ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೮ ಶ್ರೀಮದ್ರಾಮಾಯಣವು (ಸರ್ಗ, ೪೩. ಪ್ರತಿಧ್ವನಿಕೊಡುವಂತೆ ಸಿಂಹನಾದಗಳನ್ನು ಮಾಡುತ್ಯ, ಯುದ್ಧಕ್ಕಾಗಿ ಮುಂದೆ ನುಗ್ಗಿ ದರು, ಮಹತ್ತಾದ ವಾನರಸೇನೆಯೂಕೂಡ ಜಯಾ ಕಾಂ ಕೆಯಿಂದ, ಕಾಮರೂಪಿಗಳಾದ ಆ ರಾಕಸರ ಸೇನೆಗಿದಿರಾಗಿ ನಡೆಯಿತು. ಹೀ ಗೆ ಇದಿಗಿದಿರಾಗಿ ನುಗ್ಗಿ ಬರುತ್ತಿರುವ ವಾನರರಾಕ್ಷಸಸೇನೆಗಳೆರಡೂ, ಒಂ ದಾಗಿ ಕಲೆತು, ಎರಡಕ್ಕೂ ತುಮುಲಯುದ್ಧ ವಾರಂಭವಾಯಿತು ಮಹಾ ತೇಜಸ್ವಿಯಾದ ಇಜಿತ್ತು ವಾಲಿಪುತ್ರನಾದ ಅಂಗದನೊಡನೆ ಕೈಕ ಲೆತು, ರುದ್ರನೊಡನೆ ಯಮನು ಹೋರಾಡುವಂತೆ ಯುದ್ಧಮಾಡುತಿಬ್ಬನು ಯುದ್ಧದಲ್ಲಿ ಶತ್ರುಗಳಿಗೆ ಸಹಿಸಲಸಾಧ್ಯವಾದ ಪರಾಕ್ರಮವುಳ್ಳ ವಿಭೀ ಷಣಸಚಿವನಾದ ಸಂಪಾತಿಯು, ಪ್ರಜಂಘನೆಂಬವನೊಡನೆ ಯುದ್ಧಕ್ಕೆ ನಿಂತನು. ವಾನರೋತ್ತಮನಾದ ಹನುಮಂತನು ಜಂಬುಮಾಲಿಯನ್ನಿ ಏರಿಸಿ ನಿಂತನು ರಾವಣನ ತಮ್ಮನಾದ ವಿಭೀಷಣನು ಅತ್ಯಂತಕೋಪಾವೇಶವ ನ್ನು ಹೊಂದಿ, ತೀವ್ರವೇಗವುಳ್ಳ ಮಿತ್ರಮ್ಮು ನೆಂಬ ರಾಕ್ಷಸನೊಡನೆ ಯುದ್ಧ ವನ್ನಾರಂಭಿಸಿದನು ಬಲಾಡ್ಯನಾದ ಗಜನು ತಪನನೆಂಬ ರಾಕ್ಷಸನೊಡನೆ ಯುದ್ಧಕ್ಕೆ ನಿಂತನು ಮಹಾತೇಜಸ್ವಿಯಾದ ನೀಲನು, ನಿಕುಂಭನೊಡನೆ ಯುದ್ಧಮಾಡಿದನು. ಕಪಿರಾಜನಾದ ಸುಗ್ರೀವನು ಪ್ರಫುಸನನ್ನಿ ದಿರಿಸಿ ನಿಂ ತನು ಶ್ರೀಮಂತನಾದ ಲಕ್ಷಣನು ವಿರೂಪಾಕ್ಷನೊಡನೆ ಕೈಕಲೆ ತನು ಆ ಗ್ನಿ ಕೇತು, ರಶ್ಮಿ ಕೇತು, ಸುಪ್ತಪ್ಪು , ಯಜ್ಞಕೊಪರೆಂಬ ನಾಲ್ವರು ರಾಕ್ಷಸ ರೊಡನೆಯೂ, ಶ್ರೀರಾಮನು ತಾನಾಗಿಯೇ ಯುದ್ಧಕ್ಕೆ ನಿಂತನು ವಜ್ರಮು ಷಿಯೆಂಬ ರಾಕ್ಷಸನು ಮೈಂದನೊಡನೆಯೂ,ಅಶನಿಪ್ರಭನೆಂಬವನು ದ್ವಿವಿದ ನೊಡನೆಯೂ ಸೇರಿ, ಭಯಂಕರಯುದ್ಧವನ್ನಾರಂಭಿಸಿದರು ವೀರನಾ ಗಿಯೂ, ಶತ್ರುಭಯಂಕರನಾಗಿಯೂ, ಯುದ್ಧದಲ್ಲಿ ದುರ್ಜಯನಾಗಿಯೂ ಇದ್ದ ಪ್ರತಪನನೆಂಬ ರಾಕ್ಷಸನು, ತೀಕ್ಷವೇಗವುಳ್ಳ ನಲನೊಡನೆ ಯುದ್ಧ ಕ್ಕೆ ಬಂದನು ಧರ್ಮಪುತ್ರನಾದ ಬಲಾಡ್ಯನಾದ ಸುಷೇಣನು, ವಿದ್ಯುನ್ಮಾ ಲಿಯೊಡನೆ ಯುದ್ಧಕ್ಕೆ ನಿಂತನು ಹಾಗೆಯೇ ಇನ್ನೂ ಅನೇಕವಾನರು, ತಮ ತಮಗೆ ಸಮಾನಬಲವುಳ್ಳ ಬೇರೆಬೇರೆ ರಾಕ್ಷಸರೊಡನೆ, ನಾನಾವಿಧವಾಗಿ ದ್ವಂದ್ವಯುದ್ಧವನ್ನು ಮಾಡಿದರು. ಹೀಗೆ ಪರಸ್ಪರಜಯಾಕಾಂಕ್ಷಿಗಳಾಗಿ ಹೋರಾಡುತ್ತಿರುವ ಆ ವಾನರರಿಗೂ, ರಾಕ್ಷಸರಿಗೂ ನಡೆದ ದೊಡ್ಡ ದ್ವಂ