ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೪ | ಯುದ್ಧಕಾಂಡವು. ೨೦೮೩ ಕೆಯನ್ನೂ ಸುಟ್ಟಿರುವೆನು ಅಲ್ಲಿನ ಪ್ರಾಕಾರಗಳನ್ನೂ ಕೆಡಹಿ ಬಂದಿರುವೆನು ಆ ದುದರಿಂದ ಇನ್ನು ಮುಂದೆ ನಿಮಗೆ ಅಷ್ಟಾಗಿ ಕಷ್ಟವೇನೂ ತೋರದು' ಮ ತ್ತು ನಾನು ಅಲ್ಲಿನ ರಾವಣಸೈನ್ಯದಲ್ಲಿ ಕೆಲವುಭಾಗವನ್ನು ಕೊಂದೂ ಬಂದಿರು ವೆನು ಇನ್ನು ಮೇಲೆ ಏನಾದರೂ ಒಂದುಪಾಯದಿಂದ ನಾವೆಲ್ಲರೂಸೇರಿ ಸ ಮುದ್ರವನ್ನು ದಾಟಿಯೇ ಬಿಡಬೇಕು ನಾವು ಸಮುದ್ರವನ್ನು ದಾಟುವುದೊಂ ದೇ ತಡೆ' ಅದನ್ನು ದಾಟಿದಮೇಲೆ ಲಂಕೆಯು ಹತವಾದಂತೆಯೇ ತಿಳಿ ! ರಾ ಮಾ ! ಈ ಅಂಗದನು' ಈ ಮೈಂದನು' ಈ ದ್ವಿವಿದನು' ಈ ಜಾಂಬವಂತ ನು' ಈ ಸನಸನು' ಈ ನೆಲನು' ಸೇನಾಪತಿಯಾದ ಈನೀಲನು' ಇವರಿಷ್ಟು ಮಂದಿಯೇ ಸಾಕು' ಇತರ ವಾನರಸೈನ್ಯದಿಂದ ನಮಗೆ ನಡೆಯಬೇಕಾದ ಕೆ ಲಸವೇಇಲ್ಲ.ಇವರೆಲ್ಲರೂ ಒಂದೇನೆಗೆತಕ್ಕ ಈಮಹಾಸಮುದ್ರವನ್ನು ಹಾರಬ ಲ್ಲರು ಇವರು ಆ ಸಮುದ್ರವನ್ನು ಹಾರಿದಮಾತ್ರಕ್ಕೆ, ಆ ಲಂಕೆಯನ್ನು ಅದಕ್ಕೆ ಸೇರಿದ ಪ್ರತಗಳೊಡನೆಯೂ,ಅಲ್ಲಿನ ಕಾಡುಗಳೊಡನೆಯೂ,ಅಲ್ಲಿನ ತೋರಣಪ್ರಾಕಾರಗಳೊಡನೆಯೂ, ಅಲ್ಲಿನ ರಾಕ್ಷಸಗೃಹಗಳೊಡನೆಯೂ, ಅದರ ಕಂದಕದೊಡಸಿಯೂ ಕಿತ್ತು ತರಬಲ್ಲರು ಈ ಸಮಸ್ತವಾನರಸೈನ್ಯಗ ಇಲ್ಲಿಯೂ, ಸಾರಭೂತರಾದ ಈ ಅಂಗದಾದಿಗಳಿಗೆಮಾತ್ರ, ಈಗಲೇ ನೀನು ಆಜ್ಞೆಯನ್ನು ಮಾಡು ! ಅನುಕೂಲವಾದ ಶುಭಮುಹೂರ್ತದಲ್ಲಿ ಜಯಪ್ರ ಯಾಣಕ್ಕೆ ನಿಮಗೂ ಅನುಮತಿಯನ್ನು ಕೊಡು” ಎಂದನು ಇಲ್ಲಿಗೆ ಮರ ನೆಯ ಸರ್ಗವು ( ರಾಮಾಳ್ಮೆಯಿಂದ ಸುಗ್ರೀವನು ಸೇನಾಸನ್ನಾ ಹಗ ಇನ್ನು ಮಾಡಿಕೊಂಡು,ದಂಡಯಾತ್ರೆಗೆ ಹೊರಟುದು | ಹನುಮಂತನಮೇಲೆ ರಾಮನೂ, ಅಂಗದನಮೇಲೆ ಲ ಕಣನೂ ಏರಿ ಪ್ರಯಾಣೆಹೊರಟುದು, ಮಾರ್ಗ | ದಲ್ಲಿ ಶುಭನಿಮಿತ್ತಗಳೊಡನೆ ಸಮುದ್ರತೀರವನ್ನು ಸೇ | ( ರಿದಮೇಲೆ, ಅಲ್ಲಿ ನೀಲನು ಸೇನೆಯನ್ನು ನಿಲ್ಲಿಸಿದುದು ) ಮಹಾತೇಜಸ್ವಿಯಾಗಿಯೂ, ಸತ್ಯಪರಾಕ್ರಮನಾಗಿಯೂ ಇರುವ ರಾಮನು, ಕ್ರಮವಾಗಿ ಹನುಮಂತನು ಹೇಳಿದುದೆಲ್ಲವನ್ನೂ ಕೇಳಿ, ತಿರುಗಿ