ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩ - ಶ್ರೀಮದ್ರಾಮಾಯಣವು (ಸರ್ಗ, ೪೪. ಎಲ್ಲಿ ನೋಡಿದರೂ ವಾನರರಾಕ್ಷಸರ ಮೃತದೇಹಗಳು " ಇದಲ್ಲದೆ ಅಲ್ಲಲ್ಲಿ ಕಳಚಿಬಿದ್ದ ರಥಚಕ್ರಗಳು | ಮುರಿದುಬಿದ್ದ ನೊಗಗಳು ಕತ್ತರಿಸಿದ ತೇರ ಚುಗಳು ! ಹೀಗೆ ಆ ರಣರಂಗವೆಲ್ಲವೂ ಕೇವಲಮೃತದೇಹಗಳಿಂದಲೂ, ಮುರಿದುಬಿದ್ದ ಯುದ್ಧ ಸಾಮಗ್ರಿಗಳಿಂದಲೂ ದಟ್ಟವಾಗಿ ತುಂಬಿ ಭಯಂಕ ರವಾಗಿ ಕಾಣಿಸುತಿತ್ತು ಆಗಲೇ ಅಲ್ಲಲ್ಲಿ ನರಿಗಳು ಬಂದು ಗುಂಪುಗೂಡುತಿ ದ್ದವು, ದೇವಾಸುರಯುದ್ಧಕ್ಕೆ ಸಮಾನವಾದ ಆ ದೊಂಬಿಯುದ್ಧದಲ್ಲಿ, ಯುದ್ಧಭೂಮಿಯ ಯಾವಕಡೆಯನ್ನು ನೋಡಿದರೂ, ವಾನರರ ರಾಕ್ಷಸರ ಮುಂಡಗಳೇ ಹಾರಾಡುತಿದ್ದುವು ಕ್ರಮಕ್ರಮವಾಗಿ ವಾನರರ ಕೈ ಮೇಲಾ ಗಿ, ರಾಕ್ಷಸರಲ್ಲಿ ಪ್ರಾಣಹಾನಿಯು ಹೆಚ್ಚುತ್ತ ಬಂದಿತು ರಾಕ್ಷಸರೆಲ್ಲರೂ, ಅಲ್ಲಲ್ಲಿ ಕಪಿಗಳಿಂದ ಭೇದಿಸಲ್ಪಟ್ಟು, ರಕ್ತದಿಂದ ತೊಯ್ದ ಮೈಯುಳ್ಳವರಾಗಿ, ಮುಂದೆ ತಮಗೆ ವೀಲ್ಯವರ್ಧಕವಾದ ಸೂಕ್ಯಾಸ್ತಮಯವನ್ನೆ ಇದಿರುನೋ ಡುತ್ತ, ಪ್ರಯತ್ನ ದಿಂದ ಹಾಗೆಯೇ ಯುದ್ಧವನ್ನು ನಡೆಸುತಿದ್ದರು ಇಲ್ಲಿಗೆ ನಾಲ್ವತ್ತು ಮೂರನೆಯಸರ್ಗವು | - w+ ರಾತ್ರಿ ಯುದ್ಧವು. ++ ಹೀಗೆ ವಾನರರೂ ರಾಕ್ಷಸರೂ ಸೇರಿ, ಯುದ್ಧ ಮಾಡುತ್ತಿರುವಾಗ ಲೇ ಸೂರ್ನು ಅಸ್ತಮಿಸಿದನು. ವಾನರರಿಗೆ ಪ್ರಾಣಭಯವನ್ನುಂಟುಮಾ ಡತಕ್ಕೆ ರಾತ್ರಿಯು ಸಮೀಪಿಸಿತು ಆಗ ಪರಸ್ಪರಬದ್ಧವೈರವುಳ್ಳವರಾಗಿ ಯೂ,ಭಯಂಕರಾಕಾರರಾಗಿಯೂ, ಒಬ್ಬರನ್ನೊಬ್ಬರು ಗೆಲ್ಲಬೇಕೆಂಬ ಅತ್ಯಾ ತುರವುಳ್ಳವರಾಗಿಯೂ ಇದ್ದ ವಾನರರಿಗೂ, ರಾಕ್ಷಸರಿಗೂ ರಾತ್ರಿಯು ದವು ನಡೆಯಲಾರಂಭಿಸಿತು,ಭಯಂಕರವಾದ ಆಗಾಢಾಂಧಕಾರದಲ್ಲಿಕಣ್ಣು ಕಾಣದುದರಿಂದ, ಒಬ್ಬರನ್ನೊಬ್ಬರು ಚೆನ್ನಾಗಿ ಗುರುತಿಸಲಾರದೆ,ವಾನರರು ತಮ್ಮ ಕಡೆಯವಾನರರನ್ನೇ ರಾಕ್ಷಸರೆಂದು ತಿಳಿದು ಕೊಲ್ಲುತಿದ್ದರು ರಾಕ್ಷಸರು ತಮ್ಮ ಕಡೆಯ ರಾಕ್ಷಸರನ್ನೆ ವೈರಿಗಳಾದ ವಾನರರೆಂದು ತಿಳಿದು ಕೊಲ್ಲು ತಿದ್ದರು. ಹೀಗೆ ಆ ರಾತ್ರಿಯುದ್ಧದಲ್ಲಿ, ಕಣ್ಣು ಕಾಣದೆ ಒಬ್ಬರಿಗೊಬ್ಬರು ಹೊಡೆದಾಡುತ್ತಿದ್ದುದರಿಂದ, ಆಗಾಢಾಂಧಕಾರದಲ್ಲಿ ರಣರಂಗದ ಯಾವಕಡೆ