ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೪.] ಯುದ್ಧಕಂಡವು ೨೩೫೯ ದ ಅವರಿಬ್ಬರ ದೇಹವೂ ಪುಷ್ಟಿತವಾದ ಮತ್ತುಗದ ಮರದಂತೆ ಕಾಣುತಿ ತ್ತು ಆಗ ಕೆದರಿದ ಕಾಡಿಗೆಯ ರಾಶಿಯಂತೆ ಕಪ್ಪಾದ ಮೈಯುಳ್ಳ ರಾವಣ ಪುತ್ರನಾದ ಇಂದ್ರಜಿತ್ತು, ಕೋಪದಿಂದ ಸ್ವಲ್ಪವಾಗಿ ಕೆಂಪೇರಿದ ಕಡೆ ಗಣ್ಣುಳ್ಳವನಾಗಿ,ತಾನು ಕಣ್ಮರೆಯಾಗಿದ್ದಂತೆಯೇ ಆ ರಾಮಲಕ್ಷ್ಮಣರಿಬ್ಬ ರನ್ನೂ ಕೂಗಿ ಹೇಳುವನು (ಎಲೆ ಕ್ಷತ್ರಿಯಕುಮಾರರೆ ' ನಾನು ಅದೃಶ್ಯ ನಾಗಿ ಯುದ್ಧ ಮಾಡುವುದಕ್ಕೆ ತೊಡಗಿದರೆ, ಸುರನಾಥನಾದ ಇಂದ್ರನಾ ದರೂ ನನ್ನನ್ನು ನೋಡುವುದಕ್ಕಾಗಲಿ, ನನ್ನನ್ನು ಸಮೀಪಿಸುವುದಕ್ಕಾಗ ಲಿ ಶಕ್ತನಲ್ಲ ಇನ್ನು ಕೇವಲಮನುಷ್ಯ ಮಾತ್ರರಾದ ನಿಮ್ಮಿಂದೇನಾಗು ವುದು ? ಎಲೆ ರಾಮಲಕ್ಷ್ಮಣರೆ 1 ನನಗೆ ಕೋಪವುಂಟಾದಮೇಲೆ ನಾ ನು ಸುಮ್ಮನೆ ಬಿಡುವೆನೆ?ಹದ್ದಿನ ಗರಿಗಳುಳ್ಳ ಈ ನನ್ನ ಬಾಣಗಳಿಂದ ನಿಮ್ಮಿ ಬ್ಬರ ದೇಹವನ್ನೂ ಎಡೆಬಿಡದೆ ಮುಚ್ಚಿ ಇದೋ ಈಗಲೇ ಯಮಪುರಿಗೆ ಸಾ ಗಿಸಿಬಿಡುವೆನು ನೋಡಿ ” ಎಂದನು ರಾಮಲಕ್ಷ್ಮಣರಿಬ್ಬರೂ ಶಬ್ದ ಗಳೆರಡೂ ಅಪ್ರಾಕೃತಗಳಾಗಿರುವಾಗ, ಆ ದೇಹಗಳಿಂದ ರಕ್ತಮಾಂಸಗಳು ಹರಡು ವುದು ಹೇಗೆ? ಎಂದರೆ, ವಾಸ್ತವದಿಂದ ರಕ್ತವಿಲ್ಲದಿದ್ದರೂ, ಮನುಷ್ಯತ್ವವನ್ನು ತೋ ರಿಸುವುದಕ್ಕಾಗಿಯೇ ಅವರು ರಕ್ತವನ್ನು ತೋರಿಸಿದುದಾಗಿ ಗ್ರಾಹ್ಯವು ಆದರೆ ಇನ್ನು ನಿರ್ಬಂಧದಿಂದಾದರೂ ಮನುಷ್ಯಭಾವವನ್ನ ಭಿನಯಿಸುವುದರಿಂದ ಫಲವೇನು? ಎಂದರೆ, ಸರೈ ವಿಧದಲ್ಲಿಯೂ ಇವರು ಮನುಷ್ಯರಂತೆ ನಟಿಸದೆಹೋದರೆ, ಇತರ ಜನಜಗಳಿಗೆ ಆ ವರು ದೇವಾಂಶವುರುಷರೆಂಬ ಭಾವವೇ ಸಂಪೂರ್ಣವಾಗಿ ಹುಟ್ಟಿ,ಆತನಂತೆ ತಮ್ಮಿಂದ ಧರಗಳೆಲ್ಲವನ್ನೂ ನಡೆಸುವುದು ಸಾಧ್ಯವಲ್ಲವೆಂದೂ ತೋರಬಹುದು ಈ ಶಂಕೆಯನ್ನು ನಿವಾರಿಸುವುದಕ್ಕಾಗಿಯೇ ಇವರು, ಅವಕಾಶವಿದ್ದಾಗಲೆಲ್ಲಾ ಮನುಷ್ಯತ್ವವನ್ನು ನಟಿ ಸುತಿದ್ದರೆಂದೇ ರಹಸ್ಯವು ಮತ್ತು ರಾವಣನು ಮನುಷ್ಯನೊಬ್ಬನಿಂದಲೇ ವಧ್ಯನಾದು ದರಿಂದ, ತನ್ನಲ್ಲಿರುವ ಮನುಷ್ಯ ಸ್ವರೂಪವನ್ನೆಲ್ಲಾ ಅವನಿಗೆ ತೋರಿಸಬೇಕೆಂಬ ಉದ್ದೇ ಶದಿಂದಲೇ ಹೀಗೆ ನಟಿಸಿದುದಾಗಿಯೂ ಹೇಳುವರು ಇವರಿಬ್ಬರೂ ನಾಗಪಾಶಬದ್ದರಾ ಗಿ ಮಲಗಿದ್ದುದೇಕೆ ! ಎಂದರೆ ಧರನಿರತರಾ ದವರಿಗೆ ಒಮ್ಮೆ ಅಕಸ್ಮಾತ್ತಾಗಿ ಮಹಾವಿ ಪತ್ತುಗಳು ಬಂದರೂ, ಕ್ಷಣಕಾಲದಲ್ಲಿಯೇ ಅವು ನಿವರ್ತಿಸುವುವೆಂದು ಲೋಕಕ್ಕೆ ತಿಳಿ ಸುವುದಕ್ಕಾಗಿಯೇ ಹೊರತು ಬೇರೆಯಲ್ಲ ಹೀಗೆಯೇ ರಾಮನ ವಿರಹದುಃಖಾದಿಗಳಿ ಈ ಕಾರಕಗಳನ್ನು ತಿಳಿಯಬೇಕು.