ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪s ] ಯುದ್ಧಕಾಂಡವು. ೨೩೪೬ ರಾಮನಿಗೆ ಜಯವು ' ಮಹಾಬಲನಾದ ಲಕ್ಷಣನಿಗೆ ಜಯವು, ರಾಮನಿಂದ ರಕ್ಷಿತನಾದ ನಮ್ಮ ರಾಜನಾದ ಸುಗ್ರೀವನಿಗೆ ಜಯವು” ಎಂದು ತಮ್ಮ ಪ್ರ ಭುಗಳ ಪರಾಕ್ರಮವನ್ನೇ ಉದೂಷಿಸುತ್ತ,ಮುಂದೆ ಬಂದು ರಾಕ್ಷಸರನ್ನು ಬಡಿಯುತಿದ್ದರು ಇತ್ತಲಾಗಿ ವಾನರಸೈನ್ಯದಲ್ಲಿ ಒಬ್ಬೊಬ್ಬ ವಾನರನೂ, ತಮ್ಮ ರಾಜನಿಗೆ ಜಯಶಬ್ದವನ್ನು ಹೇಳುತ್ತ ತಮ್ಮ ತಮ್ಮ ಹೆಸರುಗಳನ್ನೂ, ವೃತಾಂತಗಳನ್ನೂ ಉದ್ಯೋಷಿಸುತ್ತ, ಮುಂದೆಸಾಗಿ, ಗಿಡಗಳಿಂದಲೂ, ಪತಶಿಖರಗಳಿಂದಲೂ, ಅಲ್ಲಲ್ಲಿ ಸಿಕ್ಕಿದ ರಾಕ್ಷಸರನ್ನು ಬಡಿದುಕೊಲ್ಲು ತಿದ್ದರು ಅಲ್ಲಲ್ಲಿ ಸಿಕ್ಕಿದವರನ್ನು ಹಲ್ಲುಗಳಿಂದ ಕಡಿದು, ಉಗುರುಗಳಿಂದ ಸೀಳುತಿದ್ದರು ಭಯಂಕರರಾದ ಕೆಲವುರಾಕ್ಷಸರು, ಲಂಕೆಯ ಪ್ರಾಕಾರದ ಮೇಲೆ ನಿಂತು, ಕೆಳಗಿದ್ದ ವಾನರರಮೇಲೆ ಭಿಂಡಿವಾಳಗಳನ್ನೂ, ಕತ್ತಿಗ ಳನ್ನೂ , ಶೂಲಗಳನ್ನೂ ಪ್ರಯೋಗಿಸಿ, ಅವರನ್ನು ಭೇದಿಸಿಕೊಲ್ಲುತಿದ್ದರು. ಕೆಳಗಿದ್ದ ವಾನರರಲ್ಲಿಯೋ, ಮಹಾವೇಗಶಾಲಿಗಳಾದ ಕೆಲವರು, ಕೆಳಗಿ ನಿಂದ ಒಂದೇನೆಗೆತಕ್ಕೆ ಆ ಪ್ರಾಕಾರದಮೇಲೆ ಹಾರಿ, ಅಲ್ಲಿದ್ದ ರಾಕ್ಷಸರನ್ನು ಕೆಳಕ್ಕೆ ನೂಕಿದರು ಆಗ ರಾಕ್ಷಸರಿಗೂ, ವಾನರರಿಗೂ ನಡೆದ ದೊಡ್ಡತುಮು ಲಯುದ್ಧವು ಕೇವಲರಕ್ತಮಾಂಸಮಯವಾಗಿ, ಮಹಾದ್ಭುತವಾಗಿ ಕಾಣಿ ಸಿತು ಇಲ್ಲಿಗೆ ನಾಲ್ವತ್ತೆರಡನೆಯ ಸರ್ಗವು. •+ವಾನರರಾಕ್ಷಸರ ದ್ವಂದ್ವಯುದ್ಧವು. ++ ಹೀಗೆ ಮಹಾಧೀರರಾದ ಆ ವಾನರರೆಲ್ಲರೂ ಇದಿರಿಲ್ಲದಂತೆ ಯುದ್ಧ ಮಾಡುತ್ತಿರಲು, ಇದನ್ನು ನೋಡಿ ರಾಕ್ಷಸಸೈನಿಕರು ಸಹಿಸಲಾರದೆ, ಭ ಯಂಕರವಾದ ಕೋಪಾವೇಶವನ್ನು ಹೊಂದಿರರು ಭಯಂಕರಕರ್ಮಿಗಳಾ ದ ಆ ರಾಕ್ಷಸಯೋಧರೆಲ್ಲರೂ, ತಮ್ಮ ಪ್ರಭುವಾದ ರಾವಣನಿಗೆ ಹೇಗಾದ ರೂ ಜಯವನ್ನುಂಟುಮಾಡಬೇಕೆಂಬ ದೃಢಸಂಕಲ್ಪವುಳ್ಳವರಾಗಿ, ಚಿನ್ನದ ಕೇಸರಗಳುಳ್ಳ ಕುದುರೆಗಳೊಡನೆಯೂ, ಅಗ್ನಿ ಜ್ವಾಲೆಗಳಂತೆ ಧಗಧಗಿಸುವ ಧ್ವಜಗಳೊಡನೆಯೂ, ಸೂರೆಬಿಂಬಗಳಂತೆ ಹೊಳೆಯುವ ರಥಗಳೊಡನೆ ಯೂ, ಅಂದವಾದ ಕವಚಗಳೊಡನೆಯೂ ಕೂಡಿ, ಹತ್ತು ದಿಕ್ಕುಗಳಲ್ಲಿಯೂ