ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೬.] ಯುದ್ಧಕಾಂಡವು. ೨೦೭೯ ( ರಾಮನು ಹನುಮಂತನನ್ನು ಕುರಿತು, ಲಂಕೆಯ ) ww+3 ದುರ್ಗರಹಸ್ಯಾದಿಸ್ವರೂಪಗಳನ್ನು ಕೇಳಿದುದು ( ಹನುಮಂತನು ಅವುಗಳನ್ನು ವಿವರಿಸಿದುದು, ಸಾರಜ್ಞನಾದ ರಾಮನು, ಸುಗ್ರೀವನು ಹೇಳಿದ ಯುಕ್ತಿಯುಕ್ತ ವಾದ ಮಾತನ್ನು ಕೇಳಿ, ಅವನ ಮಾತನ್ನನುಮೋದಿಸುತ್ತ, ಹಾಗಿದ್ದರೆ ಸರಿ ' ನಾವು ಹೇಗಾದರೂ ಸಮುದ್ರವನ್ನು ದಾಟಿಬಿಡಬಹುದು ! ಅದೇನೂ ಅಸಾಧ್ಯವಲ್ಲ' ನನ್ನ ತಪಶ್ಯಕ್ತಿಯಿಂದಲೋ, ಸೇತುಬಂಧನದಿಂದಲೋ, ಕೋ ನೆಗೆ ಸಮುದ್ರವನ್ನೇ ಶೋಷಿಸುವುದರಿಂದಲೋ, ಹೇಗೋ ಒಂದುವಿಧ ರಿಂದ ಆ ಸಮುದ್ರವನ್ನು ದಾಟಿಸುವುದಕ್ಕೆ ನನಗೆ ಶಕ್ತಿಯುಂಟು ! ಇನ್ನು ಈ ವಿಷಯವಾಗಿ ಚಿಂತಿಸಬೇಕಾದುದಿಲ್ಲ' ಆದರ ಮೊದಲು ಆ ಲಂಕೆಯ ವಿ ಷಯವಾಗಿ ನಾವು ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು ಎಲೆ ವಾ ಯುಪುತ್ರನೆ ' ದುರ್ಗಮವಾದ ಆ ರಾಕ್ಷಸನಗರಿಯಲ್ಲಿರ ವ ದುರ್ಗಗಳೆಷ್ಟು ? ಅಲ್ಲಿನ ಕೋಟೆಗಳೆಷ್ಟು ? ಅವೆಲ್ಲವನ್ನೂ ನನಗೆ ತಿಳಿಸು ಆನ ರಾಕ್ಷಸ ಸೈನ್ಯದ ಪರಿಮಾಣವೆಷ್ಟು ? ಆ ಲಂಕೆಯ ಬಾಗಿಲಲ್ಲಿ ಶತ್ರುಗಳ ಪ್ರವೇ ಶಕ್ಕ ಅವಕಾಶವಿಲ್ಲದಂತೆ ಮಾಡಿರುವ ರಕ್ಷಣಕ್ರಿಯೆಗಳ ರೀತಿಯೇನು ? ಪರರ ಕ್ಷಣೆಗಾಗಿ ಮಾಡಿರುವ ಕೋಟೆಕಂದಕಗಳೇ ಮೊದಲಾದ ಸನ್ನಿವೇಶಗಳ ನ್ಯೂ, ಅಲ್ಲಿನ ರಾಕ್ಷಸಗೃಹಗಳ ನಿರಾಣಕ್ರಮವನ್ನೂ ವಿವರಿಸು ' ಇವೆಲ್ಲವ ನ್ನೂ ನಾನು ನನ್ನ ಕಣ್ಣಿದಿರಾಗಿ ನೋಡಿದಂತೆ ವಿಶದವಾಗಿ ತಿಳಿಯಬೇಕಂದಿ ರುವೆನು ನೀನು ಅನಾಯಾಸವಾಗಿಯೇ ಲಂಕೆಯನ್ನು ಸುತ್ತಿ, ಅದರೊಳಗಿ ನ ಸ್ಥಿತಿಗತಿಗಳನ್ನೆಲ್ಲಾ ಚೆನ್ನಾಗಿ ನೋಡಿ ಬಂದಿರುವೆಯಷ್ಟೆ ” ಮತ್ತು ಆ ಯಾಸನ್ನಿವೇಶಗಳನ್ನು ಪರೀಕ್ಷಿಸಿ ನೋಡುವುದರಲ್ಲಿಯೂ, ಅದನ್ನು ವಿವರಿಸಿ ಹೇಳುವುದರಲ್ಲಿಯೂ ನೀನು ಬಹಳ ಸಮರ ನಾದುದರಿಂದ, ಅವೆಲ್ಲವನ್ನೂ ನ ನಗೆ ಯಥಾಸ್ಥಿತವಾಗಿ ವಿವರಿಸಿ ತಿಳಿಸಬೇಕು” ಎಂದನು ಇದನ್ನು ಕೇಳಿ ಮಾತಿ ನಲ್ಲಿ ನಿಪುಣನಾದ ಆ ಹನುಮಂತನು, ತಿರುಗಿ ರಾಮನನ್ನು ಕುರಿತು” ರಾಮಾ ! ಹಾಗಿದ್ದರೆ ಆ ಸಂಗತಿಗಳೆಲ್ಲವನ್ನೂ ವಿವರವಾಗಿ ಹೇಳುವೆನು ಕೇಳು ! ದುರ್ಗಪ್ರಾಕಾರನಿರಾಣಗಳಿಂದಲೂ, ರಾಕ್ಷಸಸೈನ್ಯಗಳಿಂದಲೂ ಆ ಲಂಕೆ ಯು ರಕ್ಷಿಸಲ್ಪಡುತ್ತಿರುವ ರೀತಿಯನ್ನೂ, ಅಲ್ಲಿನ ರಾಕ್ಷಸರಿಗೆ ತ