ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೨ ಶ್ರೀಮದ್ರಾಮಾಯಣವು [ಸರ್ಗ ೪೮. ಸಾಮ್ರಾಜ್ಯದಲ್ಲಿ ಅಭಿಷಿಕ್ಯರಾಗುವರೆಂದು ನಾನು ಚೆನ್ನಾಗಿ ಕೇಳಿಬಿ ನು, ಇವೆಲ್ಲವೂ ನನ್ನಲ್ಲಿ ಮಾತ್ರ ನಿಷ್ಪಲಗಳಾದುದೇಕೆ' ಹಾದೈವವೆ ' ಲೋಕ ದಲ್ಲಿ ಮಂದಭಾಗ್ಯಯರಾದ ಸ್ತ್ರೀಯರು ಯಾವ ದುರ್ಲಕ್ಷಣಗಳಿದ್ದರೆ ವೈ ಧವ್ಯವನ್ನು ಹೊಂದುವರೋ, ಅಂತಹ ದುರ್ಲಕ್ಷಣಗಳು ನನ್ನ ದೇಹದಲ್ಲಿ ಎಲ್ಲಿ ಹುಡುಕಿದರೂ ಸ್ವಲ್ಪ ಮಾತ್ರವೂ ಕಾಣುವುದಿಲ್ಲ ಆದುದರಿಂದ ಈಗ ನನ್ನಲ್ಲಿ ಕಾಣುವ ಶುಭಲಕ್ಷಣಗಳೂ ನಿಷ್ಪಲಗಳೆಂದೇ ಎಣಿಸಬೇಕಾಯಿ ತಲ್ಲವೆ? ಧ್ವಜಕುಲಿಶಾದೀಶುಭಲಕ್ಷಣಗಳೊಡನೆ ಸ್ತ್ರೀಯರ ದೇಹದಲ್ಲಿ ಕಾಣು ವ ಪದ್ಯ ರೇಖೆಗಳು, ತಮ್ಮ ಹೆಸರಿಗೆ ತಕ್ಕಂತೆ ಅವರ ದೇಹದಲ್ಲಿ ಪದ್ಯೆ ಯ « (ಭಾಗ್ಯಲಕ್ಷ್ಮಿಯನ್ನೆಲ್ಲ ನೆಲೆಗೊಳಿಸುವುವೆಂದು ಲಕ್ಷಣಶಾಸ್ತ್ರಗಳೆಲ್ಲವೂ ಹೇಳುವುವು ಈಗ ರಾಮನು ಹತನಾದುದರಿಂದ ನನ್ನಲ್ಲಿ ಮಾತ್ರ ಆ ಶಾಸ ವಚನಗಳೂ ಅಸತ್ಯವೆನಿಸಿಕೊಂಡುವು ನನ್ನ ಕ್ಲಿಯಾದರೋ ಸಾ ಮುದ್ರಕ ಶಾಸ್ಕೋಕಗಳಾದ ಯಾವ ಲಕ್ಷಣಗಳಿಗೂ ಸ್ವಲ್ಪವಾದರೂ ನ್ಯೂನತೆಯಿ ಲ್ಲ ನನ್ನ ತಲೆಕೂದಲುಗಳೆಲ್ಲವೂ ಸೂಕ್ಷಗಳಾಗಿಯೂ, ಸಮವಾಗಿ ಒಂದೇ ಅಳತೆಯುಳ್ಳವುಗಳಾಗಿಯೂ, ಕಪ್ಪಾಗಿಯೂ ಇರುವುವು, ನನ್ನ ಹುಬ್ಬುಗ ಳೆರಡೂ ಒಂದಕ್ಕೊಂದು ಕೊಡಿರದೆ ಪ್ರತ್ಯೇಕವಾಗಿರುವುವು. " ನನ್ನ ಮೊಳ ಕಾಲುಗಳೆರಡೂ ಸ್ವಲ್ಪವಾದರೂ ಕೂದಲಿಲ್ಲದೆ ದುಂಡಗಿರುವುದು ನನ್ನ ಹಲ್ಲುಗಳೆಲ್ಲವೂ ದಟ್ಟವಾಗಿ ಒಂದಕ್ಕೊಂದು ಸೇರಿರುವುದೇ ಹೊರತು, ನಡು ನಡುವೆ ಸಂದುಬಿಟ್ಟು ವಿರಳವಾಗಿಲ್ಲ' ಕಣ್ಣುಗಳಿಗೆ ಸಮೀಪವಾದ ನನ್ನ ಹಣೆ ಯಶಾರ್ಶ್ವವೂ, ನನ್ನ ಕಣ್ಣುಗಳೂ, ನನ್ನ ಕೈ ಕಾಲುಗಳೂ, ನನ್ನ ಹಿಮ್ಮಡಿ ಗಳೂ, ನನ್ನ ತೊಡೆಗಳೂ ಲಕ್ಷಣಾನುಸಾರವಾಗಿ ಉಬ್ಬಿರುವುವು + ನನ್ನ ಬೆರ ಭುಗಳೆಲ್ಲವೂ ದುಂಡಗಿರುವ ಉಗುರುಗಳಿಂದ ಕೂಡಿ, ನುಣುಪಾಗಿ, ಅವ ಯವಸನ್ನಿ ವೇಶಕ್ಕೆ ತಕ್ಕ ಸಮಪ್ರಮಾಣವುಳ್ಳವುಗಳಾಗಿರುವುವು ನನ್ನ ಸ್ವ

  • ಇಲ್ಲಿ 'ರೋಮಹೀನೇ ಶುಭೇ ಸ್ನಿಗೇ ಯಜ್ಞ೦ಫೇ ಕ್ರಮವರ್ತುಲೇ 1 ಸಾ ರಾಜಪತ್ನಿ ಭವತಿ ವಿಸಿರೇ ಸುಮನೋಹರೇ” ಎಂದು ಸ್ಕಾಂದವಚನವು

↑ ಇಲ್ಲಿ 'ಗ್ಲಾಸ್‌ಮುನ್ನ ತಾಸತ್ರ ವೃತ್ತಾ: ವಾದನಖಾ ಶುಭಾ...!” ಎಂ ದು ಸ್ಮಾಂದವಚನವು