ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೨ ಶ್ರೀಮದ್ರಾಮಾಯಣವು - [ಸರ್ಗ ೪೧ ಹಾಬಲಾಢನಾಗಿಯೂ ಇರುವ ರಾಮನು ಲಕ್ಷ್ಮಣನೊಡನೆ ಹೇಳಿ, ಆಗಲೇ ಸುವೇಲಪರೈತದ ಶಿಖರದಿಂದ ಕೆಳಕ್ಕಿಳಿದನು ಧರಾತ್ಮನಾದ ರಾಮನು ಆ ಪಕ್ವತಶಿಖರದಿಂದಿಳಿದು, “ ಅಲ್ಲಿದ್ದ ಶತ್ರು ದುರ್ಜಯವಾದ ತನ್ನ ಸಮ ಸವಾನರಸೈನ್ಯವನ್ನೂ ಒಮ್ಮೆ ಕಣ್ಣಿಟ್ಟು ನೋಡಿದನು ರಾಮನು ಕಾಲೋ ಚಿತವಾದ ಕಾವ್ಯವನ್ನು ಚೆನ್ನಾಗಿ ಬಲ್ಲವನಾದುದರಿಂದ, ಸುಗ್ರೀವನೊಡನೆ ಸೇರಿ, ಆ ಸಮಸ್ತವಾನರಸೈನ್ಯವನನ್ನಿ ಪ್ರೋತ್ಸಾಹಪಡಿಸಿ, ಅವರಿಗೆ ಇದೇ ಯುದ್ಧಕಾಲವೆಂಬುದನ್ನೂ ತಿಳಿಸಿ, ಯುದ್ಧಕ್ಕೆ ಸಿದ್ಧವಾಗಿರುವಂತೆ ಆಜ್ಞೆ ಮಾಡಿದನು. ಬೆಳಗಾದಮೇಲೆ ಮಹಾಬಾಹುವಾದ ರಾಮನು, ಕೈಯಲ್ಲಿ ಬಿಲ್ಲನ್ನು ಸಿದ್ಧವಾಗಿ ಹಿಡಿದು, ದೊಡ್ಡ ಸೇನೆಯಿಂದ ಪರಿವೃತ ನಾಗಿ, ಲಂಕಾಪುರವನ್ನು ಕುರಿತು ಮುಂದೆ ಹೊರಟನು ಒಭೀಷಣನೂ, ಸು ಗ್ರೀವನ, ಹನುಮಂತನೂ, 87ಾಂಬವಂತನೂ, ನಲನೂ, ಸುಷೇಣನೂ, (ಧೂಮ್ರ), ನೀಲನೂ, ಅಕ್ಷಣನೂ ಅವನನ್ನು ಹಿಂಬಾಲಿಸಿ ಹೊರ ವರು, ಹೀಗೆ ಮಹತ್ತಾದ ವಾನರಭಲ್ಲೂಕಸೈನ್ಯಗಳೆಲ್ಲವೂ ಗುಂಪಾಗಿ, ಆತಿ ವಿಸ್ತಾರವಾದ ಅಲ್ಲಿನ ಭೂಮಿಯಲ್ಲವನ್ನೂ ವ್ಯಾಪಿಸುವಂತೆ ರಾಮನನ್ನು ಹಿಂಬಾಲಿಸಿ ಹೋಯಿತು. ಆನೆಯಂತೆ ದೊಡ್ಡ ದೇಹವುಳ್ಳವರಾಗಿಯೂ, ಶ ತ್ರುಗಳನ್ನಿ ದಿರಿಸುವುದರಲ್ಲಿ ಸಮರ್ಥರಾಗಿಯೂ ಇದ್ದ ಸಾವಿರಾರುಮಂದಿ ವಾನರವೀರರು, ದೊಡ್ಡ ದೊಡ್ಡ ಬೆಟ್ಟದ ಶಿಖರಗಳನ್ನೂ, ದೊಡ್ಡ ದೊಡ್ಡ ಮರಗಳನ್ನೂ ಹಿಡಿದು ಹೊರಟರು. ಪರಂತಪರಾದ ರಾಮಲಕ್ಷ್ಮಣರಿಬ್ಬ ರೂ ಹೀಗೆ ದೊಡ್ಡ ಸೇನೆಯೊಡನೆ ಪ್ರಯಾಣಮಾಡಿ ಬಹಳಹೊತ್ತಿನಮೇಲೆ ರಾವಣನಗರಿಯನ್ನು ಸೇರಿದರು. ಅನೇಕಧ್ವಜಪಟಗಳ ಸಾಲಿನಿಂದ ಮನೋ ಹರವಾಗಿಯೂ, ವನೋಪವನಗಳಿಂದ ಶೋಭಿತವಾಗಿಯೂ, ವಿಚಿತ್ರವಾದ ಕೋಟೆಯುಳ್ಳುದಾಗಿಯೂ, ಇತರರಿಗೆ ದುರ್ಗಮವಾಗಿಯೂ, ಎತ್ತರವಾ ದ ತೋರಣಪ್ರಾಕಾರಗಳಿಂದ ಕೂಡಿದುದಾಗಿಯೂ, ದೇವತೆಗಳಿಗೂ ದು

  • ಇದರಿಂದ ಅಲ್ಲಿದ್ದ ಸಮಸ್ತ ವಾನರಬಲವೂ ರಾಮನ ಹಿಂದೆ ಸುವೇಲಶರತ ವನ್ನೇರದ, ಕೆಳಗೇ ನಿಂತಿದ್ದು ವೆಂದು ಗ್ರಾಹ್ಮನು.