ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೭೩ ಶ್ರೀಮದ್ರಾಮಾಯಕ [ಸರ್ಗ, ೪೯. ಮಾಧಾನವಾಕ್ಯವನ್ನು ಕೇಳಿ, ಅವಳಿಗೆ ಕೈಮುಗಿಯುತ್ತ ಅಮ್ಮ ತ್ರಿಜಟೆ ! ನೀನು ಹೇಳಿದಂತೆಯೇ ಅವರು ಕ್ಷೇಮದಿಂದ ಬದುಕಿರಲಿ”ಎಂದಳು ಆಗಲೇ ತ್ರಿಜಟೆಯು ಮನೋವೇಗವುಳ್ಳ ಆ ಪುಷ್ಪಕವಿಮಾನವನ್ನು ಹಿಂತಿರುಗಿಸಿ, ದುಃಖಿತಳಾದ ಸೀತೆಯನ್ನು ಸಮಾಧಾನಪಡಿಸುತ್ತ ಲಂಕಾಪುರಿಗೆ ಕರೆತಂ ದಳು. ಅಲ್ಲಿ ರಾಕ್ಷಸಸ್ತಿಯರೆಲ್ಲರೂ ಸೀತೆಯನ್ನೂ, ತ್ರಿಜಟೆಯನ್ನೂ ಪಷ್ಟಕದಿಂದಿಳಿಸಿ ಅಶೋಕವನಕ್ಕೆ ಸೇರಿಸಿದರು ಅನೇಕ ವೃಕ್ಷಸಮೂಹಗ ಳಿಂದ ಕೂಡಿದುದಾಗಿಯೂ, ರಾವಣನಿಗೆ ಮುಖ್ಯ ವಿಹಾರೋದ್ಯಾನವಾಗಿ ಯೂ ಇದ್ದ ಅಶೋಕವನವನ್ನು ಪ್ರವೇಶಿಸಿದಮೇಲೆಯೂ ಸೀತೆಯು, ತಾ ನು ಆ ರಾಜಪುತ್ರರನ್ನು ನೋಡಿ ಬಂದ ರೀತಿಯನ್ನೇ ಮನಸ್ಸಿನಲ್ಲಿ ಚಿಂತಿಸು ತ್ಯ, ಬಹಳವಾಗಿ ದುಃಖಪಡುತಿದ್ದಳು ಇಲ್ಲಿಗೆ ನಾಲ್ವತ್ತೆಂಟನೆಯಸರ್ಗವು [ ರ« ಮನು ಸ್ವಲ್ಪವಾಗಿ ಮರ್ಲೆ ತಿಳಿದೆದ್ದು, ಲ) ಕ್ಷಣವನ್ನು ಕುರಿತು ದುಃಖಿಸಿದುದು, ಮತ್ತು ಸು ಗ್ರೀವನನ್ನು ಕಿಸಿಂದೆಗೆ ಹಿಂತಿರುಗಿ ಹೋಗುವಂತೆ | ಹೇಳಿದುದು, ವಿಭೀಷಣನು ವಾನರಸೈನ್ಯಕ್ಕೆ ಧೈಯ್ಯ ವನ್ನು ಹೇಳಿ ನಿಲ್ಲಿಸಿ, ತಿರುಗಿ ರಾಮನ ಬಳಿಗೆ * ಬಂದುದು ಭಯಂಕರಗಳಾದ ನಾಗಪಾಶಗಳಲ್ಲಿ ಕಟ್ಟುಬಿದ್ದು, ಹಾವುಗಳಂತ ನಿ ಟ್ಟುಸಿರುಬಿಡುತ್ತ, ರಕ್ತದಿಂದ ತೊಯ್ದು, ನೆಲದಲ್ಲಿ ಮಲಗಿದ್ದ ಮಹಾತ್ಮ ರಾದ ದಶರಥಕುಮಾರರನ್ನು , ಸುಗ್ರೀವನೇ ಮೊದಲಾಗಿ ಮಹಾಬಲಶಾಲಿಗ ಳಾದ ವಾನರೋತ್ತಮರೆಲ್ಲರೂ ಸುತ್ತಿನಿಂತು, ದುಃಖದಿಂದ ಕೊರಗುತಿ ದ್ಯರು, ಇಷ್ಟರಲ್ಲಿ ವೀರವಂತನಾದ ರಾಮನು ನಾಗಪಾಶದಿಂದ ಬದ್ಧ ನಾಗಿದ್ದರೂ, ಧೀರನಾದುದರಿಂದ ಸ್ವಲ್ಪ ಕಾಲದಲ್ಲಿಯೇ' ಮೂರ್ಛತಿಳಿದು ಚೇತರಿಸಿಕೊಂಡನು ಹೀಗೆ ಮೂರ್ಛ ತಿಳಿದ ರಾಮಮ, ತನ್ನ ಪಕ್ಕದಲ್ಲಿ ಬಾಣದಿಂದ ನಾದಲ್ಪಟ್ಟಮೈಯುಳ್ಳವನಾಗಿ, ರಕ್ತದಿಂದ ತೊಯ್ಯು, ಸಂ ಕಟದಿಂದ ಕಂಡಿದ ಮುಖವುಳ್ಳ ತನ್ನ ತಮ್ಮನಾದ ಲಕ್ಷ್ಮಣನನ್ನು ನೋ ಡಿ, ದು:ಖವನ್ನು ತಡೆಯಲಾರದೆ ವಿಲಪಿಸುವನು. <ಹಾ ಕಷ್ಟವೆ ! ನನ್ನ ಪ್ರಿ