ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೪ ಸರ್ಗ, ೪.] ಯುದ್ಧಕಾಂಡವು. ತನಾದ ಆಗ್ನಿಹೋತ್ರನೋ ಎಂಬಂತೆ ತೇಜಸ್ಸಿನಿಂದ ಜ್ವಲಿಸುತ್ತ,ಲಂಕೆಯ ಕಡೆಗೆ ಹೋದನು. ಸಂತೋಷದಿಂದ ವಿಕಸಿತಕಾಂತಿಯುಳ್ಳ ಆ ಅಂಗದನು ಮುಹೂರ್ತಕಾಲದಲ್ಲಿಯೇ ರಾವಣನ ಅರಮನೆಯನ್ನು ಸೇರಿ, ಅಲ್ಲಿ ಮಂತ್ರಿ ಗಳೊಡನೆ ಕುಳಿತಿದ್ದ ರಾವಣನನ್ನು ಕಂಡನು. ಬಂಗಾರದ ತೋಳ್ಳಳೆಗಳಿಂ ದ ಶೋಭಿತನಾದ ಆ ವಾಲಿಪುತ್ರನು, ರಾವಣನ ಸಮೀಪಕ್ಕೆ ಬಂದು, ಉರಿಯುವ ಬೆಂಕಿಯಂತೆ ತೇಜಸ್ಸಿನಿಂದ ಜ್ವಲಿಸುತ್ತ, ಆ ರಾವಣನ ಮುಂದೆ ನಿಂತನು ಆ ವಾನರೋತ್ತಮನು ಮೊದಲು ರಾವಣನಿಗೆ ತಾನು ಯಾರೆಂ ಬುದನ್ನು ನಾಮನಿರ್ವಚನಪೂರೈಕವಾಗಿ ತಿಳಿಸಿ, ಆಮೇಲೆ ಆ ಸಭೆಯಲ್ಲಿ ವ್ಯ ಮಂತ್ರಿಗಳೆಲ್ಲರೂ ಕೇಳುವಂತೆ, ರಾಮನು ಹೇಳಿದ ಹಿತವಾಕ್ಯಗಳೆಲ್ಲವ ನ್ಯೂ ಕ್ರಮವಾಗಿ ಅವನು ಹೇಳಿದಂತೆಯೇ ರಾವಣನಿಗೆ ಹೇಳಲಾರಂಭಿಸಿ, « (ಎಲೆ ರಾಕ್ಷಸಾ! ನಾನು ಕೊಡಲಾಧಿಪತಿಯಾದ ರಾಮನಿಗೆ ದೂತನು. ವಾಲಿಯ ಮಗನು ಅಂಗದನೆಂದು ನನಗೆ ಹೆಸರು' ನೀನೂ ನನ್ನ ಹೆಸರನ್ನು ಕೇಳಿದ್ದರೂ ಇರಬಹುದು ' ಕೌಸಲ್ಯಗೆ ಆನಂದವರ್ಧಕನಾಗಿ ರಘುಕುಲ ದಲ್ಲಿ ಹುಟ್ಟಿದ ನಮ್ಮ ಪ್ರಭುವಾದ ರಾಮನು, ನಿನಗೆ ನನ್ನ ಮೂಲಕವಾಗಿ ಈ ಮಾತುಗಳನ್ನು ಹೇಳಿ ಕಳುಹಿಸಿರುವನು 14 ಎಲೆ ಕೂರರಾಕ್ಷಸನೆ ! ಪ ಟೈಣದಿಂದ ಹೊರಗೆ ಬಂದು ನನಗಿದಿರಾಗಿ ನಿಂತು ಯುದ್ಧ ಮಾಡು! ಹಾಗೆ ಮಾಡದಿದ್ದರೆ ನೀನು ಗಂಡುಸಲ್ಲ' ಎಲೆ ಫಾತುಕಾ' ಇನ್ನು ಸ್ವಲ್ಪ ಕಾಲದ ಕ್ಲಿಯೆ ನಾನು ನಿನ್ನನ್ನೂ , ನಿನ್ನ ಮಂತ್ರಿಗಳನ್ನೂ, ನಿನ್ನ ಪುತ್ರಮಿತ್ರಬಾಂ ಥವಾದಿಗಳನ್ನೂ ಕೊಲ್ಲುವುದಾಗಿರುವೆನು. ನೀನು ಸತ್ತಮೇಲೆಯೇ ಮೂ ರುಲೋಕವೂ ನಿರ್ಭಯವಾಗಿ ಸುಖದಿಂದಿರಬೇಕು ದೇವ ದಾನವಯಕ್ಷ ಗಂಧರ್ವ ಪನ್ನಗ ರಾಕ್ಷಸರೆಂಬ ಸಮಸ್ತದೇವಜಾತಿಗೂ ಶತ್ರುವಾಗಿ, ಋ ಷಿಗಳಿಗೆ ಕಂಟಕಪ್ರಾಯನಾದ ನಿನ್ನನ್ನು ಎಂದಿಗೂ ನಾನು ಕೊಲ್ಲದೆ ಬಿಡು ವವನಲ್ಲ ಈಗಲೂ ನೀನು ನನ್ನನ್ನು ಸತ್ಕರಿಸಿ, ಸೀತೆಯನ್ನು ತಂದೊಪ್ಪಿಸಿ, ನನ್ನ ಕಾಲುಗಳಲ್ಲಿ ಬಿಳದಿದ್ದರೆ, ನಿನ್ನ ನ್ನು ಕೊಂದು ವಿಭೀಷಣನಿಗೆ ಲಂಕಾಧಿ ಪತ್ಯವನ್ನು ಕೊಡಿಸುವೆನು ” ಎಂದು ನಿನಗೆ ಹೇಳುವಂತೆ ರಾಮನು ಹೇಳಿ ರುವನು” ಎಂದನು. ವಾನರೋತ್ತಮನಾದ ಆಂಗದನು ಹೀಗೆ ಪರುಷವಾ ಕ್ಯವನ್ನಾಡುತ್ತಿರುವಾಗಲೇ, ರಾವಣನು ಕೋಪದಿಂದ ಮೈಮರೆತು ಹೋ