ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೬೧ ಸರ್ಗ, ೪x | ಯುದ್ಧಕಾಂಡವು. ಶಲವಾಯಿತು. ಹೀಗೆ ಆ ರಾಮಲಕ್ಷ್ಮಣರಿಬ್ಬರೂ ಕಾಮರೂಪಿಯಾದ ಆ ಕೊರರಾಕ್ಷಸನ ಬಾಣಗಳಿಂದ ಭೇಧಿಸಲ್ಪಟ್ಟ ದೇಹವುಳ್ಳವರಾಗಲು, ಪ್ರ ಶ್ರವಣ ಪರತಗಳಿಂದ ಹೊರಡುವ ಗಿರಿನದಿಗಳಂತೆ ಅವರಿಬ್ಬರ ದೇಹbo ದಲೂ ರಕ್ತಪ್ರವಾಹವು ಹೊರಡುತಿತ್ತು ಮೊದಲೇ ತನ್ನ ವೀರದಿಂದ ಇಂದ್ರನನ್ನು ಜಯಿಸಿ ಇಂದ್ರಜಿತ್ತೆಂದು ಪ್ರಸಿದ್ಧಿ ಹೊಂದಿದ ಆ ಕೂರರಾಕ್ಷ ಸನು, ಕೋಪಾವಿಷ್ಟನಾಗಿ, ಮರ್ನಸ್ಥಾನಗಳನ್ನು ಗುರಿಹಿಡಿದು ಬಾಣವ ನ್ನು ಪ್ರಯೋಗಿಸುತ್ತಿರಲು, ಮೊದಲು ರಾಮನು ಕೆಳಗೆ ಬಿದ್ದನು ಆ ರಾಕ್ಷ ಸನು ನಾಗಾಸದಿಂದ ಬಂಧಿಸಿದಮೇಲೆಯೂ ಬಿಡದೆ, ಇನ್ನೂ ಇತರವಿಧಗ ಳಾದ ಸಾಮಾನ್ಯವಾಣಗಳನ್ನೂ ಬಿಡುವುದಕ್ಕೆ ತೊಡಗಿದನು ಚಿನ್ನ ದ ಹಿಡಿಗ ಳಿಂದಲೂ, ಸಾಣೆಯಿಕ್ಕಿ ಹೊಳೆಯುವ ಅಲಗುಗಳಿಂದಲೂ ಕೂಡಿದ ವಿವಿಧ ಬಾಣಗಳನ್ನು ತೆಗೆದು ಆ ಬಾಣಗಳನ್ನು ಕೆಳಮುಖವಾಗಿ ರಾಮಲಕ್ಷ್ಮಣರ ಕಡೆಗೆ ಪ್ರಯೋಗಿಸುತಿದ್ಯನು ಈ ಬಾಣಗಳಲ್ಲಿಯೂ ಚಕ್ರದಂತೆ ವರ್ತುಲಾ ಕಾರವಾದ ಮೊನೆಯುಳ್ಳವು ಕೆಲವು ಅರ್ಧಚಂದ್ರಾಕಾರದ ಮೊನೆಯುಳ್ಳ ವು ಕೆಲವು ಈಟಿಯಂತೆ ಮೊನೆಯುಳ್ಳವು ಕೆಲವು ಅ೦ಜಲಿಯಂತೆ ಮೊನೆಯ ಇವು ಕೆಲವು ಕರುವಿನ ಕೊಂಬಿನಂತೆ ಕವಲುವೆನೆಯುಳ್ಳವು ಕೆಲವು ಸಿಂ ಹದ ಕೊರೆಗಳಂತೆ ಮೊನೆಯುಳ್ಳವು ಕೆಲವು ಸಣ್ಣ ಕತ್ತಿಯಂತೆ ಮೊನೆಯು ತೃವು ಕೆಲವು ಇಂತಹ ಚಿತ್ರವಿಚಿತ್ರಗಳಾದ ಬಾಣಗಳಿಂದ ರಾಮನ ದೇಹ ವನ್ನು ಹರಿಸುತಿದ್ದನು ಈ ಬಾಣಹತಿಯಿಂದ ರಾಮನು ಬಹಳನೋಂ ದವನಾಗಿ ವೀರಶಯನರೂಪವಾದ ರಣರಂಗದಲ್ಲಿ ಮಲಗಿಬಿಟ್ಟನು ಉಭ ಯಪಾರ್ಶ್ವಗಳಲ್ಲಿಯೂ, ಮಧ್ಯದಲ್ಲಿಯೂ ಬಾಗಿದ ರತ್ನ ಭೂಷಿತವದ ಧನು ಸೃನ್ನು ಬಲವಾಗಿ ಹಿಡಿದಿದ್ದ ಅವನ ಮುಷ್ಟಿಯು, ಕ್ರಮವಾಗಿ ಸಡಿಲು ತಬಂದಿತು ಬಿಚ್ಚಿ ದ ಹೆದೆಯುಳ್ಳ ತನ್ನ ಧನುರ್ಧಂಡವನ್ನು ನೆಲದಮೇಲೆ ಊರಿ ನಿಂತಂತೆಯೇ ಆತನು ನೆಲಕ್ಕೆ ಬಿದ್ದನು ಹೀಗೆ ರಾಮನು ಶರತಲ್ಪದಲ್ಲಿ ಮಲಗಿದುದನ್ನು ಕಂಡೊಡನೆ ಲಕ್ಷ್ಮಣನಿಗೆ ತನ್ನ ಪ್ರಾಣದಲ್ಲಿಯೇ ನಿರಾ ಶೆಯು ಹುಟ್ಟಿತು. ನಾಗಾಸ್ತ್ರಬದ್ಧನಾಗಿ ಬಿದ್ದಿರುವ ತನ್ನಣ್ಣನನ್ನು ಕಂಡು ಲಕ್ಷ್ಮಣನಿಗೆ ಮಿತಿಮೀರಿದ ದುಃಖಾವೇಶವುಂಟಾಯಿತು, ಅಲ್ಲಿದ್ದ ಸಮಸ್ತ ವಾನರರಿಗೂ ತಡೆಯಲಾರದ ಸಂಕಟವು ಹುಟ್ಟಿತು. ಹನುಮಂತನೇ ಮೊದ 149