ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೧.] ಯುದ್ದ ಕಾಂಡವು. sa೧ ದು ಬಿಳುತ್ತಿರುವುವು, ಅದೋ! ಆಕಾಶದಲ್ಲಿ ಮೇಘಗಳು, ರಣಹದ್ದು, ಮೊ ದಲಾದ ಮಾಂಸಾಹಾರಿಪಕ್ಷಿಗಳ ಆಕಾರದಿಂದ ತೋರಿ, ಕ್ರೂರಸ್ವರೂಪವು ಇವುಗಳಾಗಿ, ಕೂರಧ್ವನಿಯಿಂದ ಮೊಳಗುತ್ತಿರುವುವಲ್ಲದೆ, ಲೋಕಕ್ಷಯ ಸೂಚಕವಾಗಿ ರಕ್ತಬಿಂದುಗಳೊಡಗೂಡಿದ ಜಲವನ್ನೂ ವರ್ಷಿಸುವುವು ನೋಡು ! ಆದೋ ! ಸಂಧ್ಯಾಕಾಲವು ರಕ್ತಚಂದನದಂತೆ ಬಹಳ ಕೆಂಪಾಗಿ ಭಯಂಕರವಾಗಿ ಕಾಣುವುದು ಸೂಕ್ಯಬಿಂಬದಿಂದ ಉರಿಯುವ ಅಗ್ನಿ ಪಿಂಡ ಗಳೇ ಬಿಳುತ್ತಿರುವುವು ತುಚ್ಚಮೃಗಗಳಾದ ನರಿ ಮೊದಲಾದುವೆಲ್ಲವೂ ಬ ಹಳದುಃಖಗೊಂಡಂತೆ ಭಯಂಕರವಾದ ದೀವಧ್ವನಿಯಿಂದ ಸಮಸ್ಯಲೋಕ ಗಳಿಗೂ ಹಾನಿಯನ್ನು ಸೂಚಿಸುತ್ತ, ಸೂಸ್ಯನಿಗಿದಿರಾಗಿ ಊಳಿಡುತ್ತಿರುವುವು. ಈ ರಾತ್ರಿಯಲ್ಲಿಯೂ ಕೂಡ ಚಂದ್ರನು ಪ್ರಕಾಶರಹಿತನಾಗಿ ತನ್ನ ಕಿರಣಗ ಳಿಂದ ಲೋಕವನ್ನು ಸಂತಾಪಪಡಿಸುತ್ತಿ"ುವನು, ಮತ್ತು ಪ್ರಳಯಕಾಲ ದಲ್ಲಿ ಹೇಗೋ ಹಾಗೆ, ಆ ಚಂದ್ರಬಿಂಬದ, ಸುತ್ತಲೂ ಕಪ್ಪು ಮತ್ತು ಕಂಪು ಬಣ್ಣಗಳಿಂದ ಕೂಡಿದ ಪರಿವೇಷವು ಕಾಣುತ್ತಿರುವು ದು ನೋಡು : ಈ ಚಂ ದ್ರನ ಪರಿವೇಷವು ಎಷ್ಟು ಭಯಂಕರವಾಗಿಯೂ, ಪ್ರಸ್ವವಾಗಿಯೂ, ಅಮಂ ಗಳಸೂಚಕವಾಗಿಯೂ, ನಡುವೆ ಬಹಳ ರಕ್ತವರ್ಣವಾಗಿಯೂ ಕಾಣು ವುದು ನೋಡಿದೆಯಾ ' ಆದೊ ! ಸೂರಬಿಂಬದಲ್ಲಿಯೂಕೂಡ, ಚಂದ್ರ ಬಿಂಬದಲ್ಲಿರುವಂತೆ ಕಪ್ಪಾದ ಕಳಂಕವೊಂದು ಕಾಣುವುದು ನೋಡು'ಲಕ್ಷ ಣಾ ! ನಕ್ಷತ್ರಗಳೆಲ್ಲವೂ ಎಂದಿನಂತಿಲ್ಲದೆ ಬಹಳಮಲಿನವಾಗಿ ಕಾಂತಿಗುಂ ದಿರುವುದನ್ನು ನೋಡಿದೆಯಾ ! ನಿಜವಾಗಿಯೂ ಈಗ ಈ ದುರ್ನಿಮಿತ್ಯಗಳೆಲ್ಲ ವೂ ಪ್ರಳಯಕಾಲವೇ ಸ ಹಿತವಾದಂತೆ ಸೂಚಿಸುತ್ತಿರುವುವು. ಆದೊ ಅಲ್ಲಲ್ಲಿ, ಕಾಗೆ, ಡೇಗೆ, ಹದ್ದು, ರಣಹದ್ದು ಮೊದಲಾದ ಪ್ರಬಲಪಕ್ಷಿಗಳೆಲ್ಲ ತೂಕೂಡ, ಸಣ್ಣ ಸಣ್ಣ ಹಕ್ಕಿಗಳಿಂದ ಪ್ರತಿಹತಗಳಾಗಿ ಕೆಳಕ್ಕೆ ಬಿಳುತ್ತಿರು ವುವು ಅಲ್ಲಲ್ಲಿ ನರಿಗಳು ಮಹಾಧ್ವನಿಯಿಂದ ಅಮಂಗಳವಾಗಿ ಊಳಿಡುತ್ತಿ ರುವುವು, ವತ್ನ ಲಕ್ಷಣಾ ' ಇನ್ನು ನಾವು ತಡಮಾಡಬಾರದು ಈಗಲೇ ನಾವು ನಮ್ಮ ವಾನರಸೈನ್ಯಗಳೆಲ್ಲವನ್ನೂ ಸೇರಿಸಿಕೊಂಡು ಇಲ್ಲಿಂದ ಹೊರ ದು, ರಾವಣನಿಂದ ರಕ್ಷಿತವಾಗಿ ದುರ್ಗಮವೆನಿಸಿಕೊಂಡ ಆ ಲಂಕೆಗೆ ಶೀಘು ದಲ್ಲಿಯೇ ಹೋಗಿ ಸೇರಬೇಕು ” ಎಂದನು. ಹೀಗೆ ವೀರನಾಗಿಯೂ, ಮ