ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೪ ಶ್ರೀಮದ್ರಾಮಾಯಣವು (ಸರ್ಗ, ೪೬, ತ್ಯ, ರಾತ್ರಿಕಾಲದ ಮೂರುಜಾವಗಳಲ್ಲಿ ಒಂದು ಜಾವದ ಕಾಲವಾದರೂ ತನ ದೇಹವನ್ನು ಹಾಸಿಗೆಯ ಮೇಲಿಡದೆ, ಆ ರಾತ್ರಿಕಾಲವನ್ನೆಲ್ಲಾ ಕೇವಲ ಜಾಗರಣೆಯಿಂದಲೇ ಕಳೆಯುತ್ತಿರುವನೋ, ಮತ್ತು ಯಾವನ ನಿಮಿತ್ತವಾಗಿ ಲಂಕೆಯ ಜನವೆಲ್ಲವೂ ವರ್ಷಕಾಲದಲ್ಲಿ ನಡೀಜಲವು ಕಲಗುವಂತೆ ವ್ಯಗ್ರ ಮನಸ್ಸುಳದಾಗಿರುವುದೋ, ಯಾವನು ನಮ್ಮೆಲ್ಲರನ್ನೂ ನಿರೂಲವಾಗಿ ನಾಶಮಾಡಬೇಕೆಂಬ ದುರುದ್ದೇಶದಿಂದ ಪ್ರಯತ್ನ ಯಾಡಿ ಇಲ್ಲಿಗೆ ಬಂದ ನೋ, ಅಂತಹ ರಾಮನನ್ನು , ಇದೋ ನಾನು ಇಲ್ಲಿ ಕೊಂದು ಕೆಡಹಿರುವೆನು ಈ ಕಾಮನೂ, ಈ ಲಕ್ಷಣನೂ, ಈ ಸಮಸ್ತವಾನರರೂ ಸೇತುಬಂಧಾ ದಿಕಾರಗಳಿಂದ ತೋರಿಸಿದ ಪರಾಕ್ರಮಗಳೆಲ್ಲವೂ ಶರತ್ಕಾಲದ ಮೇಫುಗ ಳಂತೆ ನಿಷ್ಪಲಗಳಾಗಿ ಹೋದುವು” ಎಂದನು ಹೀಗೆ ರಾವಣಪತ್ರನಾದ ಇಂದ್ರಜಿತ್ತು ತನ್ನನ್ನು ಸುತ್ತಿನಿಂತಿದ್ದ ಸಮಸ್ತರಾಕ್ಷಸರಿಗೂ ಈ ಮಾತುಗ ಛನಾ ಡಿ, ತಿರುಗಿ ತನ್ನ 'ಬಾಣಪ್ರಯೋಗಕ್ಕೆ ತೊಡಗಿ, ಈ ರಾಮಲಕ್ಷ ಣರನ್ನು ಸುತ್ತಿ ನಿಂತಿದ್ದ 'ಸುಗ್ರಿವಾದಿವಾನರಯೂಥಪತಿಗಳಮೇಲೆ ಎಡೆ ಬಿಡದೆ ಬಾಣಗಳನ್ನು ಬಿಡುತಿದ್ದನು ಸೀಲವನ್ನು ಒಂಭತ್ತು ಬಾಣಗಳಿಂದ ಹೊಡೆದನು. ಮೈಂದವಿದರಿಬ್ಬರಮೇಲೆಯೂ ಮೂರುಮೂರು ಬಾಣ ಗಳನ್ನು ಪ್ರಯೋಗಿಸಿದನು. ಜಾಂಬವಂತನ! ಎದೆಗೆ,ಗುರಿಯಿಟ್ಟು ಒಂದು ಬಾಣವನ್ನು ಬಿಟ್ಟನು. ಹನುಮಂತನಮೇಲೆ ಹತ್ತು ಬಾಣಗಳನ್ನು ಪ್ರಯೋ ಗಿಸಿದನು ಎಣೆಯಿಲ್ಲದ ತೇಜಸ್ಸುಳ್ಳ ಗವಾಕ್ಷಶರಭರೆಂಬ ವಾನರರಿಬ್ಬ ರನೂ ಎರಡೆರಡುಬಾಣಗಳಿಂದ ಹೊಡೆದನು ಗೋಲಾಂಗೂಲಾಥಿ ಪತಿಯಾದ ಗವಾಕ್ಷನಮೇಲೆ ಮತ್ತೊಮ್ಮೆ 'ಅನೇಕಬಾಣಗಳನ್ನು ಪ್ರ ಯೋಗಿಸಿದನು ಹಾಗೆಯೇ ಅಂಗದನಮೇಲೆಯೂ ಅಸಂಖ್ಯಾತಗಳಾದ ಬಾಣಗಳನ್ನು ಬಿಟ್ಟನು. ಬಲಾಡ್ಯನಾಗಿಯೂ, ಮಹಾಥೈರಶಾಲಿಯಾಗಿ ಯೂ ಇದ್ದ ಆ ಇಂದ್ರಜಿತ್ತು, ಹೀಗೆ ಆ ರಾತ್ರಿಯುದ್ಧದಲ್ಲಿ ಅಲ್ಲಿ ಸ ಮಸ್ತವಾನರರನೂ , ಅಗ್ನಿ ಜ್ವಾಲೆಗೆ ಸಮಾನಗಳಾದ ತನ್ನ ತೀಕ್ಷಬಾಣಗ ಳಿಂದ ತಡೆದು, ಸಂತೋಷದಿಂದ ಸಿಂಹನಾದವನ್ನು ಮಾಡಿದನು. ಹೀಗೆ ಮಹಾಬಾಹುವಾದ ಇಂದ್ರಜಿತ್ತು, ಸಮಸ್ಯವಾನರರನ್ನೂ ತನ್ನ ಬಾಣಸ ಮೂಹಗಳಿಂದ ಪ್ರಹರಿಸಿ, ಬಾಯಿಮಾತಿನಿಂದಲೂ ಅವರವರನ್ನು ಹೆದರಿ