ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

984 ಸರ್ಗ, ೪೦ } ಯುದ್ದ ಕಾಂಡವು. ರ್ಧಷ್ರವಾಗಿಯೂ ಇದ್ದ ಆ ಲಂಕಾಪುರವನ್ನು # ಸಮೀಪಿಸಿ, ವಾನರ ರೆಲ್ಲರೂ ರಾಮಾಜ್ಞೆಯನ್ನನುಸರಿಸಿ ಸೇನೆಯಲ್ಲಿ ತಮತಮಗೆ ನಿಯತವಾದ ಸ್ಥಾನವನ್ನು ಬಿಡದೆ ಸಿದ್ಧರಾಗಿದ್ದರು. ರಾಮನು ಲಕ್ಷಣಸಹಿತನಾಗಿ ಹೊ ರದು, ಪಕ್ವತಶಿಖರದಂತೆ ಮಹೋನ್ನತವಾದ ಲಂಕೆಯ ಉತ್ತರದ್ಘಾರವ ನ್ನು ಸೇರಿ, ಅಲ್ಲಿ ಧನುರ್ಧಾರಿಯಾಗಿ ತನ್ನ ಸೇನೆಯನ್ನು ರಕ್ಷಿಸುತ್ತ ಆ ಬಾಗಿಲ ನ್ನು ಮುತ್ತಿದನು ಹೀಗೆ ದಶರಥಪುತ್ರನಾದ ಆ ರಾಮನು, ಲಕ್ಷಣನಿಂ ದನುಸೃತನಾಗಿ ಹೊರಟು, ಲಂಕೆಯಲ್ಲಿ ರಾವಣನು ತಾನಾಗಿಯೇ ನಿಂತು ಎಚ್ಚರಿಕೆಯಿಂದ ರಕ್ಷಿಸುತಿದ್ದ ಉತ್ತರದ ಬಾಗಿಲನ್ನು ತಡೆದನು. ಆ ದ್ವಾರ ಪ್ರದೇಶವಾದರೋ ವರುಣನಿಂದ ರಕ್ಷಿತವಾದ ಸಮುದ್ರದಂತೆ, ಸಾಕ್ಷಾ ತ್ಯಾಗಿ ರಾವಣನಿಂದಲೇ ರಕ್ಷಿತವಾಗಿರುವುದು, ನೋಡುವಾಗಲೇ ಭಯವ ನ್ನು ಹುಟ್ಟಿಸುವುದು ಸುತ್ತಲೂ ಅನೇಕಘೋರರಾಕ್ಷಸರು ಆಯುಧಧಾರಿ ಗಳಾಗಿ ಎಚ್ಚರಿಕೆಯಿಂದ ಕಾವಲಿರುವುದರಿಂದ, ದಾನವರಿಂದ ರಕ್ಷಿತವಾದ ಪಾತಾಳವೋ ಎಂಬಂತೆ ನೋಡುವವರಿಗೆ ಮಹಾಭಯವನ್ನು ಹುಟ್ಟಿಸುತ್ತಿ ರುವುದು ಹೀಗಿರುವಾಗಲೂ ಧೈಯ್ಯದಿಂದ ಮುಂದೆ ನುಗ್ಗಿ, ಅದನ್ನು ತಡೆಯ ಬೇಕೆಂದರೆ ಲೋಕೈಕವೀರನಾದ ರಾಮನಿಗೆಹೊರತು ಬೇರೆಯಾವನಿಗೆ ಸಾಧ್ಯವು ? ರಾಮನು ಆ ದ್ವಾರವನ್ನು ಸಮೀಪಿಸಿದಾಗಲೇ ಆ ಬಾಗಿಲಿನ ಜಗುಲಿಯಮೇಲೆ ಲಾಕ್ಷಸಯೋಧರು ನಿಲ್ಲಿಸಿಟ್ಟಿದ್ದ ವಿವಿಧಾಯುಧಸಮೂ ಹಗಳನ್ನೂ, ಅನೇಕಯುದ್ದಕವಚಗಳನ್ನೂ ನೋಡಿದನು ವೀರವಂತನಾ ಗಿಯೂ, ವಾನರ ಸೇನಾಪತಿಯಾಗಿಯೂ ಇದ್ದ ನೀಲನು ಮೈಂದದ್ವಿವಿದ ರೊಡಗೂಡಿ ಉತ್ತರದ್ವಾರದಲ್ಲಿ ನಿಂತನು. ಬಹಳ ಬಲಾಢನಾದ ಅಂಗದ ನು ಋಷಭ ಗವಾಕ್ಷ ಗಜ ಗವಯರೆಂಬ ನಾಲ್ವರೊಡಗೂಡಿ ದಕ್ಷಿಣದ್ವಾರ ವನ್ನು ತಡೆದುನಿಂತನು ಬಲವಂತನಾದ ಹನುಮಂತನು ಪ್ರಮಾಥಿ ಪ್ರಫು ಸರೆಂಬವರನ್ನೂ, ವೀರರಾದ ಮತ್ತೆ ಕೆಲವು ವಾನರರನ್ನೂ, ಸಂಗಡಕರೆದು ಕೊಂಡು,ಪತ್ತೆ ಮದ್ವಾರದಲ್ಲಿ ನಿಂತನು ಸುಗ್ರೀವನು ಗರುಡನಂತೆಯೂವಾ

  • ಇಲ್ಲಿ ಸಮೀಪಿಸಿದನೆಂಬುದರಿಂದ ಸುವೇಲಪರೈತರನ್ನಿಳಿದಮೇಲೆ ತಟಶಿವ ರವನ್ನೇರಿದುದಾಗಿ ಅರಸಿದವು.