ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪.) ಯುದ್ದ ಕಾಂಡವು. ೨೦೩೬ ಹತನಾದರೆ, ಅದರಿಂದ ನಿನ್ನ ಪಾಪವೆಲ್ಲವೂ ನಿವೃತ್ತವಾಗಿ, ದೇವತೆಗಳೂ, ಮಹರ್ಷಿಗಳೂ, ರಾಜರ್ಷಿಗಳೂ ಹೊಂದತಕ್ಕ ಲೋಕವನ್ನೇ ನೀನೂ ಹೋಂ ದಬಹುದು ದುಷ್ಟರನ್ನು ಶಿಕ್ಷಿಸುವುದೇ ರಾಜಧರ್ಮವಾದುದರಿಂದ, ನಾನೂ ನಿನ್ನ ಅಕೃತ್ಯಕ್ಕೆ ತಕ್ಕಂತೆ ದಂಡನವನ್ನು ಮಾಡಿ ಪಾಪನಿವೃತ್ತಿಯನ್ನು ಹೊಂದಬಹುದು, ಅದರಿಂದ ಇದು ನಮ್ಮಿಬ್ಬರಿಗೂ ಶ್ರೇಯಸ್ಸಿಗೆ ಕಾರಣ ವ ಶೀಘ್ರದಲ್ಲಿ ಹೊರಗೆ ಬಂದು ನಿಲ್ಲು' ಎಲೆ ರಾಕ್ಷಸಾಥಮಾ' ಮಾರೀಚನ ಮಾಯೆಯಿಂದ ನನ್ನನ್ನು ಹೊರಕ್ಕೆ ಹೊರಡಿಸಿ, ಯಾವಭುಜಬಲವನ್ನು ನಂಬಿ ಆಗ ನೀನು ಸೀತೆಯನ್ನು ಕದ್ಭುಯ್ಯೋ, ಆ ನಿನ್ನ ಭುಜಬಲ ವೆಲ್ಲವನ್ನೂ ಈಗ ನೀನು ತೋರಿಸಬಹುದು ರಾವಣಾ ' + ಈಗಲೂ ನೀನು ನನ್ನ ಪತ್ನಿ ಯಾದ ಸೀತೆಯನ್ನು ತಂದೊಪ್ಪಿಸಿ ಶರಣಾಗತನಾದರೆ ಸರಿ ! ಹಾಗಿಲ್ಲದಿದ್ದರೆ ಇದೋ ' ಈ ನನ್ನ ತೀಕ್ಷಬಾಣಗಳಿಂದ ಲೋಕದಲ್ಲಿ ರಾಕ್ಷ ಸರ ಹುಟ್ಟೇ ಇಲ್ಲದಂತೆ ಮಾಡಿಬಿಡುವುದೇ ನಿಜವು ' ಧರ್ಮಾತ್ಮನಾಗಿಯೂ ರಾಕ್ಷಸೋತ್ತಮನಾಗಿಯೂ ಇರುವ ವಿಭೀಷಣನು ಆಗಲೇ ಬಂದು ನನ್ನಲ್ಲಿ ಶರಣಾಗತನಾಗಿರುವನು ಆನುಕೂಲ್ಯ ಸಂಪತ್ತಿಯುಳ್ಳ ಈತನಿಗೆ ಆ ಲಂಕಾ ರಾಜ್ಯವನ್ನು ನಿಷ್ಕಂಟಕವಾಗಿ ಮಾಡಿ ಒಪ್ಪಿಸಿಬಿಡುವೆನು ಇದಕ್ಕೆ ಸಂದೇಹ - * ಇಲ್ಲಿ ರಾಜಭಿರ್ವೃತದಂಡಾಸ್ತು ಕೃತಾ ಪಾಪಾನಿ ಮಾನವಾ ೩ | ಸಿರಲಾ ಸ್ವರ್ಗ ಮಾಯಾಂತಿ ಸಂತಸುಕೃತಿನೋ ಯಥಾ ರಾಜಾತಶಾಸ೯ಪಾಪಸ್ಸ ತದವಾ ಪ್ರೋತಿ ಕಿಷಂ ।” ಎಂಬಂತೆ ರಾಜದಂಡದಿಂದ ಅಪರಾಧಿಯೂ ರಾಜನೂ ಪಾಪ ನಿವೃತ್ತಿಯನ್ನು ಹೊಂದುವುದಾಗಿ ಶಾಸ್ತ್ರವಿಧಿಯು t ಚಿನ್ನವನ್ನು ಕದ್ದವನಿಗೆ ಅದನ್ನು ಹಿಂತಿರುಗಿಕೊಟ್ಟ ಹೊರತು ಪ್ರಾಯ ಶಿತ್ರಕ್ಕೆ ಅಧಿಕಾರವಿಲ್ಲವು ಹಾಗೆಯೇ ಸೀತೆಯನ್ನು ಕದ್ದ ರಾವಣನಿಗೂ ಆ ಸೀತೆಯ ನ್ನು ಹಿಂತಿರುಗಿ ಸಮರ್ಪಿಸಿದಹೊರತು ತನ್ನಲ್ಲಿ ಶರಣಾಗತಿಗೆ ಅಧಿಕಾರವಿಲ್ಲವೆಂದು ರಾ ಮನ ಭಾವವು ಮತ್ತು ಈಗಲೂ ರಾವಣನು ಶರಣಾಗತನಾದ ಪಕ್ಷದಲ್ಲಿ ವಿಭೀಷಣನಿಗೆ ಕೊಟ್ಟ ಮಾತನ್ನು ತಪ್ಪದಂತೆ ತನ್ನ ಕೋಸಲರಾಜ್ಯವನ್ನಾದರೂ ಅವನಿಗೆ ಕೊಟ್ಟು ಬಿಡುವುದಕ್ಕೆ ತಾನು ಸಿದ್ಧನಾಗಿರುವನೆಂದೂ ಭಾವವು, ಅಥವಾ ರಾವಣನು ಶರಣಾ ಗತನಾದಪಕ್ಷದಲ್ಲಿ ಅವನಿಗೆ ಪ್ರಾಣದಾನವನ್ನು ಮಾತ್ರ ಮಾಡಬಹುದೇಹೊರತು ವಿಭೀ ಷಣನಿಗೆ ಲಂಕಾರಾಜ್ಯವು ಸ್ಥಿರವೆಂದೂ ಗ್ರಹಿಸಬಹುದು.