ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩8 ಸರ್ಗ, ೪೧.] ಯುದ್ದ ಕಾಂಡವು. ಕಾಣಿಸಿತಲ್ಲದೆ, ಕಪಿಗಳು, ಕರಡಿಗಳು, ಸಿಂಗಳೀಕಗಳೆಂಬ ಜಾತಿಭೇದದಿಂದ ವಿಚಿತ್ರವರ್ಣವುಳ್ಳುದಾಗಿತ್ತು ಮತ್ತು ಆಗ ಆಕಾಶವೆಲ್ಲವೂ ಕೇವಲಕಪಿಗಳಿಂ ದಲೇತುಂಬಿದಂತೆಯೂ,ಭೂಮಿಯು ಮುಚ್ಚಿ ಹೋದಂತೆಯೂ ಕಾಣಿಸಿತು. ಮೊದಲಿದ್ದ ಸೈನ್ಯವಲ್ಲದೆ ಪ್ರತಿಲಂಕಾದ್ವಾರದಲ್ಲಿಯೂ ಒಂದೊಂದು ಕೋ ಟಿಭಲ್ಲೂಕಸೈನ್ಯವೂ, ಕಪಿಸೈನ್ಯವೂ ಪ್ರತ್ಯೇಕವಾಗಿ ನಿಲ್ಲಿಸಲ್ಪಟ್ಟುವು. ಇನ್ನೂ ಬೇರೆ ಅನೇಕವಾನರರು ಅಲ್ಲಲ್ಲಿ ಕಾದಿದ್ದು, ಬೇಕಾದಾಗ ಮುಂದೆ ಸಹಾಯಕ್ಕೆ ಬರುವುದಕ್ಕಾಗಿ ಸಿದ್ಧವಾಗಿ ನಿಂತಿದ್ದರು ತ್ರಿಕೂಟ ಪಕ್ವತದ ಸಮಸ್ತ ಪ್ರದೇಶಗಳೂ ವಾನರರಿಂದಲೇ ವ್ಯಾಪ್ತವಾಯಿತು. ಹೀಗೆ ಲಂಕೆಯ ನಾಲ್ಕು ಬಾಗಿಲುಗಳನ್ನೂ ಆವರಿಸಿದಮೇಲೆ, ಬೇರೆ ಇನ್ನೊಂದು ಕೋಟೆವಾನರರು ಆ ಪಟ್ಟಣದಸುತ್ತಲೂ ಮುತ್ತಿನಿಂತರು ಹೀಗೆ ಬಲಾಢ ರಾದ ಅನೇಕವಾನರರು ಕೈಯಲ್ಲಿ ಕಲ್ಲುಮರಗಳನ್ನು ಹಿಡಿದು ಲಂಕೆಯ ಸುತ್ತ ಲೂ ಅವರಿಸಿ ನಿಂತಿದ್ದುದರಿಂದ, ಆ ಪಟ್ಟಣವು ಗಾಳಿಯ ಪ್ರವೇಶಕ್ಕೂ ಅವ ಕಾಶವಿಲ್ಲದಂತಾಯಿತು. ಹೀಗೆ ಮೇಫುದಂತೆ ದೇಹವುಳ್ಳವರಾಗಿಯೂ, ದೇ ವೇಂದ್ರನಂತೆ ಪರಾಕ್ರಮವುಳ್ಳವರಾಗಿಯೂ ಇದ್ದ ಅನೇಕವಾನರರು ಅಕಸ್ಮಾತ್ತಾಗಿ ಬಂದು, ಇಷ್ಟು ಶೀಘ್ರದಲ್ಲಿ ಲಂಕೆಯನ್ನು ಎಡೆಬಿಡದೆ ಮು ತಿರುವುದನ್ನು ನೋಡಿ, ಅಲ್ಲಿನ ರಾಕ್ಷಸರಿಗೆ ಅತ್ಯಾಶ್ಚರ್ಯವು ಹುಟ್ಟಿತು ಈ ವಾನರಸೈನ್ಯವು ನಾನಾ ಕಡೆಗಳಿಂದ ಬಂದು ಅಲ್ಲಲ್ಲಿಸೇರುತ್ತಿರುವಾಗ,ಅದರಿಂ ದುಂಟಾದ ಗದ್ದಲವು, ಮಹಾಸಮುದ್ರವು 5ತನ್ನ ದಡವನ್ನು ಮುರಿದು ಕೊ ಚಿ ಬರುವಾಗ ಅದರಿಂದ ಹೊರಟುಬರುವ ಜಲಪ್ರವಾಹದ ಮೊರೆತದಂತೆ ಭಯಂಕರವಾಗಿ ಕೇಳಿಸುತಿತ್ತು ಈ ಮಹಾಧ್ವನಿಗೆ ಲಂಕಾನಗರಿಯೆಲ್ಲವೂ ತನ್ನ ತೋರಣಪ್ರಾಕಾರಗಳೊಡನೆಯೂ, ಪಕ್ವತಾರಣ್ಯಗಳೊಡನೆಯೂ, ಪುರೋಪವನಗಳೊಡನೆಯೂ ಬಹಳವಾಗಿ ನಡುಗಿಹೋದಂತಾಯಿತು. ರಾ ಮಲಕ್ಷಣರಿಂದಲೂ, ಸುಗ್ರೀವನಿಂದಲೂ ರಕ್ಷಿತವಾಗಿ ಬಂದ ಆ ದೊಡ್ಡ ವಾನರಸೇನೆಯು, ದೇವಾಸುರರಿಗಾದರೂ ಇದಿರಿಸಲಸಾಧ್ಯವಾಗಿ ರುವಂತೆ ತೋರುತಿತ್ತು ಹೀಗೆ ರಾಮನು ತನ್ನ ಕಡೆಯ ಸಮಸ್ತಸೈನ್ಯವ ನ್ಯೂ ಲಂಕೆಯಲ್ಲಿ ತಂದಿಳಿಸಿ, ಮುಂದೆ ರಾಕ್ಷಸರನ್ನು ಕೊಲ್ಲುವ ವಿಷಯದ ಪ್ಲೇ ಮಾಡಬೇಕಾದ ಕಾಠ್ಯಗಳೇನೆಂದು ಮಂತ್ರಿಗಳನ್ನು ಕರೆದು ಅವರೊಡನೆ