ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೧೦ ಶ್ರೀಮದ್ರಾಮಾಯಣವು [ಸರ್ಗ, ೩೬, ನೋಡಿ, ಹೇಗೂ ಅವನು ತನ್ನ ದಾರಿಗೆ ಬಾರದುದನ್ನು ತಿಳಿದು ಸುಮ್ಮನಾ ದನು ಇಸ್ಥೆಗೆ ಮೂವತ್ತೈದನೆಯ ಸರ್ಗವು. ( ರಾವಣನು ಮಾಲ್ಯವಂತನನ್ನು ನಿಂದಿಸಿ, ತನ್ನ ಪಟ್ಟ * ಣದ ರಕ್ಷಣೆಗಾಗಿ ಸೇನೆಗಳನ್ನು ನಿಲ್ಲಿಸಿದುದು ದುಷ್ಯಾತ್ಮನಾದ ರಾವಣನು ಮೃತ್ಯುವಶನಾಗಿದ್ದುದರಿಂದ, ಮಾ ಲ್ಯವಂತನು ಹೇಳಿದ ಹಿತವಾಕ್ಯಗಳನ್ನು ಕೇಳಿ ಸಹಿಸಲಾರದೆ ಹೋದನು. ಅವನಿಗೆ ಮಿತಿಮೀರಿದ ಕೋಪಾವೇಶವೂ ಹುಟ್ಟಿತು ಹೀಗೆ ಕೊಪಪರವಶ ನಾಗಿ ಆತನು ಹಣೆಯಲ್ಲಿ ಹುಬ್ಬನ್ನು ಗಂಟಿಕ್ಕಿ ಕಣ್ಣಾಲೆಗಳನ್ನು ತಿರುಗಿ ಸುತ್ತ ಮಾಲ್ಯವಂತನನ್ನು ಕುರಿತು ( ತಾತಾ ! ಸಾಕು ಸುಮ್ಮನಿರು' ನೀನು ಶತ್ರು ಪಕ್ಷದವನೆಂದೇ ತೋರುವುದು ಅದರಿಂದಲೇ ಅವರಿಗನುಕೂಲನಾಗಿ ಮಾತಾಡುತ್ತಿರುವೆ ಹಿತವನ್ನು ಹೇಳುವೆನೆಂಬ ನೆವದಿಂದ ನನಗೆ ಅಹಿತ ವಾದ ಪರುಷವಾಕ್ಯವನ್ನೇ ಹೇಳುತ್ತಿರುವೆಯಲ್ಲಾ' ಈ ನಿನ್ನ ಮಾತೆಂದೂ ನನ್ನ ಕಿವಿಗೇರಲಾರದು ಆ ರಾಮನೆಂಬವನು ಕೇವಲಮನುಷ್ಯ ಮಾತ್ರ ನಾದುದರಿಂದ ಜಾತಿಯಿಂದಲೂ ದುರ್ಬಲನು ಇದರಮೇಲೆ ಈಗ ಬಹಳ ವಾದ ಕಷ್ಟಕ್ಕೂ ಸಿಕ್ಕಿಬಿದ್ದು ನರಳುತ್ತಿರುವುದರಿಂದ, ಸ್ವಭಾವದಿಂದಲೂ ಬಲಹೀನನು. ಬೇರೆ ಮನುಷ್ಯರ ಸಹಾಯವೂ ಇಲ್ಲದೆ ಒಂಟಿಯಾಗಿರು ವನು ಕೇವಲ ಚಪಲಸ್ವಭಾವವುಳ್ಳ ಕೆಲವ್ರ ಕಪಿಗಳನ್ನು ತನ್ನ ಸಹಾಯ ಕಾಗಿ ಆಶ್ರಯಿಸಿಕೊಂಡಿರುವನು ತಂದೆಯಿಂದ ಕಾಡಿಗಟ್ಟಲ್ಪಟ್ಟು, ರಾಜ್ಯ ಭ್ರಷ್ಟನಾಗಿ ಕಾಡುಕಾಡಾಗಿ ಸುತ್ತುತಿರುವನು ಯಾವಭಾಗದಲ್ಲಿ ನೋ 'ಡಿದರೂ ಅವನು ದುರ್ಬಲನಾಗಿರುವನು ಇಂತಹ ರಾಮನನ್ನು ಸಮರ್ಥ ನೆಂದು ಹೇಳುವೆಯಲ್ಲಾ? ಇದಕ್ಕೆ ನಿಜವಾದ ಕಾರಣವೇನು? ನನ್ನ ಮಹಾವೈ ಭವಗಳನ್ನು ಕಣ್ಣಿರಿಗೆ ನೋಡುತ್ತಿರುವಾಗಲೂ,ನನ್ನ ಸಾಮರ್ಥ್ಯದಲ್ಲಿ ನಿನಗೆ ನಂಬಿಕೆಯಿಲ್ಲದೆ ಹೋಯಿತೆ ? ರಾಕ್ಷಸರಿಗೆಲ್ಲಾ ನಾನು ರಾಜಾಧಿರಾಜನೆನಿಸಿ ಕೊಂಡಿರುವೆನು' ನನ್ನನ್ನು ನೋಡಿದಮಾತ್ರಕ್ಕೆ ಸಮಸ್ತದೇವತೆಗಳೂ ಭಯ ಪಟ್ಟುನಡುಗುವರು | ಹೇಗೆ ನೋಡಿದರೂ ಸಮಸ್ಯಭಾಗಗಳಲ್ಲಿಯೂ