ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪೯ ಸರ್ಗ ೪೩.] ಯುದ್ದ ಕಾಂಡವು. ದ್ವಯುದ್ಧವು, ನೋಡುವವರಿಗೆ ಮೈಯಲ್ಲಿ ರೋಮಾಂಚವನ್ನು ಹುಟ್ಟಿಸು ವಂತೆ ಅತಿಭಯಂಕರವಾಯಿತು. ಆ ಯುದ್ಧದಲ್ಲಿ, ವಾನರರಾಕ್ಷಸರ ದೇಹ ಗಳಿಂದ ಹೊರಟ ರಕ್ತಪ್ರವಾಹಗಳು, ಕೂದಲುಗಳೆಂಬ ಗರಿಕೆಗಳನ್ನೂ, ದೇಹಾವಯವಗಳೆಂಬ ಕಾಷ್ಠ ಸಂಚಯಗಳನ್ನೂ ಕೊಚ್ಚಿಸಿಕೊಂಡು ಬ ರುವ ದೊಡ್ಡ ನದಿಗಳಂತೆ ಕಾಣುತಿದ್ದುವು. ಇಷ್ಟರಲ್ಲಿ ಇನ್ನಜಿತ್ತು ಬಹಳ ಕುಪಿತನಾಗಿ, ದೇವೇನ್ನು ವಜ್ರವನ್ನು ಹಿಡಿದಂತೆ, ಭಯಂಕರವಾದ ಗದೆಯನ್ನು ಕೈಗೆತ್ತಿಕೊಂಡು, ಅಲ್ಲಲ್ಲಿ ರಾಕ್ಷಸಸೈನ್ಯವನ್ನು ಧ್ವಂಸಮಾಡು ತಿದ್ದ ಅಂಗದನಮೇಲೆ, ಆ ಗದೆಯನ್ನು ಬೀಸಿದನು “ಮಹಾವೇಗಶಾಲಿಯಾ ದ ಆಂಗದನಾದರೋ, ಇನ್ನಜಿನ ಕಾರವನ್ನು ನೋಡಿ ಕೋಪಗೊಂ ಡು, ಚಿನ್ನದ ಕುಸುರಿಗಳಿಂದ ಚಿತ್ರಿತವಾದ ಆ ಇನ್ಜಿನ ರಥವನ್ನು ಅದರ ಸಾರದಿಗಳೊಡನೆಯೂ, ಕುದುರೆಗಳೊಡನೆಯೂ, ಪಡಿಪಡಿಯಾಗಿ ಮಾಡಿಬಿಟ್ಟೆವು ಪ್ರಜಂಫುನೆಂಬ ರಾಕ್ಷಸನು, ಸಂಪಾತಿಯನ್ನು ಮೂರುಬಾ ಣಗಳಿಂದ ಹೊಡೆಯಲು, ಆ ಸಂಪಾತಿಯು ಒಂದು ದೊಡ್ಡ ಅಶ್ವಕ ರ್ಣಿವೃಕ್ಷವನ್ನು ಬೀಸಿ ಆ ಪ್ರಜಂಫನನ್ನು ಕೊಂದುಹಾಕಿದನು ಆತ್ರ ಲಾಗಿ ರದಸ್ಥನಾದ ಜಂಬುಮೂಲಿಯೆಂ?'ವನು ತನ್ನ ರಥದಲ್ಲಿ ಯಾವಾ ಗಲೂ ಸ್ಥಿರವಾಗಿಟ್ಟಿದ್ದ ಒಂದು ಶಕ್ಯಾಯಧವನ್ನು ತೆಗೆದು, ಅ ದನ್ನು ಹನುಮಂತನ ಎದೆಗೆ ಗುರಿಯಿಟ್ಟು ಹೊಡೆದನು ಇಷ್ಟರಲ್ಲಿಯೇ ಹನಮಂತನು ಅವನ ರಥದಮೇಲೆ ಹಾರಿ, ತನ್ನ ಅಂಗೈಯಿಂದ ಆ ರಥವನ್ನ ಪ್ಪಳಿಸಿ, ಆ ರಾಕ್ಷಸರ ದೇಹದೊಡನೆ ಆ ರಥವನ್ನು ರುಳಿಸಿ ಬಿಟ್ಟನು ಅತ್ಲಾಗಿ ಪ್ರತಪನನೆಂಬ ಘೋರರಾಕ್ಷಸನು, ಭಯಂಕರವಾದ ಗರ್ಜನೆಗಳೊಡನೆ ನಳದಮೇಲೆ ನುಗ್ಗಿ, ತೀಕ್ಷಬಾಣಗಳಿಂದ ಅವನನ್ನು ಹೊಡೆಯಲು,ಕ್ಷಣಮಾತ ದಲ್ಲಿಯೇ ನಳನು ಆ ರಾಕ್ಷಸನ ಮೋರೆಯಮೇಲೆ ಹೊಡೆದು, ಅವನ ಕಣ್ಣುಗುಡ್ಡೆಗಳೆರಡನ್ನೂ ಉದಿರಿಸಿಬಿಟ್ಟನು. ಅತ್ತಲಾಗಿ ವಾನರೇಶ್ವರನಾದ ಸುಗ್ರೀವನು, ತನ್ನ ಕಡೆಯ ಸೈನ್ಯಗಳೆಲ್ಲವನ್ನೂ ಒಂದೇ ತುತ್ತಾಗಿ ನುಂಗಿಬಿಡುವಂತೆ ದೊಡ್ಡದಾಗಿ ಬಾಯನ್ನು ತೆರೆದುಕೊಂಡು ತನ ಗಿರಿರಾಗಿ ಬರುತಿದ್ದ ಪ್ರಫುಸನನ್ನು ನೋಡಿ, ಕೋಪಗೊಂಡು, ತಾನು ಹಿಡಿದಿ ದ್ದ ಒಂದು ಸಪ್ತಪರ್ಣವೃಕ್ಷದಿಂದ ಆ ರಾಕ್ಷಸನನ್ನು ಬಡಿದುಕೊಂದನು.