ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩44 ಶ್ರೀಮದ್ರಾಮಾಯಣವು [ಸರ್ಗ, ೪೧, ಆಲೋಚಿಸಿದನು, ಸಾಮಾದ್ಯುಪಾಯಗಳಿಂದುಂಟಾಗುವ ಫಲವನ್ನು ಚೆ ಸ್ನಾಗಿ ಬಲ್ಲ ಆ ರಾಮನು, ಯುದ್ಧಕ್ಕೆ ಮೊದಲು ರಾಜರು ನಡೆಸಬೇ ಕಾದ ಕಾಕ್ಯವೇನೆಂಬುದನ್ನು ಯೋಚಿಸಿ, ಆ ರಾಜಧರ್ಮವನ್ನು ಮನಸ್ಸಿನಲ್ಲಿ ಸ್ಮರಿಸಿ, ಮುಂದೆ ರಾವಣನಬಳಿಗೆ ದೂತನೊಬ್ಬನನ್ನು ಕಳುಹಿಸಬೇಕಾದು ದೇ ಪ್ರಕೃತಕಾಧ್ಯವೆಂದೂ, ಅಂಗದನೇ ಆ ದೂತಕಾಕ್ಯಕ್ಕೆ ತಕ್ಕವನೆಂದೂ ನಿಶ್ಚಯಿಸಿಕೊಂಡು, ಈ ವಿಷಯದಲ್ಲಿ ವಿಭೀಷಣನ ಅನುಮತಿಯನ್ನೂ ಕೇಳಿ, ಅಂಗದನನ್ನು ಕರೆದು ಹೇಳುವನು. 'ಎಲೆ ಸೌಮ್ಯನೆ' ನೀನು ಈಗಲೇ ಲಂ ಕಾಪುರಿಯನ್ನು ಹಾರಿ, ರಾವಣನಬಳಿಗೆ ಹೋಗಿ,ಅವನಮುಂದೆ ಈಗ ನಾನು ಹೇಳುವ ಮಾತನ್ನು ಹೀಗೆಯೇ ನಿರ್ಭಯವಾಗಿ ಹೇಳು?” “ಎಲೆ ರಾಕ್ಷಸಾ | ಈಗಲೇ ಹೆಚ್ಚು ಕಡಿಮೆಯಾಗಿ, ನಿನ ಸಂಪತ್ತೆಲ್ಲವೂ ನಾಶಹೊಂದಿದಂತೆ ಯೇ ಆಗಿರುವುದು.ನಿನ್ನ ಪ್ರಭುತ್ವದ ಬಲವೂ, ತಗ್ಗಿ ಹೋದಂತೆಯ ಎಣಿಸ ಬೇಕು? ಇನ್ನು ಮೇಲೆ ನಿನಗೆ ಬದುಕುವ ಆಸೆಯೂ ತಪ್ಪಿಹೋಯಿತು ನಿನಗೆ ಸಾವು ಸಿದ್ಧವಾಗಿರುವುದು ವಿನಾಶಕಾಲಕ್ಕೆ ತಕ್ಕಂತೆ ನಿನ್ನ ಬುದ್ದಿಯೂ ಕೆಟ್ಟು ಹೋಯಿತು. ಎಲೆ ಮೂಢನೆ' ಇದುವರೆಗೂ ನೀನು ಭಾಗ್ಯಮದ ದಿಂದ ಬೀಗಿ, ದೇವ ಗಂಧರ್ವಮಹರ್ಷಿಗಳಿಗೂ, ಅಪ್ಪರಸ್ಸುಗಳಿಗೂ, ಯಕ್ಷ ಪನ್ನ ಗಾದಿಗಳಿಗೂ, ಇತರ ಕ್ಷತ್ರಿಯರಿಗೂ, ಎಷ್ಟೋದ್ರೆಹಗಳನ್ನು ಮಾ ಡಿ ಅವರನ್ನು ಗೋಳಾಡಿಸಿರುವೆ? ನೀನು ಯಾವ ಬ್ರಹ್ಮವರದ ಬಲದಿಂದ ಹೀಗೆ ಬುದ್ಧಿಗೆಟ್ಟು ಹೊರಕೃತ್ಯಗಳನ್ನು ನಡೆಸಿದೆಯೋ, ಇವಕ್ಕೆಲ್ಲಾ ಮೂಲವಾದ, ಆ ವರಬಲದಿಂದುಂಟಾದ ನಿನ್ನ ಕೆಚೂ ಕೂಡ ಇನ್ನು ಮೇಲೆ ಅಡಗಿದಂತೆಯೇ ಹೊರತು ಬೇರೆಯಲ್ಲ ಇದು ನಿಜವು. ಇದೋ ! ನಾನು ನನ್ನ ಭಾಗ್ಯಾ ಪಹರಣವನ್ನೇ ವ್ಯಾಜವಾಗಿಟ್ಟುಕೊಂಡು, ಆ ನೆಪದಿಂದಲೇ ನಿನ್ನನ್ನು ದಂಡಿಸುವುದಕ್ಕಾಗಿ ಲಂಕಾದ್ವಾರಕ್ಕೆ ಬಂದು ನಿಂತಿರು ವೆನು, ನಿನಗೆ ನಾನೇ ಈಗ ಕಾಲಯಮನೆಂದು ತಿಳಿ ? : ಹೀಗೆ ನನ್ನ ನ್ನು ದಂಡಿಸುವುದರಿಂದ ನಿನಗೆ ಬಂದ ಫಲವೇನು ? ” ಎಂದು ಕೇಳು ವೆಯಾ? ಇದರಿಂದ ನಮ್ಮಿಬ್ಬರಿಗೂ ದೊಡ್ಡ ಲಾಭವುಂಟು ನೀನು ನನ್ನಿಂದ