ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪8 ಸರ್ಗ, ೪೨ } ಯುದ್ಧಕಾಂಡವು ದ, ತಾರೆಯ ತಂದೆಯಾದ ಸುಷೇಣನು, ಅರುವತ್ತು ಕೋಟಿ ವಾನರರೊಡ ಗೂಡಿ,ನೈರುತ್ಯದ ಮೂಲೆಯಲ್ಲಿದ್ದು,ಪಶ್ಚಿಮದ ಬಾಗಿಲನ್ನಾಕ್ರಮಿಸಿ ನಿಂತ ನು ವೀರಾಗ್ರೇಸರನಾದ ರಾಮನು ಲಕ್ಷಣಸಹಿತನಾಗಿ ಉತ್ತರದ ಬಾಗಿ ಲನ್ನಾಕ್ರಮಿಸಿನಿಂತನು. ವಾನರರಾಜನಾದ ಸುಗ್ರೀವನ, ಕೂಡ*ವಾಯವ್ಯ ದಮೂಲೆಯಲ್ಲಿದ್ದು,ರಾಮನಿಗೆ ಸಹಾಯಕನಾಗಿ ಆಉತ್ತರದ್ದಾರವನ್ನೇ ಆಕ್ರ ಮಿಸಿಸಂತನು ನೋಡಿದಮಾತ್ರದಲ್ಲಿಯೇ ಭಯವನ್ನು ಹುಟ್ಟಿಸುವಂತೆ ಮ ಹಾಕಾ ಯವುಳ್ಳವನಾಗಿಯೂ, ಮಹಾವೀರಶಾಲಿಯಾಗಿಯೂ, ಇದ್ದ ಗವಾ ಕ್ಷನೆಂಬ ಗೋಲಾಂಗೂಲಯೂಥಪತಿಯು, ಕೋಟೆಗೋಲಾಂಗೂಲ (ಸಂಗ ಭೀಕ)ಗಳಿಂದ ಪರಿವೃತನಾಗಿ, ರಾಮನ ಪಾರ್ಶ್ವಭಾಗದಲ್ಲಿ ನಿಂತನು ಭೂ ಮನೆಂಬ ಭಲ್ಲಕವೀರನು, ಕೋಟೆಭಲ್ಲೂಕಗಳೊಡಗೂಡಿ ರಾಮನ ಮ ತೊಂದು ಪಾರ್ಶ್ವದಲ್ಲಿ ನಿಂತನು ಬಲಾಢನಾದ ವಿಭೀಷಣನು ಯುದ್ಧಕ ವಚವನ್ನು ತೊಟ್ಟು, ಗದೆಯನ್ನು ಕೈಯಲ್ಲಿ ಹಿಡಿದು, ತನ್ನ ಮಂತ್ರಿಗಳೊಡನೆ ತಾನೂ ಯುದ್ಧಸನ್ನದ್ಧನಾಗಿ, ಆ ರಾಮನ ಸಮೀಪದಲ್ಲಿಯೇ ಇದ್ದನು. ಗ ಜನೂ, ಗವಾಕ್ಷನೂ, ಗವಯನೂ, ಶರಭನೂ, ಗಂಧಮಾದನನೂ ಈ ಐದು ಮಂದಿ ಕಪಿ ಯೂಥಪತಿಗಳೂ, ಅಲ್ಲಲ್ಲಿ ಸೈನ್ಯದ ನಾಲ್ಕು ಕಡೆಗಳನ್ನೂ ಸುತ್ತಿ ತಿರುಗುತ್, ಆ ಸೇನೆಯನ್ನು ರಕ್ಷಿಸುತ್ತಿದ್ದರು ಅತ್ತಲಾಗಿ ರಾಕ್ಷಸರಾಜ ನಾದ ರಾವಣನು, ಈ ವಾನರಸೇನೆಗಳ ಸನ್ನಿ ವೇಶಕ್ರಮಗಳೆಲ್ಲವನ್ನೂ ಉಪ್ಪರಿಗೆಯಲ್ಲಿಯೇ ನಿಂತುನೋಡಿ, ಮೇಲೆಮೇಲೆ ಕೋಪದಿಂದುಕ್ಕುತ್ಯ ತನ್ನ ಸಮಸ್ತ ಸೈನ್ಯಗಳನ್ನೂ ಶೀಘ್ರದಲ್ಲಿಯೇ ಯುದ್ಧಕ್ಕೆ ಹೊರಟುಬರು ವಂತೆ ಆಜ್ಞಾಪಿಸಿದನು ರಾವಣನ ಮುಖದಿಂದ ಈ ಕೂರಶಾಸನವು ಹೊರಟುದನ್ನು ಕೇಳಿದೊಡನೆಯೇ, ರಾಕ್ಷಸಸೈನಿಕರೆಲ್ಲರೂ ಮಹಾಭಯಂಕ

  • ಇದಕ್ಕೆ ಮೊದಲು ಹಿಂದೆ ಸುಗ್ರೀವನು, ಉತ್ತರದ ಬಾಗಿಲಲ್ಲಿದ್ದ ರಾಮನಿ ಗೂ, ಪಶ್ಚಿಮದ್ವಾರದಲ್ಲಿದ್ದ ಹನುಮಂತನಿಗೂ ನಡುವೆ, ವಾಯವ್ಯದ ಮೂಲೆಯಲ್ಲಿ ನಿಂತುವಾಗಿ ಕಾಣಿಸಿದೆ. ಇಲ್ಲಿ ಉತ್ತರದ ಬಾಗಿಲನ್ನು ಮಾತ್ರ ಪಾಲಿಸಿದಂತೆ ಹೇಳಲ್ಪಟ್ಟಿದೇ ಇದಕ್ಕಾಗಿ ಇಲ್ಲಿ ಸುಗ್ರೀವನು ವಾಯವ್ಯಕ್ಕದಲ್ಲಿಯೇ ನಿಂತು ಉತ್ಸಾರವನ್ನು ಕಾಯುತಿದ್ದನೆಂದು ಗ್ರಹಿಸಬೇಕು ಇದರಿಂದ ಇತರ ಯೂಥಪತಿಗಳೂ ಹೀಗೆಯೇ ಅಯಾಕೋಡಗಳಲ್ಲಿ ನಿಂತು, ಅಯಾದ್ವಾರಗಳನ್ನು ರಕ್ಷಿಸುತ್ತಿದ್ದಂತೆ ಊಹಿಸಬೇಕು.

148