಾಗಿ ಶತ್ರು ಗಳಮೇಲೆ ನುಗ್ಗುತ್ತಿರುವುವ ಮತ್ತು ಆಗಾಗ ಸೂರೈಸಿಗಿದಿರಾಗಿ ನಿಂತು ಆರ್ತಸ್ವರದಿಂದ ಗೋಳಿಡುತ್ತಿರುವುವು ಭಯಂಕರಸ್ವರೂಪನಾಗಿಯೂ, ಅಂಗಹೀನನಾಗಿಯೂ, ಬೋಳುತಲೆಯುಳ್ಳವನಾಗಿಯೂ, ಪರುಷ ವರ್ಣ ವುಳ್ಳವನಾಗಿಯೂ ಇರುವ ಕೃಷ್ಣಪಿಂಗಳನೆಂಬ ಮೃತ್ಯುವು, ಇಲ್ಲಿನ ಸಮಸ್ತರಾಕ್ಷಸರ ಮನೆಗಳಿಗೂ ಆಗಾಗ ನುಗ್ಗಿ ನೋಡಿ ಬರುತ್ತಿರುವನು ಇವೇ ಮೊದಲಾದ ಇನ್ನೂ ಅನೇಕ ದುರ್ನಿಮಿತ್ತಗಳು ಅಲ್ಲಲ್ಲಿ ಕಾಣಿಸುತ್ತಿ ರುವುವು (ರಾವಣಾ' ಇದರಿಂದ ಈಗ ಬಂದಿರುವ ಆ ರಾಮನು ಮನುಷ್ಯರೂ ಪವನ್ನು ಧರಿಸಿದ ವಿಷ್ಣು ದೇವನೆಂದೇ ನನಗೆ ತೋರಿರುವುದು, ಅಂತಹ ಮ ಹಾಸಮುದ್ರದಲ್ಲಿಯೇ ಹಾಗೆ ಸೇತುವನ್ನು ಕಟ್ಟಿದ ದೃಢಪರಾಕ್ರಮಿಯಾದ ಆ ರಾಮನು, ಎಷ್ಟು ಮಾತ್ರ ಮನುಷ್ಯನಾಗಿರಲಾರನು ಆದುದರಿಂದ - ವತ್ಸ ರಾವಣಾ' ನರೇಂದ್ರನಾದ ಆ ರಾಮನೊಡನೆ ಸಂಧಿಯನ್ನು ಮಾಡು ) ಇವೆಲ್ಲವನ್ನೂ ಯೋಚಿಸಿ, ಮುಂದಿನ ಕಾಕ್ಯಗಳನ್ನೂ ಚೆನ್ನಾಗಿ ನಿಶ್ಚಯಿಸಿ ಕೊಂಡು, ಹೇಗೆ ಯುಕ್ತವೋ ಹಾಗೆ ನಡೆಸು” ಎಂದನು ಉತ್ತಮೋತ್ರ ಮವಾದ ಪೌರುಷವುಳ್ಳ ಆ ಮಾಲ್ಯವಂತನು, ಸಭೆಯಲ್ಲಿ ಎಲ್ಲರೂ ಕೇಳು ವಂತೆ ಈ ಮಾತುಗಳನ್ನಾಡಿ, ರಾವಣನ ಇಂಗಿತಾಕಾರಗಳನ್ನೂ ಚೆನ್ನಾಗಿ