ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩o ಶ್ರೀಮದ್ರಾಮಾಯಣನ (ಸರ್ಗ ೪೬, ಶೋಕದಿಂದ ಕೊರಗುತ್ತಿರುವ ಆ ಸೀತೆಯನ್ನು ಬಲಾತ್ಕಾರದಿಂದ ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿಕೊಂಡರು. ತ್ರಿಜಟೆಯನ್ನೂ ಪುಷ್ಟ ಕದ ಮೇಲೇರಿಸಿಕೊಂಡು, ಸೀತೆಗೆ ರಾಮಲಕ್ಷ್ಮಣರನ್ನು ತೋರಿಸುವು ದಕ್ಕಾಗಿ ರಣರಂಗಕ್ಕೆ ಕರೆತಂದರು. ಅತ್ತಲಾಗಿ ಲಂಕೆಯಲ್ಲಿ ರಾಕ್ಷಸೇಶ್ವರ ದಾದ ರಾವಣನು, ಪರಮಸಂತೋಷದಿಂದ ತನ್ನ ಪಟ್ಟಣವೆಲ್ಲವನ್ನೂ ಅ ಲಂಕರಿಸುವಂತೆ ಆಜ್ಞೆ ಮಾಡಿದನು. ಬೀದಿಬೀದಿಗಳಲ್ಲಿಯೂ ಸಾಲಾಗಿ ಧ್ವಜ ಪತಾಕೆಗಳನ್ನೆತ್ತಿಸಿದನು ಅಲ್ಲಿನ ಬೀದಿಬೀದಿಗಳಲ್ಲಿಯೂ, 'ರಾಮಲಕ್ಷ ರಿಬ್ಬರೂ ಇಂದ್ರಜಿತ್ತಿನಿಂದ ಯುದ್ಧದಲ್ಲಿ ಹತರಾದರು” ಎಂದು ಸಾರಿಸಿ ಡಂಗುರವನ್ನು ಹೊಡೆಸಿದನು ಇತ್ತಲಾಗಿ ಸೀತೆಯು ತ್ರಿಜಟೆಯೊಡನೆ ಪು ಹೃಕವಿಮಾನವನ್ನೇರಿ ಹೋಗಿ, ರಣರಂಗದಲ್ಲಿ ಅಲ್ಲಲ್ಲಿ ಸತ್ತು ಬಿದ್ದಿದ್ದ ವಾನ ರಸೈನ್ಯಗಳೆಲ್ಲವನ್ನೂ ನೋಡುತ್ತ ಬಂದಳು ಅಲ್ಲಲ್ಲಿ ರಾಕ್ಷಸರು ಮನಸ್ಸಿನಲ್ಲಿ ಮಹಾಸಂತೋಷದಿಂದುಬ್ಬಿ ಸಿಂಹನಾದಮಾಡುವುದನ್ನೂ, ವಾನರರೆಲ್ಲರೂ ರಾಮಲಕ್ಷ್ಮಣರನ್ನು ಸುತ್ತಿನಿಂತು ದುಃಖಾರ್ತರಾಗಿರುವುದನ್ನೂ ನೋಡಿ ದಳು ಕೊನೆಗೆ ಅಲ್ಲಿ ವೀರರಾದ ರಾಮಲಕ್ಷ್ಮಣರಿಬ್ಬರೂ ಬಾಣಪೀಡಿತ ರಾಗಿ ಪ್ರಜ್ಞೆಯಿಲ್ಲದೆ ಶರತಲ್ಪಗಳಲ್ಲಿ ಮಲಗಿರುವುದನ್ನೂ ಕಂಡಳು ಅವರು ಧರಿಸಿದ್ದ ಕವಚಗಳು ಭಿನ್ನ ಭಿನ್ನ ವಾಗಿ ಹರಿದು, ಅವರು ಕೈಯಲ್ಲಿ ಹಿಡಿ ಡಿದ ಬಿಲ್ಲು ಜಾರಿ ಬಿದ್ದು, ಅವರ ಸಾವಯವಗಳೂ ಬಾಣಗಳಿಂದ ಭಿನ್ನ ವಾಗಿದ್ದುವು ಹೀಗೆ ಆ ಸಹೋದರರಿಬ್ಬರೂ ಬಾಣದ ಪೊದೆಗಳಂತೆ ನೆಲದಲ್ಲಿ ಬಿದ್ದಿರುವುದನ್ನು ನೋಡಿದಳು ಕಮಲದಳದಂತೆ ಕಣ್ಣುಳ್ಳವ ರಾಗಿಯೂ, ಪರಸ್ಪರಪ್ರಿಯಸಹೋದರರಾಗಿಯೂ, ಪುರುಷಸಿಂಹರಾಗಿ ಯೂ ಇದ್ದ ರಾಮಲಕ್ಷ್ಮಣರಿಬ್ಬರೂ, ಅಗ್ನಿ ಪುತ್ರರಾದ ಸೈಂಥವಿಶಾಖ ರಂತೆ ತೇಜಸ್ಸಿನಿಂದ ಜ್ವಲಿಸುತ್ತ, ಬಾಣದ ಹಾಸಿಗೆಯಮೇಲೆ ಅಷ್ಟು ದುರ ವಸ್ಥೆಯನ್ನು ಹೊಂದಿ ಮಲಗಿರುವುದನ್ನು ಕಂಡೊಡನೆ ಸೀತೆಯ ಮನಸ್ಸು ಭೇದಿಸಿತು, ಸಂಕಟದಿಂದ ತತ್ತಳಿಸುತ್ತ ಬಹಳ ಹೊತ್ತಿನವರೆಗೆ ವಿಲಪಿಸಿದ ಳು, ನಿರ್ದೋಷವಾದ ಶುಭಲಕ್ಷಣಗಳಿಂದೊಪ್ಪವ ಆ ಜನಕಪ್ಪತ್ರಿಯು, ತ ಇ ಪತಿಯಾದ ರಾಮನೂ, ತನ್ನ ಮೈದುನನಾದ ಲಕ್ಷಣನೂ ನೆಲದ ಮ ಣ್ಣಿನಲ್ಲಿ ಬಿದ್ದಿರುವುದನ್ನು ನೋಡಿ ರೋದಿಸುವುದಕ್ಕೆ ತೊಡಗಿದಳು. ಅವಳ