ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೩ ಶ್ರೀಮದ್ರಾಮಾಯಣವು (ಸರ್ಗ, ೪೬, ಕಪಿವೀರನೆ ! ನಮಗೆ ಭಾಗ್ಯಶೇಷವಿದ್ದ ಪಕ್ಷದಲ್ಲಿ ಮಹಾತ್ಮರಾಗಿಯೂ, ಮ ಹಾಬಲಾಡ್ಯರಾಗಿಯೂ ಇರುವ ಈ ಸಹೋದರರಿಬ್ಬರೂ ಶೀಘ್ರದಲ್ಲಿಯೇ ಚೇತರಿಸಿಕೊಳ್ಳಬಹುದಲ್ಲವೆ ? ನೀನು ಧೈಲ್ಯವನ್ನು ಬಿಡಬೇಡ! ನಾನೂ ನನ್ನ ಣ್ಣನನ್ನು ' ಬಿಟ್ಟು ಈ ರಾಮನನ್ನೇ ನಂಬಿ ಬಂದವನಲ್ಲವೆ? ಈಗ ಬೇರೆಬಿಕ್ಕಿಲ್ಲ ದೆ ಅನಾಥನಾಗಿರುವ ನನಗೂ ನೀನೇ ಥೈಲ್ಯವನ್ನು ಹೇಳಬೇಕು.ಸುಗ್ರೀವಾ' ಸತ್ಯವನ್ನೂ , ಥರ ವನ್ನೂ ದೃಢವಾಗಿ ಅವಲಂಬಿಸಿರುವವರಿಗೆ ಎಂದಿಗೂ ಅಪಮೃತ್ಯುಭಯವುಂಟಾಗದು.” ಎಂದನು. ವಿಭೀಷಣನು ಹೀಗೆಂದು ಹೇಳಿ, ಅದುವರೆಗೆ ಸುಗ್ರೀವನು ಕಣ್ಣೀರನ್ನು ಸುರಿಸಿದ ಆಸ್ಟ್ರೇಲವನ್ನು ನಿವಾರಿಸು ವುದಕ್ಕಾಗಿ ಕೈಯಿಂದ ನೀರನ್ನು ತೆಗೆದುಕೊಂಡು, ಸುಗ್ರಿವನ ಕಣ್ಣುಗಳ ನೊರೆಸಿದನು, ಆಮೇಲೆ ಧರಾತನಾದ ಆ ವಿಭೀಷಣನು, ಸುಗ್ರೀವನಿಗೆ ರಾಕ್ಷಸರ ಮಾಯೆಯನ್ನು ಚೆನ್ನಾಗಿ ತೋರಿಸಿ,ಥೈಲ್ಯವನ್ನುಂಟುಮಾಡುವುದ ಕ್ಯಾಗಿ, ತಿರುಗಿ ಮತ್ತಷ್ಟು ನೀರನ್ನು ಕೈಗೆ ತೆಗೆದುಕೊಂಡು,ಮಾಯೆಯಿಂದುಂ ಟಾದ ಮೋಹವನ್ನು ನಿವಾರಿಸತಕ್ಕೆ ವಿದ್ಯೆಯಿಂದ ಆ ನೀರನ್ನಭಿಮಂತ್ರಿಸಿ, ಆಮೇಲೆ ಆ ನೀರಿನಿಂದ ಸುಗ್ರಿವನ ಕಣ್ಣುಗಳನ್ನೊರಿಸಿದನು ಹೀಗೆ ಮಂ ತ್ರಿಸಿದ ನೀರಿನಿಂದ ಸುಗ್ರೀವನ ಕಣ್ಣುಗಳನ್ನು ತೊಳೆದು, ಕಾಲೋಚಿತವಾ ದ ಮಾತಿನಿಂದ ಆತನನ್ನು ಕುರಿತು “ಎಲೈ ವಾನರ ರಾಜೇಂದ್ರನೆ ! ಆಧ್ಯ ಲ್ಯಪಡುವುದಕ್ಕೆ ಇದು ಕಾಲವಲ್ಲ ಒಂದುವೇಳೆ ನಿನಗೆ ರಾಮಲಕ್ಷ್ಮಣರಲ್ಲಿ ರುವ ಮಿತಿಮೀರಿದ ಸ್ನೇಹವು ಹೀಗೆ ಮಾಡಿರಬಹುದು, ಅಂತಹ ಆತಿಸ್ನೇಹ ಕ್ಕೂ ಇದು ಅಕಾಲವು. ಇಂತಹ ಕಾಲದಲ್ಲಿ ಅದುಕೂಡ ಮರಣಕ್ಕೆ ಕಾರ ಣವಾಗುವುದು. ಆದುದರಿಂದ ಸಮಸ್ತಕಾರಗಳನ್ನೂ ಕೆಡಿಸತಕ್ಕ ಈ ಆ ಥೈಲ್ಯವನ್ನು ಬಿಟ್ಟು, ರಾಮನನ್ನು ಮುಂದಿಟ್ಟುಕೊಂಡು ಬಂದಿರುವ ಈ ಸ ಮಸ್ತವಾನರಸೈನ್ಯಗಳಿಗೂ ಮುಂದೆ ಹಿತವಾವುದೋ ಅದನ್ನಾಲೋ ಚಿಸು, ಹಾಗಿಲ್ಲವೇ ರಾಮನು ಮೂರ್ಛತಿಳಿದು ಮೇಲಕ್ಕೆ ಏಳುವವರೆಗೂ ಅವನನ್ನು ರಕ್ಷಿಸುತ್ತಿರು, ಕಕುತ್ಸ್ಯಕುಲತಿಲಕರಾದ ಈ ರಾಮಲಕ್ಷ್ಮಣರಿ ಬೃರೂ ಮೂರ್ಛತಿಳಿದೆನ್ನೊಡನೆಯೇ ನನ್ನ ಭಯವನ್ನೆ ಲ್ಲಾ ನೀಗಿಸು ವರು. ಹೀಗೆ ನಿಶ್ಲೇಷ್ಯರಾಗಿ ಮಲಗಿರುವರು ತಿರುಗಿ ಹೇಗೆ ಚೇತರಿಸಿ ಕೊಳ್ಳಬಲ್ಲ"ರೆಂದು ಕೇಳುವೆಯಾ ? ಸುಗ್ರೀವಾ ! ಈ ಬಂಧದಿಂದ ರಾಮನಿ