ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೦ ಶ್ರೀಮದ್ರಾಮಾಯಣವು [ಸರ್ಗ, ೪೫, ವೇಧಿಯೆಂಬ ಶಸ್ತ್ರ ವಿದ್ಯೆಯನ್ನು ಬಲ್ಲವರಾಗಿ, ಶಬ್ದವನ್ನೇ ಗುರಿಹಿಡಿದು ತಮ್ಮ ಬಾಣಗಳನ್ನು ಪ್ರಯೋಗಿಸಿ ಇಂದ್ರಜಿತ್ತನ್ನು ತಡೆಯಬಲ್ಲವ ರಾಗಿದ್ದರೂ, ಧರ್ಮಜ್ಞರಾದುದರಿಂದ, ಧರ ಯುದ್ಧದಲ್ಲಿಯೇ ದೃಷ್ಟಿ ಯಿಟ್ಟು ತಾಳ್ಮೆಯಿಂದಿರುತಿದ್ದರು ಇಂದ್ರಜಿತ್ತು ಹೆಮ್ಮೆಯಿಂದ ಆರಾ ಮಲಕ್ಷ್ಮಣರಿಬ್ಬರನ್ನೂ ಮೂದಲಿಸುತ್ತ ಮೇಲೆಮೇಲೆ ತೀಕ್ಷ್ಮಬಾಣ ಗಳನ್ನು ಪ್ರಯೋಗಿಸಿ, ತನಗೆ ಜಯವುಂಟಾಯಿತೆಂಬ ಸಂತೋಷದಿಂದ ಆ ಟೈಹಾಸದೊಡನೆ ನಕ್ಕು ಸಿಂಹನಾದವನ್ನೂ ಮಾಡಿದನು, ಮತ್ತು ಕೆ ದರಿದ ಕಾಡಿಗೆಯಂತೆ ಕಪ್ಪು ಮೈಯುಳ್ಳ ಇಂದ್ರಜಿತ್ತು, ಕಣ್ಮರೆಯಾ ಗಿದ್ದಂತೆಯೇ ದೊಡ್ಡ ಧನುಸ್ಸನ್ನು ಹಿಡಿದು ಓಂಕಾರಮಾಡುತ್ತ, ರಾ ಮಲಣಣರಮೇಲೆ ತೀಕ್ಷಬಾಣಗಳನ್ನು ಎಡೆಬಿಡದೆ ಸುರಿಯುತ್ತಲೇ ಇದ್ದನು. ಶಸ್ತ್ರವಿದ್ಯೆಯ ಮರ್ಮವನ್ನು ಚೆನ್ನಾಗಿ ಬಲ್ಲ ಆ ರಾವಣಪತ್ರ ನು, ಹೀಗೆ ರಾಮಲಕ್ಷ್ಮಣರ ಮರ್ಮಸ್ಥಾನಗಳಲ್ಲಿ ಮೆ೦ಲೆಮೇಲೆ ಬಾಣಗ ಳನ್ನು ಪ್ರಯೋಗಿಸು, ಆಗಾಗ ಸಿಂಹನಾದವನ್ನೂ ಮಾಡುತಿದ್ದನು ರಾಮಲಕ್ಷ್ಮಣರಿಬ್ಬರೂ ಸರ್ಪರೂಪಗಳಾದ ಅವನ ಬಾಣಗಳಲ್ಲಿ ಕಟ್ಟು ಬಿದ್ದು, ಕ್ಷಣಮಾತ್ರರಲ್ಲಿಯೇ ಕಣ್ಣು ಕಾಣದೆ ಪ್ರಜ್ಞೆ ತಪ್ಪಿರು ಇವರ ಸಮಸ್ಸಾವಯವಗಳೂ ಶಸ್ತ್ರಗಳಿಂದ ಭೇದಿಸಲ್ಪಟ್ಟವು ಅಂಗಾಂಗ ಗಳಲ್ಲಿಯೂ ಬಾಕ್ಷಗಳು ನಾಟಿಕೊಂಡುವು ಇದರಿಂದ ಆ ಸಹೋದರರಿಬ್ಬ ರೂ ಪ್ರಜ್ಞೆ ತಪ್ಪಿದವರಾಗಿ, ಹಗ್ಗವನ್ನು ಸಡಿಲಿಸಿದ ಇಂದ್ರಧ್ವಜಗಳಂತೆ ಶಕ್ತಿಗುಂದಿ ಕೆಳಗೆಬಿದ್ದರು ಈ ರಾಮಲಕ್ಷ್ಮಣರಿಬ್ಬರೂ ಮಹಾಧನುಷ್ ತರಾಗಿದ್ದರೂ, ಇಂದ್ರಜಿತ್ತಿನ ಬಾಣಗಳು ಮರ್ಮಸ್ಥಾನಗಳಲ್ಲಿ ನಾಟಿದುದ ರಿಂದ, ಬಹಳವಾಗಿ ನೊಂದು, ನಿಶ್ಚಲರಾದರು ಅವರ ಸಾವಯವಗಳೂ, ಸರ್ಪರೂಪಗಳಾದ ಬಾಣಗಳಿಂದ ಕಟ್ಟುಬಿದ್ದುವು. ಅವರ ಸಹ್ಯಾಂಗಗಳೂ ರಕ್ತಮಯವಾದವು, ಅವರಿಬ್ಬರೂ ವೀರಶಯನವೆನಿಸಿಕೊಂಡ ರಣರಂಗದ ಈ ಶಯನಿಸಿದರು. ಇಬ್ಬರೂ ಬಹಳವಾಗಿ ಬಾಣಹತಿಯಿಂದ ನೊಂದು ಸಂ ಕಟಪಡುತಿದ್ದರು. ಅವರಿಬ್ಬರ ದೇಹದಲ್ಲಿಯೂ ಶಿರಸ್ಸಿನಿಂದ ಕರಾಗ್ರದವರೆ ಗೆ, ಒಂದು ಕಿರುಬೆರಳಿನಷ್ಟು ಸ್ಥಳವಾದರೂ ಉಳಿಯದಂತೆ, ಸಾವಯವಗ ಭೂ ಸರ್ಪರೂಪಗಳಾದ ಬಾಣಗಳಿಂದ ಭಿನ್ನವಾದುವು, ಸಾಂಗವೂ ನಿ