ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಶ್ರೀಮದ್ರಾಮಾಯಣವು (ಸರ್ಗ, ೪೪. ರಕ್ತನದಿಗಳೇ ಹರಿಯುತ್ತಿದ್ದುವು. ಅಲ್ಲಲ್ಲಿ ಭೇರಿ, ಮದ್ದಳೆ,ಡೋಲು,ಮುಂತಾದ ಚರ್ಮವಾದ್ಯಧ್ವನಿಗಳೂ, ಶಂಖ ವೇಣು ಮೊದಲಾದ ಮುಖವಾದ್ಯದ ಧ್ವ ನಿಗಳೂ ಒಂದಾಗಿ ಕಲೆತು ಭಯಂಕರವಾಗಿ ಕೇಳಿಸುತ್ತಿದ್ದುವು ಹಾಗೆಯೇ ಆಲ್ಲಲ್ಲಿ ಕಪಿಗಳ ಕೈಗೆ ಸಿಕ್ಕಿ ಕೂಗಿಡುವ ರಾಕ್ಷಸರ ಧ್ವನಿಯೂ, ರಾಕ್ಷಸರಿಂದ ಹಿಂಸಿತರಾಗಿ ಕೂಗುತಿದ್ದ ಕಪಿಗಳ ಧ್ವನಿಯೂ ಅತಿಭಯಂಕರವಾಗಿ ವ್ಯಾ ಪಿಸಿತು ಮತ್ತು ಆಗ ಯುದ್ಧಭೂಮಿಯಲ್ಲಿ, ರಾಕ್ಷಸರ ಶಕ್ಕಾಯುಧಗ ಳಿಂದಲೂ, ಶೂಲಗಳಿಂದಲೂ, ಗಂಡುಗೊಡಲಿಗಳಿಂದಲೂ ಹತರಾಗಿ ಬಿದ್ದಿ ದ ವಾನರರ ಮೃತದೇಹಗಳೂ, ಅಲ್ಲಲ್ಲಿ ವಾನರರು ಬೀಸಿಬಡಿದ ಮರಗಿ ಡಗಳಿಂದಲೂ, ಪತಶಿಖರಗಳಿಂದಲೂ, ಮೈಮುರಿದು ಸತ್ತುಬಿಟ್ಟರು ವ ಕಾಮರೂಪಿಗಳಾದ ರಾಕ್ಷಸರ ದೇಹಗಳೂ, ರಾಶಿರಾಶಿಯಾಗಿ' ತುಂಬಿ ದುವು.ಎಲ್ಲಿ ನೋಡಿದರೂ ಆ ರಣಭೂಮಿಯನ್ನು ಪ್ರಪ್ಪೋಪಹಾರಗಳಿಂದ ಲಂಕರಿಸಿದಂತೆ, ಮುರಿದುಬಿದ್ದ ಶಸಗಳು ಹೊಳೆಯುತ್ತಿದ್ದುವು ಮತ್ತು ಎಲ್ಲಿ ನೋಡಿದರೂ ರಕ್ತಪ್ರವಾಹವು ಕೆಸರುಗಟ್ಟಿದ್ದುದರಿಂದ, ಅಲ್ಲಲ್ಲಿನ ಸನ್ನಿ ವೇಶಗಳನ್ನು ನೋಡಿ ತಿಳಿಯುವುದಕ್ಕಾಗಲಿ, ಮುಂದೆ ಕಾಲಿಡು ವುದಕ್ಕಾಗಲಿ ಸಾಧ್ಯವಿಲ್ಲದಂತಾಯಿತು ಹೀಗೆ ಮಹಾಭಯಂಕರವಾಗಿ, ವಾ ನರರಾಕ್ಷಸಂಬ್ಬರಿಗೂ ಪ್ರಾಣಹಾನಿಕರವಾದ ಆ ರಾತ್ರಿಯು, * ಕಾಳರಾತ್ರಿ ಯಂತೆ ಸಮಸ್ತ ಪ್ರಾಣಿಗಳಿಗೂ ಮೈ ಯಲ್ಲಿ ನಡುಕವನ್ನು ಹುಟ್ಟಿಸುತಿತ್ತು. ಹೀಗೆ ಭಯಂಕರವಾದ ಗಾಂಢಾಂಧಕಾರವು ಕವಿದಿರುವದನ್ನು ನೋಡಿ ರಾಕ್ಷಸರು, ತಮಗೆ ಇದೇ ಸರಿಯಾದ ಸಮಯವೆಂದು ತಿಳಿದು, ಕೆಲವರು ಗುಂಪುಗೂಡಿ ಬಾಣವರ್ಷಗಳನ್ನು ಕರೆಯುತ್ತ ರಾಮನನ್ನಿ ದಿರಿಸುವುದಕ್ಕೆ ಹೋದರು. ಆ ರಾಕ್ಷಸರೆಲ್ಲರೂ ಕೋಪದಿಂದ ಗರ್ಜಿಸುತ್ತ, ರಾಮನನ್ನಿ ದಿ. ರಿಸುವುದಕ್ಕೆ ಬರುವಾಗ, ಅವರ ದೊಡ್ಡ ಗರ್ಜನಧ್ವನಿಯು, ಪ್ರಳಯಕಾಲ ೩

  • ಇಲ್ಲಿ ಕಾಳರಾತ್ರಿಯೆಂದರೆ “ರಾತ್ರಿರ್ಭೀಮರಥಿರ್ನಾಮ ಸರೈಪ್ರಾಣಭಯಾ ವಹಾ”ಎಂದು ಹೇಳಲ್ಪಡುವ ಭೀಮರಥಿ ರಾತ್ರಿಯೆಂದು ಗ್ರಾಹ್ಯ ಅಥವಾ ಸತೀಚ ಕಾಳರಾತ್ರಿ ಭೈರವೀ ಗಣನಾಯಿಕಾ”ಎಂಬಂತೆ ಬಂದು ವಿಧವಾದ ಶಕ್ತಿಯೆಂದೂ ಗ್ರಹಿಸಬಹುದು.