ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೬ ಶ್ರೀಮದ್ರಾಮಾಯಣವು [ಸರ್ಗ, ೪೨ ರಗಳಾದ ಸಿಹ್ಮನಾದಧ್ವನಿಗಳಿಂದ ಗರ್ಜಿಸಿ, ತಮ್ಮ ರಣೋತ್ಸಾಹಗಳನ್ನು ತೋರಿಸಿದರು. ಆಗಲೇ ಇಲ್ಲಿನ ರಾಕ್ಷಸರೆಲ್ಲರೂ ಯುದ್ಧ ಸನ್ನದ್ಧರಾಗಿ, ಚ೧ ದ್ರಬಿಂಬದಂತೆ ಶುಭ್ರವಾದ ಮಖವುಳ್ಳ ರಣಭೇರಿಗಳನ್ನು ನುಡಿಸಲು, ಆ ಧ್ವನಿಯು ಅತಿಭಯಂಕರವಾಗಿ ಪಟ್ಟಣವೆಲ್ಲವನ್ನೂ ವ್ಯಾಪಿಸಿತು ಭಯಂಕರಾ ಕಾರವುಳ್ಳ ಬೇರೆ ಕೆಲವು ರಾಕ್ಷಸರು ಅಲ್ಲಲ್ಲಿ ಲಕ್ಷಲಕ್ಷವಾಗಿ ಸೇರಿ, ಯುದ್ಧಸೂ ಚಕಗಳಾದ ಶಂಖಗಳನ್ನೂ ದ.ತಿದ್ದರು ಚಿತ್ರವಿಚಿತ್ರಗಳಾದ ಆಭರಣಕಾಂತಿ ಗಳಿಂದ ಹೊಳೆಯುವ ಕಸ್ಸಾದ ಮೈಬಣ್ಣವುಳ್ಳ ಈ ರಾಕ್ಷಸರು, ಬಿಳೀ ಶಂಖಗಳನ್ನು ಕೈಯಲ್ಲಿ ಹಿಡಿದ ನಿಂತಾಗ, ಆಕಾಶದಲ್ಲಿ ಮಿಂಚಿನಿಂದಲೂ, ಬೆಳ್ಳಕ್ಕಿಗಳಿಂದಲೂ ಆವೃತವಾದ ಕಾಳಮೇಘದಂತೆ ಕಾಣುತಿದ್ದರು. ಹೀಗೆ ರಾವಣನಿಂದ ಪ್ರೇರಿತರಾದ ಸಮಸ್ತರಾಕ್ಷಸಸೈನಿಕರೂ, ಪ್ರಳಯ ಕಾಲದಲ್ಲಿ ಉಕ್ಕಿಬರುತ್ತಿರುವ ಮಹಾಸಮುದ್ರದಂತೆ ಮಹೋತ್ಸಾಹದಿಂದ ಯುದ್ಧಕ್ಕೆ ಹೊರಟುಬಿಟ್ಟರು ಇತ್ತಲಾಗಿ ವಾನರಸೈನಿಕರೂ ಆ ತ್ರಿಕೂಟ ಪರೈತದ ಗುಹೆಗಳು, ತಪ್ಪಲುಗಳು, ಮುಂತಾದುವೆಲ್ಲವನ್ನೂ ವ್ಯಾಪಿಸು ವಂತೆ, ಸುತ್ತಲೂ ಭಯಂಕರವಾದ ಸಿಂಹನಾದವನ್ನು ಮಾಡುತಿದ್ದರು. ಆತ್ತಲಾಗಿ ರಾಕ್ಷಸರು ಮಾಡುವ ಸಿಂಹನಾ ದಗಳು ಇದಕ್ಕಿಂತಲೂ ಮೇಲೆ ಶಂಖದುಂದುಭಿಧ್ವನಿಗ ಡನೆಯೂ, ಆನೆಗಳ ಘೀಂಕಾರಧ್ವನಿಗಳೊಡ ನೆಯೂ, ಕುದುರೆಗಳ ಹೇಷಾಧ್ವನಿಗಳೊಡನೆಯೂ, ರಥನೇವಿಧ್ವನಿಗಳೊಡ ನೆಯೂ, ಇತರರಾಕ್ಷರ ಕೂಗಿನೊಡನೆಯೂ ಸೇರಿ, ಭೂಮ್ಯಾಕಾಶಗಳಲ್ಲಿ ಯೂ, ಸಮುದ್ರದಲ್ಲಿಯೂ, ಪ್ರತಿಧ್ವನಿಯನ್ನುಂಟುಮಾಡುವಂತೆ ಮಹಾ ರ್ಭಟದಿಂದ ಮೊಳಗಿತು ಇಷ್ಟರಲ್ಲಿಯೇ ವಾನರರಾಕ್ಷಸಸೈನ್ಯಗಳೆರಡೂ ಮುಂದೆಮುಂದೆ ಸಾಗಿ,ಒಂದಾಗಿ ಸೇರಿತು ಪೂರದಲ್ಲಿ ದೇವಾಸುರರಿಗೆ ನಡೆ ದ ಮಹಾಯುದ್ಧದಂತೆ ಆ ಎರಡು ಸೈನ್ಯಗಳಿಗೂ ಭಯಂಕರವಾದ ಯುದ್ಧ ವೂ ಆರಂಭಿಸಿತು ಭಯಂಕರರಾದ ಆ ರಾಕ್ಷಸರೆಲ್ಲರೂ, ತಮ್ಮ ಬಲಪರಾ ಕ್ರಮಗಳನ್ನು ಗಡಿಸುತ್ತ, ಜ್ವಲಿಸುವಂತೆ ಥಳಥಳಿಸುವ ಗದೆಗಳನ್ನೂ , ಶಕ್ತಿ ಗಳನ್ನೂ, ಶೂಲಗಳನ್ನೂ, ಗಂಡುಗೊಡಲಿಗಳನ್ನೂ ಹಿಡಿದು, ವಾನರರ ನ್ನು ಪ್ರಹರಿಸುವುದಕ್ಕೆ ತೊಡಗಿದರು ಹಾಗೆಯೇ ಮಹಾವೀರವುಳ್ಳ ವಾನರರೂಕೂಡ, ಕಲ್ಲುಮರಗಳನ್ನು ಕೈಯಿಂದೆತ್ತಿಕೊಂಡು ಆತಿಬಲನಾದ