ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೪ ಒ ಶ್ರೀಮದ್ರಾಮಾಯಣವು [ಸರ್ಗ: ೪೧. ಯುವಂತೆಯೂ ಮಹಾವೇಗವುಳ್ಳ ಅನೇಕವಾನರಶ್ರೇಷ್ಠರೊಡಗೂಡಿ ಹೋ ರಟ್ಟು,ಅತ್ತಲಾಗಿ ಬಲಾಡ್ಯರಾದ ರಾವಣೇಂದ್ರಜಿತ್ಸುಗಳೊಡನೆ ಹೋರಾಡು ವುದಕ್ಕೆ ಸಿದ್ಧರಾಗಿ ಹೋಗಿರುವ ರಾಮಹನುಮಂತರಿಬ್ಬರಲ್ಲಿ ಯಾರಿಗೆ ಸಮಯಬಂದಾಗಲೂ ತಟ್ಟನೆ ಹೋಗಿ ಸಹಾಯ ಮಾಡುವುದಕ್ಕೆ ತಕ್ಕಂತೆ, ಉತ್ತರ ಪಶ್ಚಿಮದ್ವಾರಗಳ ನಡುವೆ ಗುಲ್ಮ ಸ್ಥಾನದಲ್ಲಿ ನಿಂತನು. ಬಹಳ ಪ್ರ ಖ್ಯಾತಿಹೊಂದಿದ ಯೂಥಪತಿಗಳ ಕೆಳಗೆ ಮೂವತ್ತಾರುಕೋಟಿ ವಾನರರು ಹೀಗೆ ಲಂಕಾಪುರಿಯನ್ನು ಮುತ್ತಿನಿಂತು, ಸುಗ್ರೀವನಿಗೆ ಬೆಂಬಲವಾಗಿದ್ದರು ರಾಮಾಜ್ಞೆಯಿಂದ ಲಕ್ಷಣವಿಭೀಷಣರಿಬ್ಬರೂ ಒಂದೊಂದು ದ್ವಾರದಲ್ಲಿ ಒಂದೊಂದು ಕೋಟಿವಾನರರನ್ನಿರಿಸಿದರು ರಾಮನಿದ್ದ ಕಡೆಗೆ ಪತ್ನಿ ಮದಿಕ್ಕಿನಲ್ಲಿ ಅವನಿಗೆ ಸಮೀಪವಾಗಿ ಸುಗ್ರೀವನ ಜಾಂಬವಂತನನ್ನೂ ತನ್ನ ಸಹಾಯಕಿಟ್ಟುಕೊಂಡು, ಬಹುಸೈನ್ಯ ಪರಿವೃತನಾಗಿ ಮಧ್ಯಗುಲ್ಮದಲ್ಲಿ ದನು. ಅಲ್ಲಿದ್ದ ವಾನರರೆಲ್ಲರೂ ಕೂರವಾದ ಕೆರೆಯುಳ್ಳ ಹೆಬ್ಬುಲಿಗ ಳಂತೆ, ಗಿಡಗಳನ್ನೂ, ಪತಶಿಖರಗಳನ್ನೂ ಹಿಡಿದು ಕೋಪದಿಂದ ಯುದ್ಧ ಕೈ ಕಾದಿದ್ದರು ಅವರಲ್ಲಿ ಒಬ್ಬೊಬ್ಬರೂ ಬಾಲಗಳನ್ನೆತ್ತಿಯೇ ನಿಂತಿರು ವರು ಒಬ್ಬೊಬ್ಬರೂ ತಮ್ಮ ಕೋರೆಗಳನ್ನೂ , ಉಗುರುಗಳನ್ನೂ , ಶಸ್ತ್ರಾಸ್ತ್ರ ಗಳಂತೆ ಯುದ್ಧ ಸಾಧನಗಳನ್ನಾಗಿ ಮಾಡಿಟ್ಟಿರುವರು ಒಬ್ಬೊಬ್ಬರ ಮುಖದ ಕ್ಲಿಯೂ ಕೋಪವಿಕಾರಗಳು ತೋರುತ್ತಿರುವುವು, ಒಬ್ಬೊಬ್ಬರ ಅವಯವಗ ಭೂ ವಿಚಿತ್ರವರ್ಣದಿಂದ ಘೋರರೂಪವಾಗಿ ಕಾಣುವುದು. ಒಬ್ಬೊಬ್ಬ ರೂ ಕೋಪದಿಂದ ಮುಖವನ್ನು ವಕ್ರವಾಗಿ ತಿರುಗಿಸಿ ರಾಕ್ಷಸರನ್ನು ಹೆದ ರಿಸುತ್ತಿರುವರು.ಮತ್ತು ಅವರಲ್ಲಿ,ಕೆಲವರು ಹತ್ತಾನೆಯ ಬಲವುಳ್ಳವರು, ಕೆ ಲವರು ನೂರಾನೆಯಬಲವುಳ್ಳವರು ಕೆಲವರು ಸಾವಿರಾನೆಯಬಲವುಳ್ಳವರು | ಇನ್ನು ಕೆಲವರು ಓಫುಸಂಖ್ಯಾಕಗಳಾದ ಆನೆಗಳ ಬಲವುಳ್ಳವರು' ಆದ ಕ್ಕಿಂತಲೂ ನೂರುಪಾಲು ಹೆಚ್ಚು ಬಲವುಳ್ಳವರು ಕೆಲವರು ಇಷ್ಟೊಂದು ನಿ ರಯಿಸುವುದಕ್ಕೆ ಅಸಾಧ್ಯವಾದ ಬಲವುಳ್ಳವರು ಕೆಲವರು. ಹೀಗೆ ಅನೇಕಾ ನೇಕವಾನರವೀರರು ಲಂಕೆಯನ್ನಾ ಕ್ರಮಿಸಿ ನಿಂತಿದ್ದರು.ಆ ದೊಡ್ಡ ವಾನರ ಸೈನ್ಯವು ಲಂಕೆಯಲ್ಲಿ ಗುಂಪುಕೂಡಿರುವಾಗ, ಭಯಂಕರವಾದ ಮಿಡಿತೆ ಗಳ ಗುಂಪಿನಂತೆ ಮೇಲೆಮೇಲೆ ಹೆಜ್ಜೆ ಬರುತ್ತೆ, ಆತ್ಮ ರಕರವಾಗಿ ೨ ಅ `ಬ ಬ