ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪೨ || ಯುದ್ದ ಕಾಂಡವು ೨೩೪೧ ರಾವಣನು ತನ್ನ ಪ್ರಾಸಾದವು ಭಗ್ನ ವಾದುದಕ್ಕಾಗಿ ಬಹಳ ಕೋಪಾವೇಶ ವನ್ನು ಹೊಂದಿ, ಇನ್ನು ಮೇಲೆ ತನಗೆ ಉಳಿಗಾಲವಿಲ್ಲವೆಂದೂ ನಿಶ್ಚಯಿಸಿಕೊಂ ಡು,ಚಿಂತೆಯಿಂದ ನಿಟ್ಟುಸಿರು ಬಿಡುತಿದ್ದನು.ಇತ್ತಲಾಗಿ ರಾಮನಾದರೋ ಅಂಗದನು ಜಯಶೀಲನಾಗಿ ಬಂದುದನ್ನು ನೋಡಿ, ಸಂತೋಷದಿಂದ ಸಂ ಹನಾದಮಾಡುತಿದ್ದ ಅನೇಕವಾನರರಿಂದ ಪರಿವೃತನಾಗಿ, ಶತ್ರುವಧದ ನ್ನು ಕೋರುತ್ತ, ಮೇಲೆಮೇಲೆ ಯುದ್ರೋತ್ಸಾಹದಿಂದುಟ್ಟುತಿದ್ದನು ಆಗ ವಾನರಸೇನೆಯಲ್ಲಿ ಮಹಾವೀರಶಾಲಿಯಾಗಿಯೂ, ಪಕ್ವತಶಿಖರಾ ಕಾರ ನಾಗಿಯೂ ಇದ್ದ ಸುಷೇಣನು, ಕಾಮರೂಪಿಗಳಾದ ಅನೇಕ ವಾನರರಿಂದ ಪರಿವೇಷ್ಟಿತನಾಗಿ, ಸುಗ್ರೀವಾಜ್ಞೆಯನ್ನನುಸರಿಸಿ,ಚಂದ್ರನು ನಕ್ಷತ್ರರಾತಿ ಗಳಲ್ಲಿ ಕ್ರಮವಾಗಿ ತಿರುಗುತ್ತಿರುವಂತೆ, ಲಂಕಯ ನಾಲ್ಕು ಬಾಗಿಲುಗಳನ್ನೂ ಕಾವಲಾಗಿ ಸುತ್ತಿ ತಿರುಗುತಿದ್ರನು ಹೀಗೆ ನೂರಾರು ಅಕ್ಷಣಿಯಷ್ಟು ವಾನ ರಸೈನ್ಯವುಸಮುದ್ರವನ್ನು ದಾಟಿಬಂದುನಿಂತಿರುವುದನ್ನು ನೋಡಿ, ಲಂಕೆಯಲ್ಲಿ ದೃಢೀರರಾದ ರಾಕ್ಷಸರಲ್ಲಿ ಕೆಲವರು ವಿಸ್ಕ ಯಪಡುತಿದ್ದರು ಕೆಲವರು ಭಯ ದಿಂದ ನಡುಗುತಿದ್ದರು ಶಲ್ಯದ ಕಚ್ಚುಭ್ರ ಬೇರೆ ಕೆಲವು ರಾಕ್ಷಸರು, ದೊ ಈ ಯುದ್ಧವು ಬಂದೊದಗಿತೆಂಬ ಸಂತೋಷದಿಂದ ಹಿಗ್ಗುತಿದ್ದರು ಆ ಲಂಕೆ ಯ ಕೋಟೆಗೂ,ಕಂದಕಕ್ಕೂ ನಡುವೆ ಇರುವ ಪ್ರದೇಶವೆಲ್ಲವೂ, ವಾನರರಿಂದ ಲೇ ವ್ಯಾಪ್ತವಾಗಿ,ಕಪಿಮಯವಾದ ಬೇರೊಂದು ಪ್ರಾಕಾರವೋ ಎಂಬಂತೆ ಕಾಣುತಿತ್ತು ಈ ಕಪಿಗಳ ಗುಂಪನ್ನು ನೋಡಿ ಅನೇಕರಾಕ್ಷಸರು ಭಯದಿಂದ ಮೈಮರೆತು ಹಾಹಾಕಾರಗಳನ್ನು ಮಾಡುತಿದ್ದರು ರಾಕ್ಷಸರಾಜಧಾನಿಯಾ ದ ಆ ಲಂಕೆಯಸುತ್ತಲೂ ಹೀಗೆ ಮಹಾಭಯಂಕರವಾದ ದೊಡ್ಡ ಕೋಲಾ ಹಲವು ಹೊರಡಲು, ಆ ಲಂಕೆಯಲ್ಲಿದ್ದ ಶೂರರಾಕ್ಷಸರೆಲ್ಲರೂ ದೊಡ್ಡದೊ ಈ ಆಯುಧಗಳನ್ನು ಧರಿಸಿ, ಪ್ರಳಯಕಾಲದ ಮಹಾವಾತಗಳಂತೆ ನಿಂತಲ್ಲಿ ನಿಲ್ಲದೆ ಸುತ್ತುತಿದ್ದರು ಇಲ್ಲಿಗೆ ನಾಲ್ವತ್ತೊಂದನೆಯ ಸರ್ಗವು. -w+ ವಾನರರಾಕ್ಷಸರ ಯುದ್ಧಾರಂಭವ. ++ ಆಮೇಲೆ ಅಲ್ಲಿದ್ದ ರಾಕ್ಷಸರೆಲ್ಲರೂ ರಾವಣನ ಮನೆಗೆ ಹೋಗಿ,ರಾಮನು ಅನೇಕವಾನರಸೈನ್ಯದೊಡಗೂಡಿ ಲಂಕಾಪುರಿಯನ್ನು ಮುತ್ತಿರುವುದಾಗಿ ತಿಳಿ