ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೪ ಶ್ರೀಮದ್ರಾಮಾಯಣವು [ಸರ್ಗ, ೪೧. ವೇ ಇಲ್ಲ, ನೀನೋ ಧರ್ಮಶೂನ್ಯನು' ನಿನ್ನಂತೆ ಕೆಲವು ಮೂರ್ಖರನ್ನೇ ಸಹಾ ಯಕ್ಕಾಗಿ ಇಟ್ಟುಕೊಂಡಿರುವವನು, ಪಾಪಾತ್ಮನು! ಚಪಲಚಿತ್ರನು!ಇಂತಹ ನಿನಗೆ ಇನ್ನು ಮುಂದೆ ಕ್ಷಣಮಾತ್ರವಾದರೂ ಈ ಲಂಕಾರಾಜ್ಯವನ್ನ ಮಭ ವಿಸುವುದು ಶಕ್ಯವಲ್ಲ ಎಲೆ ರಾಕ್ಷಸಾ ' ಈಗಲೂ ನೀನು ಸೀತೆಯನ್ನು ತಂ ದೊಪ್ಪಿಸಿ ಶರಣಾಗತನಾಗುವಪಕ್ಷದಲ್ಲಿ ನಿನ್ನ ಪ್ರಾಣಗಳನ್ನಾ ದರೂ ಉಳಿ ಸಿಕೊಳ್ಳಬಹುದು. ಈ ಲಂಕಾರಾಜ್ಯವೇನೋ ವಿಭೀಷಣನ ಕೈಗೆ ಆಗಲೇ ಸೇರಿ ಹೋಯಿತು. ರಾವಣಾ ! ಈಗ ನೀನು ಧೈಯ್ಯದಿಂದ ಯುದ್ಧವನ್ನೇ ನಡೆಸಿದರೂ ನಡೆಸು' ಆ ಯುದ್ಧದಲ್ಲಿ ನಿನ್ನ ಶೌಲ್ಯವೆಲ್ಲವನ್ನೂ ತೋರಿಸು | ಹೇಗಿದ್ದರೂ, ಮುಂದಿನ ಯುದ್ದದಲ್ಲಿ ನೀನು ನನ್ನ ಬಾಣಗಳಿಂದ ಸತ್ತು ಬೀ ಳುವುದೇನೋ ನಿಜವು' ಹಾಗಿದ್ದರೂ ಅದರಿಂದ ನಿನಗೆ ಮೇಲೆಯೇ ಹೊರ ತು ಹಾನಿಯಿಲ್ಲ. *ನನ್ನ ಬಾಣಗಳಿಂದ ನೀನು ಹತನಾದಪಕ್ಷದಲ್ಲಿ ನಿನ್ನ ಪಾಪ ಗಳೆಲ್ಲವೂ ನೀಗಿ ಪರಿಶುದ್ಧನಾಗುವೆ ? ಹಾಗಿಲ್ಲದೆ ನೀನು ನನಗೆ ಹೆದರಿ ಪಕ್ಷಿ ಯಂತೆ ಮನೋವೇಗದಿಂದ ಮೂರುಲೋಕಗಳನ್ನು ಸುತ್ತಿದರೂ, ನನ್ನ ಕಣ್ಣಿಗೆ ಬಿದ್ದ ಮೇಲೆ, ನೀನು ಬದುಕಿ ಹೋಗುವ ಮಾತು ಸುಳ್ಳು ' ಎಲೆ ರಾವಣಾ ' ಈಗಲೂ ನಾನು ನಿನಗೆ ಒಂದು ಹಿತವನ್ನು ಹೇಳುವೆನು ಕೇ ಇು' ಇನ್ನು ಮೇಲೆ ಈ ಲೋಕದಲ್ಲಿ ಒಬ್ಬ ರಾಕ್ಷಸನನ್ನಾ ದರೂ ನಾನು ಉಳಿ ಸುವವನಲ್ಲ. ಆದುದರಿಂದ ನೀನು ಸತ್ತ ಮೇಲೆ ನಿನಗೆ ಅಪರಕ್ರಿಯೆಗಳನ್ನು ನಡೆಸುವವರೂ ಇಲ್ಲದಂತಾಗುವುದು ಆದುದರಿಂದ ಈಗ ನೀನೇ ಸಿನಗಾಗಿ ಮುಂದೆ ನಡೆಯಬೇಕಾದ ಅಪರಕ್ರಿಯೆಗಳನ್ನೂ ನಡೆಸಿಕೊಂಡುಬಿಡು' ಈಗ ಲೇ ಹೋಗಿ ನಿನ್ನ ಲಂಕೆಯನ್ನು ಮನಸ್ಸಿಪ್ತಿಯಾಗುವಂತೆ ಒಂದಾವರ್ತಿ ಚೆನ್ನಾಗಿ ನೋಡಿಯೂ ಬಂದುಬಿಡು' ಇನ್ನು ಮೇಲೆ ನೀವು ಅದನ್ನು ನೋಡ ಲಾರೆ ? ನಿನ್ನ ಪ್ರಾಣಗಳು ನನ್ನ ಕೈಯಲ್ಲಿ ಸೇರಿಹೋಗಿರುವುವು” ಎಂದು ನಾನು ಹೇಳಿದುದಾಗಿ ರಾವಣನಿಗೆ ತಿಳಿಸು” ಎಂದನು. ರಾಮನ ಬಾಯಿಂದ ಈ ಮಾತು ಬಂದೊಡನೆಯೇ ಅಂಗದನು ಆಕಾಶಕ್ಕೆ ಹಾರಿ, ಮೂರ್ತಿಮಂ • ಯುದ್ಧದಲ್ಲಿ ಹಿಂಜರಿಯದೆ ಮೃಹೊಂದುವುದು ಸರೈಪಾಪಗಳಿಗೂ ಪ್ರಾ ಹರಿತವಾದುದರಿಂದ ಹೀಗೆ ಹೇಳಿದುದಾಗಿ ತಿಳಿಯಬೇಕು.