ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೫೮ ಶ್ರೀಮದ್ರಾಮಾಯಣವು ಸರ್ಗ ೪೫. ಪೇಕ್ಷಿಸಿ, ಹತ್ತು ಮಂದಿ ವಾನರಯೂಥಪತಿಗಳನ್ನು ಆ ಕಾಠ್ಯಕ್ಕಾಗಿ ನಿಯ ಮಿಸಿದನು ಇದಕ್ಕಾಗಿ ಪರಂತನಾದ ಆ ರಾಮನು, ಸುಷೇಣನ ಮಕ್ಕಳಿಬ್ಬ ರು, ವಾನರಶ್ರೇಷ್ಠ ನಾದ ನೀಲನೊಬ್ಬನು, ವಾಲಿಪುತ್ರನಾದ ಆಂಗದ ನೊಬ್ಬನು, ಬಲಾಡ್ಯರಾದ ಶರಭ ವಿನತ ಜಾಂಬವಂತರೆಂಬ ಮೂವರು, ಮ ಹಾವೀರವಂತರಾದ ಸಾನುಪ್ರಸ್ಥ ಋಷಭ ಋಷಭಸ್ಮಂಥರೆಂಬ ಮೂವರು; ಈ ಹತ್ತು ಮಂದಿಯನ್ನೂ ಕರೆದು ಇಂದ್ರಜಿತ್ತಿರುವ ಸ್ಥಳವನ್ನು ತಿಳಿದು ಬರುವಂತೆ ಆಜ್ಞಾಪಿಸಿದನು. ಈ ರಾಮಾಜ್ಞೆಯನ್ನು ಕೇಳಿ ಆವಾನರ ರೆಲ್ಲರೂ ಪರಮಸಂತುಷ್ಟರಾಗಿ, ದೊಡ್ಡ ದೊಡ್ಡ ಮರಗಳನ್ನು ಕೈಗೆತ್ತಿ ಕೊಂಡು, ಇಂದ್ರಜಿತ್ವನ್ನು ಹುಡುಕುವುದಕ್ಕಾಗಿ ಆಕಾಶಕ್ಕೆ ಹಾರಿ, ನಾನಾ ದಿಕ್ಕುಗಳಿಗೂ ಹೊರಟರು. ಈ ವಾನರರು ತಡೆಯಿಲ್ಲದ ಮಹಾವೇಗವು ಇವರಾಗಿದ್ದರೂ, ಸರಾಸ ವಿಶಾರದನಾದ ಇಂದ್ರಜಿತ್ತು, ಪರಮಾ ಸ್ವರೂಪಗಳಾದ ತನ್ನ ಬಾಣಗಳಿಂದ ಅವರ ವೇಗವನ್ನು ತಡೆದು ಅವರ ನ್ನು ನಿವಾರಿಸಿದನು ಭಯಂಕರವೇಗವುಳ್ಳ ಈ ವಾನರರೆಲ್ಲರೂ ಇಂದ್ರಜಿತ್ತಿನ ಬಾಣಗಳಿಂದ ಭೇದಿಸಲ್ಪಟ್ಟ ದೇಹವಳ್ಳವರಾಗಿ, ಮೇ ಫದಲ್ಲಿ ಮರೆಗೊಂಡಿರುವ ಸೂರನಂತೆ ಗಾಂಢಾಂಧಕಾರದಲ್ಲಿ ಮರಸಿ ಕೊಂಡಿದ್ದ ಆ ಇಂದ್ರಜಿತ್ತನ್ನು ಕಾಣಲಾರದೆ ಹೋದರು ಯುದ್ಧದಲ್ಲಿ ಜ ಯಶೀಲನಾದ ಆ ಇಂದ್ರಜಿತ್ತಾದರೋ ಸಾವಯವಗಳನ್ನೂ ಭೇದಿಸು ವಂತಿರುವ ತೀಕ್ಷಬಾಣಗಳನ್ನು ತೆಗೆದು, ರಾಮಲಕ್ಷ್ಮಣರಮೇಲೆ ಗುರಿಯಿಟ್ಟು ಹೊಡೆಯುತಿದ್ದನು ಹೀಗೆ ರಾವಣಪುತ್ರನಾದ ಆ ಇಂದ್ರ ಜಿತ್ತು, ಆತ್ಯಾಕ್ರೋಶಗೊಂಡು, ತನ್ನ ಹಗೆ ತೀರುವಂತೆ ವೀರರಾದ ಆ ರಾ ಮಲಕ್ಷ್ಮಣರೆಂಬ ಸಹೋದರರಿಬ್ಬರಮೇಲೆ ಸರ್ಪಬಾಣಗಳನ್ನು ಎಡೆ ಬಿಡದೆ ಪ್ರಯೋಗಿಸುತ್ತಿರಲು, ಅವರ ದೇಹದಲ್ಲಿ ಸೂಜಿಯ ಮೊನೆಯಷ್ಟೂ ಅವಕಾಶವಿಲ್ಲದಂತೆ ಸಾವಯವಗಳೂ ಆ ಬಾಣಗಳಿಂದಲೇ ತುಂಬಿ ಹೋ ದುವು. *ಅವರ ಸಾಂಗಗಳಲ್ಲಿಯೂ ರಕ್ತವು ಸುರಿಯಲಾಂಭಿಸಿತು ಇದರಿಂ

  • ನ ಭೂತಸಂಘಸಂಸ್ಥಾನೋ ದೇಹೋSಸ್ಯ ಪರಮಾತ್ಮನಃ ನತಸ್ಯ ಪ್ರಾಕೃತಾ ಮೂರ್ತಿಮರ್ಾ೦ಸಮೇದೊಬ್ಬಸಂಭವಾ!” ಎಂಬಂತೆ ರಾಮಲಕ್ಷಕರ ದಿವ್ಯ ನಿಗ್ರಹ