ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೦ ಶ್ರೀಮದ್ರಾಮಾಯಣವು _[ಸರ್ಗ ೪೧. ರೆಗೆ ನೀನು ಬಾರದಿದ್ದುದನ್ನು ನೋಡಿ, ನಿನ್ನಲ್ಲಿರುವ ಎಣೆಯಿಲ್ಲದ ವಾತ್ಸಲ್ಯ ದಿಂದ, ನಿನಗೆ ಯಾವ ಅಪಾಯವುಂಟಾಯಿತೋ ಎಂದು ಶಂಕಿಸಿದೆನು, ಆಗ ನನಗೆ ದೊಡ್ಡ ಚಿಂತೆಯೂ ಹುಟ್ಟಿತು ನನ್ನ ಪ್ರಾಣದಮೇಲೆಯೇ ನಿರಾಶೆ ಯುಂಟಾಯಿತು ಹಾಗಿದ್ದರೂ ಮಾಡಿದ ಪ್ರತಿಜ್ಞೆಯನ್ನು ತೀರಿಸದೆ ಹೋ ಗಬಾರದಾದುರಿಂದ, ಆ ರಾವಣನನ್ನು ಅವನ ಮನೆಮಂದಿಮಕ್ಕಳೊಡನೆ ಕೊಂದು, ಶರಣಾಗತನಾದ ವಿಭೀಷಣಸಿಗೆ ಕೊಟ್ಟ ಭಾಷೆ ಯಂತೆ ಅವನಿಗೆ ಲಂಕೆಯಲ್ಲಿ ಪಟ್ಟಿ ವನ್ನೂ ಕಟ್ಟಿ, ಕುಲಧಮ್ಮವು ತಪ್ಪಿ ಹೋಗದಂತೆ ಅಯೋಧ್ಯೆ ಗೆ ಹೋಗಿ ಭರತನನ್ನೂ ರಾಜ್ಯದಲ್ಲಿ ಸ್ಥಿರವಾಗಿ ನಿಲ್ಲಿಸಿ, ಉತ್ತರಕ್ಷಣದಲ್ಲಿಯೇ ಈ ದೇಹವನ್ನು ಬಿಟ್ಟು ಬಿಡಬೇಕೆಂದೂ ಮನಸ್ಸಿನಲ್ಲಿ ನಿಶ್ಚಯಿಸಿಬಿಟ್ಟಿದ್ದೆನು.” ಎಂದನು. ಈ ಮಾತನ್ನು ಕೇಳಿ ಸುಗ್ರೀವನು, ಕಣ್ಣುಗಳಲ್ಲಿ ಆನಂದಬಾಷ್ಪ ವ ನ್ನು ಬಿಡುತ್ತ ರಾಮನನ್ನು ಕುರಿತು 'ಎಲೈ ರಘುಕುಲೋತ್ತಮನೆ ' ನಿನ್ನ ಡಿಗಳಲ್ಲಿ ದಾಸ್ಯವನ್ನು ಮಾಡಬೇಕಾದುದೇ ನನಗೆ ಪುರುಷಧವೆಂದು ಚೆ ನ್ಯಾಗಿ ತಿಳಿದಿರುವಾಗ, ಸಿನ್ನ ಭಾಗ್ಯ ಯನ್ನ ಪಹರಿಹಿಸಿದ ದುರಾತ್ಮನಾದ ಆ ರಾವಣನನ್ನು ನೋಡಿ ನಾನು ಹೇಗೆ ಸಹಿಸಬಲ್ಲೆನು? ನಾನು ಈಗ ನಡೆ ಸಿದುದು ಬಾಸ್ಯಕರ ವೇಹೊರತು ಸಾಹಸವಲ್ಲ ” ಎಂದನು ಸುಗ್ರೀವನು ಹೇಳಿದ ಈ ಮಾತನ್ನು ಕೇಳಿ ರಾಮನು ಅವನ ಭಕ್ತಿಯನ್ನ ಭಿನಂದಿಸಿ, ಆ ಮೇಲೆ ಶಿ ಮಂತನಾದ ಲಕ್ಷಣನಕಡೆಗೆ ತಿರುಗಿ, 1 ಲಕ್ಷಣಾ ನಾವು ಶೀತಲಜಲದಿಂದಲೂ, ಫಲಸಮ್ಪಯುಳ್ಳ ತೋಟಗಳಿಂದಲೂ ಕೂಡಿದ ಪ್ರದೇಶದಲ್ಲಿ, ಈ ನಮ್ಮ ಸೈನ್ಯವನ್ನು ನಿಲ್ಲಿಸಿ, ಆಯಾಯಧಪತಿಗಳಿಗೆ ಬೇರೆಬೇರೆಯಾಗಿ ಸೈನ್ಯವನ್ನೂ ಒಭಾಗಿಸಿಕೊಟ್ಟು, ಗರುಡಾರೂಪಗಳಿಂ ದ ವ್ಯೂಹವನ್ನು ಕಟ್ಟಡಬೇಕು ಇದೋ ಭಯಂಕರವಾದ ಯಾವುದೋ ಒಂದು ಭಯನಿಮಿತ್ತವು, ಇನ್ನು ಕೆಲವು ಕಾಲದಲ್ಲಿಯೇ ಸಂಭವಿಸಬಹುದೆಂ ದು ನನಗೆ ತೋರಿರುವುದು ಅದು ಲೋಕಕ್ಷಯವನ್ನೇ ಸೂಚಿಸುತ್ತಿರುವುದು. ನಮ್ಮ ವಾನರಸೈನ್ಯದಲ್ಲಿಯೂ, ಅತ್ತಲಾಗಿ ರಾಕ್ಷಸಸೈನ್ಯದಲ್ಲಿಯೂ, ಅನೇಕ ವೀರರಿಗೆ ನಾಶವುಂಟಾಗುವ ಸೂಚನೆಗಳೂ ಕಾಣುವುವು. ಇದೋ ಗಾಳಿ ಯು ಬಿರುಸಾಗಿ ಬೀಸುತ್ತಿರುವುದು, ಭೂಮಿಯು ನಡುಗುತ್ತಿರುವುದು. ಪರತಶಿಖರಗಳು ಅದಿರುತ್ತಿರುವುವು. ಇದ್ದಕ್ಕಿದ್ದಹಾಗೆ ಮರಗಳು ಮುರಿ