ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮೦ ಶ್ರೀಮದ್ರಾಮಾಯಣವು ಸರ್ಗ' ೩. ವಾದ ರಾವಣನಲ್ಲಿರುವ ಭಕ್ತಿಯನ್ನೂ , ರಾವಣನ ತೇಜಸ್ಸಿನಿಂದ ಲಂಕೆಗೆ ಪ್ರಾಪ್ತವಾಗಿರುವ ಅತ್ಯಂತಸಮೃದ್ಧಿಯನ್ನೂ, ಸಮುದ್ರದ ಭಯಂಕರ ಸ್ವರೂಪವನ್ನೂ, ಆ ಲಂಕೆಯಲ್ಲಿರುವ ಸೈನ್ಯಗಳ ಸಂಖ್ಯೆಯನ್ನೂ, ಅಲ್ಲಿನ ವಾಹನಸಮೃದ್ಧಿಯನ್ನೂ ಕ್ರಮವಾಗಿ ವಿವರಿಸಿ ಹೇಳುವೆನು.” ಎಂದು ಹೇಳಿ, ಅವೆಲ್ಲವನ್ನೂ ಯಥಾಸ್ಥಿತವಾಗಿ ಹೇಳತೊಡಗಿದನು. (ರಾಮಾ'! ಆ ಲಂಕೆಯ ಜನರೆಲ್ಲರೂ ಭಾಗ್ಯಸಮೃದ್ಧಿಯಿಂದ ನಿತ್ಯ ಸಂತೋಷಿಗ ಳಾಗಿರುವರು ! ಅಲ್ಲಿ ವಿಶೇಷವಾಗಿ ಮದದಾನೆಗಳು ತುಂಬಿರುವುವು. ಆ ಪಟ್ಟಣವು ಅತಿವಿಶಾಲವಾಗಿ, ಅನೇಕರಥಗಳಿಂದಲೂ, ಅಸಂಖ್ಯಾ ತಗಳಾದ ಕುದುರೆಗಳಿಂದಲೂ, ಬಹಳ ಮಂದಿ ರಾಕ್ಷಸಭಟರಿಂದಲೂ ನಿಬಿಡ ವಾಗಿರುವುದು, ಅದನ್ನು ಪ್ರವೇಶಿಸುವುದೇ ಬೇರೊಬ್ಬರಿಗೆ ಸಾಧ್ಯವಲ್ಲ ! ಆ ಪಟ್ಟಣಕ್ಕೆ ನಾಲ್ಕು ಕಡೆಗಳಲ್ಲಿಯೂ ನಾಲ್ಕು ದೊಡ್ಡ ಬಾಗಿಲುಗಳುಂ ಟು ! ಆ ಬಾಗಿಲಿನ ಕದಗಳೆಲ್ಲವೂ ಕಬ್ಬಿಣದ ಕಟ್ಟುಗಳಿಂದ ಬಹಳ ದೃಢ ವಾಗಿ ನಿರ್ಮಿಸಲ್ಪಟ್ಟಿರುವುವಲ್ಲದೆ, ಒಂದೊಂದು ಬಾಗಿಲಿಗೂ ಬಲವಾದ ಕಬ್ಬಿಣದ ಅಗುಳಿಗಳು ನಾಟಲ್ಪಟ್ಟಿರುವುವು ಒಂದೊಂದು ಬಾಗಿಲೂ ಮ ಹೊನ್ನ ತವಾಗಿರುವುದು, ಒಂದೊಂದು ಬಾಗಿಲಲ್ಲಿಯೂ ಬಾಣಗಳನ್ನೂ, ಶಿಲೆಗಳನ್ನೂ ವರ್ಷಿಸತಕ್ಕೆ ದೊಡ್ಸ್ ಯಂತ್ರಗಳನ್ನಿಟ್ಟಿರುವರು ' ಯಾವ ಶ. ತ್ರುಸೈನ್ಯವು ಬಂದರೂ ಆ ಯಂತ್ರಗಳಿಗೆ ಸಿಕ್ಕಿ ಅಲ್ಲಿಯೇ ಸಾಯುವುವು. ಮತ್ತು ಅಲ್ಲಿನ ಬಾಗಿಲುಗಳಲ್ಲಿ ವೀರರಾದ ರಾಕ್ಷಸಸೈನಿಕರು, ನೂರಾರುಕಡೆ ಗಳಲ್ಲಿ ಶತಫಿ ಗಳೆಂಬ ಉಕ್ಕಿನ ಆಯುಧಗಳನ್ನಿಟ್ಟ ಕಾಡಿರುವರು. ಚೆನ್ನಾ ಗಿ ಹದಕೊಟ್ಟು ಹರಿತವಾಗಿರುವ ಆ ಆಯುಧಗಳು ನೋಡುವಾಗಲೇ ಭ ಯವನ್ನು ಹುಟ್ಟಿಸುವುವು ಆ ಲಂಕೆಯ ಸುತ್ತಲೂ ಸುವರ್ಣಮಯವಾದ ದೊಡ್ಡ ಕೋಟೆಯಿರುವುದು ಯಾವ ಶತ್ರುಗಳಿಗೂ ಅದನ್ನೆ ರಿ ಹೋಗು ವುದು ಸಾಧ್ಯವಲ್ಲ. ಆ ಪ್ರಾಕಾರದ ಗೋಡೆಗಳಮೇಲೆ, ಅಲ್ಲಲ್ಲಿ, ವಜ್ರ, ವೈಡೂರ್, ಮುತ್ತು, ಹವಳ ಮುಂತಾದ ನವರತ್ನಗಳು ಕೆತ್ತಲ್ಪಟ್ಟಿ ರುವುವು ಆ ಕೋಟೆಯ ಸುತ್ತಲೂ, ಮಹಾಭಯಂಕರವಾಗಿಯೂ, ಅತ್ಯಂತಶೀತಲವಾದ ನೀರುಳ್ಳುದಾಗಿಯೂ, ಬಹಳ ಆಳವಾಗಿಯೂ, ಮೊ