ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩48 ಸರ್ಗ, ೪೬.] ಯುದ್ಧಕಾಂಡವು. ಗೇನೂ ಆಗಲಾರದು ಅವನು ಇದರಿಂದ ಮೃತಿಹೊಂದುವನೆಂಬ ಶಂಕೆಯ ನ್ನು ಬಿಟ್ಟುಬಿಡು. ಆ ರಾಮನ ಮುಖವನ್ನು ನೋಡಿದೆಯಾ? ಅವನ ಮುಖದ ಕಳೆಯು ಇನ್ನೂ ಸ್ವಲ್ಪವಾದರೂ ಕುಂದಿಲ್ಲವು ಸಾಯುವವರ ಮುಖದಲ್ಲಿ ಎಂದಿಗೂ ಈವಿಧವಾದ ಕಳೆಯಿರದು. ಆದುದರಿಂದ ಎಲೆ ವಾ ನರೇಂದ್ರನೆ' ನಿನ್ನ ಮನಸ್ಸನ್ನು ಸಮಾಧಾನದಿಂದಿರಿಸು ನಿನ್ನ ಕಡೆಯಸ್ಯೆ ನ್ಯಕ್ಕೂ ಸಮಾಧಾನವನ್ನು ಹೇಳು, ನಾನು ಮುಂದೆ ನಡೆಸಬೇಕಾದ ಕೆಲವು ಕಾಕ್ಯಗಳನ್ನು ಕ್ರಮಪಡಿಸಿ ಬರುವವರೆಗೂ ನೀನು ನಿನ್ನ ಮನಸ್ಸನ್ನು ತಡೆ ಓಡು! ಕಾವ್ಯಗಳನ್ನು ಕ್ರಮಪಡಿಸುವುದೇನೆಂದು ಕೇಳುವೆಯಾ ? ಎಲೆ ವಾನರೇಂದ್ರನೆ ! ಇದೋ ನೋಡು' ಇತಲಾಗಿ ನಿನ್ನ ಕಡೆ ಯ ಕೆಲವು ವಾ ನರರು ನಟ್ಟ ಕಣ್ಣುಗಳಿಂದ ನನ್ನನ್ನು ನೋಡುತ್ತ, ನಾನೇ ಇಂದ್ರಜಿತ್ತೆಂದು ಭ್ರಮಿಸಿ,ಭಯದಿಂದ ಪುಳಕಿತವಾದ ಮೈಯುಳ್ಳವರಾಗಿ ಇನ್ನೂ ನಾನಾವಿ ಥ ಭಯವಿಕಾರಗಳನ್ನು ತೋರಿಸುತ್ತ, ಒಬ್ಬರಕಿವಿಯಲ್ಲೊಬ್ಬರು ಪಲಾ ಯನಮಂತ್ರವನ್ನು ಪದೇಶಿಸುತ್ತಿರುವರು ಆದುದರಿಂದ ಮೊದಲು ನಾ ನು ಇವರ ಭಯವನ್ನು ನೀಗಿಸಿಬರಬೇಕು ಹಾಗಿಲ್ಲದಿದ್ದರೆ ಇವರು ನನ್ನ ನ್ನೇ ನೋಡಿ ಭಯಪಟ್ಟು ಓಡಿಹೋಗುವರು, ಮೊದಲು ಈ ವಾನರಿಗೆ ಭ ಯವನ್ನು ನೀಗಿಸಿ ಪ್ರೋತ್ಸಾಹವನ್ನು ಹುಟ್ಟಿಸಿಬರಬೇಕು ಮುಡಿದು ಬಾಡಿ ದ ಹೂಮಾಲೆಯನ್ನು ಕಿತ್ತೆಸೆಯುವಂತೆ, ಈ ವಾನರರೆಲ್ಲರೂ ತಮ್ಮ ಮನ ಸ್ಸಿನಲ್ಲಿ ಹುಟ್ಟಿರುವ ಭಯವನ್ನು ಬಿಟ್ಟೋಗೆಯುವಂತೆ ಪ್ರಯತ್ನಿ ಸುವೆನು " ಎಂದನು ಹೀಗೆ ವಿಭೀಷಣನು ಸುಗ್ರೀವನನ್ನು ಸಮಾಧಾನಪಡಿಸಿ, ಆತ್ರ ಲಾಗಿ ಭಯದಿಂದ ಓಡಿಹೋಗುತಿ ಆ ವಾನರಸೈನ್ಯಗಳನ್ನು ಮೃದುವಾ ಕ್ಯದಿಂದ ಕೂಗಿ ಕರೆಯುತ್ತ, 4 ಎಲೆ ಕಪಿವೀರರೆ ! ನಾನು ಇಂದ್ರಜಿತ್ಯ g ' ವಿಭೀಷಣನು!” ಎಂದು, ಅವರಿಗೆ ನಂಬಿಕೆಯನ್ನು ಹುಟ್ಟಿಸಿ ಪ್ರೋತ್ಸಾ ಹಿಸಿದನು ಇಷ್ಟರಲ್ಲಿ ಅತ್ಯಲಾಗಿ ಮಹಾಮಾಯಾವಿಯಾದ ಇಂದ್ರಜಿ ತು, ತನ್ನ ಸಮಸ್ತ ಸೈನ್ಯಗಳಿಂದ ಪರಿವೃತನಾಗಿ ಲಂಕೆಯನ್ನು ಪ್ರವೇಶಿಸಿ ತಂದೆಯ ಬಳಿಗೆ ಹೋದನು ಅಲ್ಲಿ ಸಭೆಯಲ್ಲಿದ್ದ ರಾವಣನಿಗೆ ಕೈಮುಗಿದು ನಮಸ್ಕರಿಸಿ, ಜನಕಾ! ನಾನು ರಾಮಲಕ್ಷ್ಮಣರಿಬ್ಬರನ್ನೂ ವಧಿಸಿ ಬಂದೆನು” ಎಂಬೀ ಪ್ರಿಯವಾರ್ತೆಯನ್ನೂ ತಿಳಿಸಿದನು. ರಾವಣನು ಆ ಸಮಸ್ತ ರಾಕ್ಷಸ