ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪x.] ಯುದ್ದ ಕಾಂಡವು. ೨೩೫೬ ನಿಮ್ಮ ಕೋರಿಕೆಯನ್ನು ಈಡೇರಿಸುವುದಕ್ಕಾಗಿಯೇ ಅವನು ಈಗ ಕಾಲ ಜೋಹಿತನಾಗಿ ಬಂದಿರುವನು, (ಅವನು ಕಲಬಲವನ್ನು ನೋಡಿಕೊಂಡು ನಿಮ್ಮನ್ನು ಜಯಿಸಬೇಕೆಂದು ಬಂದಿರುವನು ) ' ಆದುದರಿಂದ ಈಗಮಾತ್ರ ನೀವೇನೂ ಆತುರಪಡದೆ, ನನಗಾಗಿ ಸ್ವಲ್ಪ ಹೊತ್ತಿನವರೆಗೆ ಸಹಿಸಿಕೊಂಡಿರ ಬೇಕು, (ಬ್ರಹ್ಮನ ವರವನ್ನು ಗೌರವಿಸುವುದಕ್ಕಾಗಿ ನಾನೂ ಈಗ ಕ್ಷಣಕಾ ಲದವರೆಗೆ ಸಹಿಸಿಕೊಂಡು ಸುಮ್ಮನಿರಬೇಕಾಗಿದೆ )” ಎಂದನು ಇಷ್ಟರ ಕ್ಲಿಯೇ ಪಾಪಾತ್ಮನಾದ ಆ ಇಂದ್ರಜಿತ್ತು, ಕಪಟಿಯುದ್ಧದಲ್ಲಿ ವಿಶ್ರಣ ನಾದುದರಿಂದ, ಅಂತರ್ಧಾನವಿದ್ಯೆಯಿಂದ ಅದೃಶ್ಯನಾಗಿಯೇ ಇದ್ದು, ಸಿಡಿ ಲಿನಂತೆ ಜ್ವಲಿಸುವ ತೀಕ್ಷಬಾಣಗಳನ್ನು ಪ್ರಯೋಗಿಸಲಾರಂಭಿಸಿದನು ರಾಕ್ಷಸಪೀರನಾದ ಆ ಇಂದ್ರಜಿತ್ತು, ಪರಮಕುಪಿತನಾಗಿ, ರಾಮಲಕ್ಷಣ ರಿಬ್ಬರನ್ನೂ ಗುರಿಹಿಡಿದು, ಸರ್ಪರೂಪಗಳಾದ ಕೂರಬಾರಗಳನ್ನು ಅವರ ಸಮಸ್ತಾವಯವಗಳಿಗೂ ವ್ಯಾಪಿಸುವಂತೆ ಪ್ರಯೋಗಿಸಿದನು ಹೀಗೆ ಇಂದ್ರಜಿತು ಕೆಸವಯುದ್ಧವನ್ನಾರಂಭಿಸಿ, ಮಾಯೆಯಿಂದ ಸಮಸ್ಯ ಭೂತಗಳಿಗೂ ಅದೃಶ್ಯನಾಗಿ, ಆ ಯುದ್ಧದಲ್ಲಿ ರಘುಕುಲೋದ್ಭವರಾದ ರಾಮಲಕ್ಷ್ಮಣರಿಬ್ಬರನ್ನೂ ತನ್ನ ಸರ್ಪಾಸ್ತಗಳಿಂದ ಬಂಧಿಸಿ, ಕ್ಷಣಮಾ ತ್ರದಲ್ಲಿ ಅವರಿಬ್ಬರನ್ನೂ ಮೋಹಗೊಳಿಸಿವನು ಯಾರಿಗೂ ತಿಳಿಯದಂತೆ ಆ ಇಂದ್ರಜಿತ್ತು ಸರ್ಪಾಸ್ತ್ರಗಳಿಂದ ಬಂಧಿಸಿದೊಡನೆ, ಪುರುಷಸಿಂಹರಾದ ರಾಮಲಕ್ಷ್ಮಣರಿಬ್ಬರೂ ಪರವಶರಾಗಿ ಬಿದ್ದುದನ್ನು, ಅಲ್ಲಿದ್ದ ಸಮಸ್ತವಾ ನರರೂ ನೋಡಿದರು. ರಾವಣಪುತ್ರನಾದ ಇಂದ್ರಜಿತ್ತು ಮಹಾವೀರಾಗ್ರ ಣಿಯೆನಿಸಿಕೊಂಡರೆ ರಾಮಲಕ್ಷ್ಮಣರಿಗಿದಿರಾಗಿ ನಿಂತು ಯುದ್ಧ ಮಾಡ ಲಾರದೆ, ಮಾಯೆಯನ್ನವಲಂಬಿಸಿ, ಅವರಿಬ್ಬರನ್ನೂ ತನ್ನ ಬಾಣಗಳಿಂದ ಬಂಧಿಸಿಟ್ಟನು ಇಲ್ಲಿಗೆ ನಾಲ್ವತ್ತು ನಾಲ್ಕನೆಯ ಸರ್ಗವು. ಇಂದ್ರಜಿನ ನಾಗಪಾಶದಿಂದ ರಾಮಲಕ್ಷಕರು ಈ ಬದ್ಧರಾಗಿದ್ದುದು. ಬಲಾಡ್ಯನಾಗಿಯೂ ವೀರಶಾಲಿಯಾಗಿಯೂ ಇರುವ ರಾಜಪುತ್ರ ನಾದ ರಾಮನು, ಇಂದ್ರಜಿತ್ತಿರುವ ಸ್ಥಳವನ್ನು ತಿಳಿದುಕೊಳ್ಳಬೇಕೆಂದ