ಸರ್ಗ ೩೬.} ಯುದ್ದ ಕಾಂಡವು. ೨೩೧೧ ನನ್ನ ಪರಾಕ್ರಮವು ಮೇಲೆನಿಸಿರುವುದು! ಇಂತಹ ನನ್ನನ್ನು ಆ ರಾಮನಿಗಿಂ ತಲೂ ಹೀನನೆಂದೆಣಿಸುವೆಯಾ? ನಿನಗೆ ಈ ದುರಭಿಪ್ರಾಯವು ಹುಟ್ಟುವುದ ಕ್ಕೆ ನಿಜವಾದ ಕಾರಣವೇನಿರಬಹುದು ? ನಿನ್ನ ಸಜಾತೀಯರಲ್ಲಿ ನನ್ನಂತಹ ವೀರನೊಬ್ಬನಿರುವನೆಂದು ನಿನಗೆ ಮನಸ್ಸಿನಲ್ಲಿ ಪೂರ್ಣವಾದ ಅಸೂಯೆ ಯಿರಬಹುದು ಇಲ್ಲವೇ ಶತ್ರುಗಳಲ್ಲಿ ನಿನಗೆ ಪಕ್ಷಪಾತವು ಹುಟ್ಟಿರಬೆಕು ! ಅದೂ ಇಲ್ಲದಿದ್ದರೆ, ಆ ನನ್ನ ಶತ್ರುಗಳೇ ಬಂದು ನಿನ್ನನ್ನು ಪ್ರೋತ್ಸಾಹಿಸಿ, ನಿನ್ನ ಬುದ್ಧಿಯನ್ನು ಕೆಡಿಸಿರಬೇಕು! ಅದರಿಂದಲೇ ನೀನು ನನ್ನನ್ನು ಕುರಿತು ಹೀಗೆ ಪರುಷವಾಕ್ಯಗಳನ್ನಾಡಿರಬಹುದೆಂದು ನನಗೆ ಸಂದೇಹವು ತೋರಿ ರುವುದು ಶತ್ರುಗಳ ಪ್ರೋತ್ಸಾಹವಿಲ್ಲದಿದ್ದ ಪಕ್ಷದಲ್ಲಿ, ಪಂಡಿತನಾಗಿ ಯೂ, ಶಾಸ್ತ್ರತತ್ವಗಳನ್ನು ತಿಳಿದವನಾಗಿಯೂ ಇರುವ ಯಾವನು ತಾನೇ ಹೀಗೆ ಮಹಾಪ್ರಭಾವವುಳ್ಳವನಾಗಿ, ಮಹೋನ್ನ ತಪದವಿಯಲ್ಲಿರುವ ನನ್ನಂ ತಹ ಪ್ರಭುವಿನಮುಂದೆ ಈ ಪರುಷವಾಕ್ಯಗಳನ್ನಾಡುವನು ? ನೀನು ಹೇಳಿ ದುದು ಯಥಾರ್ಥವಾಗಿಯೇ ಇರಲಿ ಹಾಗಿದ್ದರೂ ನಾನು ಕಮಲಪೀರದಿಂ ಬೆಳೆದುತಂದ ಲಕ್ಷಿಯಂತೆ, ಕಾಡಿನಿಂದ ಕದ್ದು ತಂದಿರುವ ಆ “ಸೀತೆಯನ್ನು ರಾಮನಭಯಕ್ಕಾಗಿ ಈಗ ಹಿಂತಿರುಗಿ ಕೊಡುವೆನೆಂದೆಣಿಸುವೆಯಾ ? ಎಂ ದಿಗೂ ಕೊಡುವವನಲ್ಲ' ದುರ್ಲಭವಾದ ವಸ್ತುವು ಕೈಗೆ ಸಿಕ್ಕಿರುವಾಗ ಅದ ನ್ನು ಬಿಟ್ಟುಬಿಡುವೆನೆ?ಇನ್ನು ಹೆಚ್ಚು ಮಾತಿನಿಂದೇನು'ಕೆಲವು ದಿನಗಳಲ್ಲಿಯೇ ಆ ರಾಮನು ಲಕ್ಷಣಸುಗ್ರೀವರೊಡನೆಯೂ, ಅನೇಕ ವಾನರಸಮೂಹಗ ಳೊಡನೆಯೂ ಇಲ್ಲಿಗೆ ಬಂದು, ನನ್ನಿಂದ ಹತನಾಗಿ ಬೀಳುವುದನ್ನು ನಿನ್ನ ಕ ಣಾರೆ ನೀನೇ ನೋಡುವೆ'ಯಾವನೊಡನೆ,ದೇವಜಾತಿಯವರೂಕೊಡ ಧ್ವಂ ದ್ವಯುದ್ಧಕ್ಕೆ ನಿಲ್ಲಲಾರರೋ,ಅಂತಹ ರಾವಣನು ಈ ಸಾಮಾನ್ಯವಾದ ಮ ನುಷ್ಯ ಯುದ್ಧಕ್ಕೆ ಭಯಪಡುವನೆ? ತಾತಾ' ನಾನು ಹೀಗೆ ಹೇಳುವೆನೆಂದು ಕೊಪಿಸಬೇಡ' ನನ್ನಿ ಸು' ಯಾರ ಪರಾಕ್ರಮವು ಹೇಗಾದರೂ ಇರಲಿ! ನ ನ್ಯ ಸ್ವಭಾವವನ್ನು ತಿಳಿಸುವೆನು ಕೇಳು.ಇತರರಿಗೆ ನಾನುಹೆದರುವೆನೆಂಬ ಮಾ ತಸುಳ್ಳು 'ಶತ್ರುಗಳ ಕೈಯಿಂದ ಹತನಾಗಿ ಎರಡುತುಂಡಾಗಿ ಸೀಳಿಬಿದ್ದರೂ ಹಿಂದಾಗಿಬಿಳುವೆನೇ ಹೊರತು ಆಗಲೂ ಮತ್ತೊಬ್ಬರಿಗೆ ನಾನು ಬಗ್ಗುವವನ ಲ್ಲ.ಇದುನೀತಿವಿರುದ್ಧವಲ್ಲವೆ”ಎಂದು ನೀನು ಕೇಳಬಹುದು.ಇದುನನಗೆ ಸ್ವಭಾ
ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೦
ಗೋಚರ