ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೮೨ ಶ್ರೀಮದ್ರಾಮಾಯಣವು [ಸರ್ಗ, ೩ ಯವರಿಗೆ ಅಲ್ಲಿನ ವೃತ್ತಾಂತವು ತಿಳಿಯುವುದಕ್ಕೂ ಉಪಾಯವಿಲ್ಲ' ಆಮಹಾಸ ಮುದ್ರವೇ ಲಂಕೆಗೆ ಜಲದುರ್ಗಪ್ರಾಯವಾಗಿರುವುದು ದೇವಪುರದಂತಿರುವ ಆ ಲಂಕೆಯು ತ್ರಿಕೂಟಪಕ್ವತಾಗ್ರದಲ್ಲಿರುವುದರಿಂದ ಅದಕ್ಕೆ ಅದೇ ಪದ್ವ ತದು ರ್ಗವಾಗಿ, ಆನೆಕುದುರೆಗಳಿಂದ ತುಂಬಿ, ಶತ್ರುಗಳಿಗೆ ಜಯಿಸಲಸಾಧ್ಯವಾಗಿರು ವುದು, ಹೀಗೆ ಅದಕ್ಕೆ ಸಹಜವಾಗಿಯೇ ವನಪತದುರ್ಗಗಳೆರಡೂ ರಕ್ಷಕಗ ಳಾಗಿರುವುವು ದುರಾತ್ಮನಾದ ಆ ರಾವಣನ ನಗರಿಯಲ್ಲಿ ಯಾವಕಡೆಯಲ್ಲಿನೋ ಡಿದರೂ ಶತ್ರುಗಳನ್ನು ಸಂಹರಿಸತಕ್ಕೆ ಶತಪ್ಪಿ ಗಳೂ, ನಾನಾವಿಧಯಂತ್ರಗ ಛ, ಕಂದಕಗಳೂ ತುಂಬಿರುವುವಲ್ಲದೆ, ಅವೆಲ್ಲವೂ ಅದಕ್ಕೆ ಒಂದು ಅಪೂ ಧ್ವಶೋಭೆಯನ್ನೂ ಉಂಟುಮಾಡುತ್ತಿರುವುವು. ಆ ಲಂಕೆಯ ಸೂತ್ವದ್ವಾರದ ಲ್ಲಿ ಹತ್ತು ಸಾವಿರಮಂದಿ ರಾಕ್ಷಸರು ಯಾವಾಗಲೂ ಕಾವಲಿರುವರು ಒಬ್ಬೊ ರೂ ಶೂಲಗಳನ್ನು ಹಿಡಿದಿರುವರು : ಒಬ್ಬೊಬ್ಬರೂ ಖಡ್ಗ ಯುದ್ಧದಲ್ಲಿ ನಿ ಪುಣರು' ಅವರನ್ನಿ ದಿರಿಸುವುದು ಯಾರಿಗೂ ಸಾಧ್ಯವಲ್ಲ' ಅದರ ದಕ್ಷಿಣದ್ವಾರ ದಲ್ಲಿ ಚತುರಂಗಸೈನ್ಯದೊಡನೆ ಲಕ್ಷರಾಕ್ಷಸರು ಕಾದಿರುವರು' ಆ ಸೈನ್ಯಕ್ಕೆ ಸೇ ರಿದ ಪದಾತಿಗಳೇ ಲೋಕೈಕವೀರರೆನಿಸಿಕೊಂಡಿರವರು ಅದರ ಪಶ್ಚಿಮ ದ್ವಾರದಲ್ಲಿ ಹತ್ತು ಲಕ್ಷರಾಕ್ಷಸರು ಕಾವಲಾಗಿರುವರು' ಅವರಲ್ಲಿ ಒಬ್ಬೊಬ್ಬ ರೂ ಸಾಸ್ತವಿಶಾರದರಾಗಿ, ಕತ್ತಿಗಳನ್ನೂ , ಗುರಾಣಿಗಳನ್ನೂ ಹಿಡಿದು ನಿಂ ತಿರುವರು ಉತ್ತರದ್ವಾರದಲ್ಲಿ ನೂರುಕೋಟೆ ರಾಕ್ಷಸರಿರುವರು. ಅವರಲ್ಲಿ ಕೆಲವರು ರಥಿಕರಾಗಿಯೂ, ಕೆಲವರು ರಾವುತರಾಗಿಯೂ, ಕೆಲವರು ಆನೆಗಳ ಮೇಲೆ ಯುದ್ಧಮಾಡುವವರಾಗಿಯೂ ಇರುವರು, ಅವರೆಲ್ಲರೂ ಸತ್ಕುಲದಲ್ಲಿ ಹುಟ್ಟಿ, ರಾವಣನ ವಿಶ್ವಾಸಕ್ಕೂ ಗೌರವಕ್ಕೂ ಪಾತ್ರರಾಗಿರುವರು ಇದ ಲ್ಲದೆ ಆ ಲಂಕೆಯ ನಡುವೆ ಅಲ್ಲಲ್ಲಿ ಸಾವಿರಸಾವಿರವಾಗಿ ರಾಕ್ಷಸರು ಕಾವಲಿರು ವರು. ಅವರನ್ನಿ ದಿರಿಸುವುದಕ್ಕಾದರೂ ಯಾರಿಗೂ ಸಾಧ್ಯವಲ್ಲ. ಅಲ್ಲಿ ಕಾವ ಲಿರುವ ರಾಕ್ಷಸರ ಸಂಖ್ಯೆಯೆಲ್ಲವೂ ಸೇರಿ ಒಂದುಕೊಟೆಯವರೆಗೂ ಇರು ವುದು.. ರಾಮಾ ! ಆದರೇನು ? ನಾನು ಲಂಕೆಯನ್ನು ಪ್ರವೇಶಿಸಿದಾಗಲೇ ಆ ಲಂಕೆಯ ಸುತ್ತಿನ ಕಂದಕಗಳಮೇಲಿರುವ ಮರದ ಸೇತುವೆಗಳೆಲ್ಲವನ್ನೂ ಮುರಿದಿರುವೆನು, ಅಲ್ಲಿನ ಬಾಗಿಲಗುಳಿಗಳೆಲ್ಲವನ್ನೂ ಪುಡಿಮಾಡಿರುವೆನು ಆ ಲಂ