ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೩೨ ಶ್ರೀಮದ್ರಾಮಾಯಣವು [ಸರ್ಗ ೪೬, ಲಾದ ಸಮಸ್ತ ವಾನರರೂ ಸೇರಿ ನಾಗಪಾಶಬದ್ಧರಾಗಿದ್ದ ರಾಮಲಕ್ಷಣ ರಿಬ್ಬರನ್ನೂ ಸುತ್ತಿನಿಂತು, ಮಹಾವ್ಯಸನದಿಂದ ಸಂಕಟಪಟ್ಟು ಕೆರಗಿ ತತ್ತಳಿಸುತ್ತಿದ್ದರು ಇಲ್ಲಿಗೆ ನಾಲ್ವ,ದನೆಯ ಸರ್ಗವು. ಸುಗ್ರೀವವಿಭೀಷಣಾದಿಗಳು ನಾಗೆ ಪಾಶಬದರಾ ? ದ ರಾಮಲಕ್ಷ ಸರ ಅವಸ್ಥೆಯನ್ನು ನೋಡಿ ದುಃಖಿಸಿ | ದುದು ಇಂದ್ರಜಿತು ಸುಗ್ರೀವಾದಿಗಳಮೇಲೆ ಬಾಣವ ನ್ನು ಹೊಡೆದುದು ವಿಭೀಷಣನು ಸುಗ್ರೀವವನ್ನು ಸ ಮಾಧಾನಪಡಿಸಿದುದು ಇಂದ್ರಜಿತ್ತು ರಾವಣನಿಗೆ ತನ್ನ ಜಯವನ್ನು ತಿಳಿಸಿದುದು. ಆಮೇಲೆ ವಾನರರಲ್ಲರೂ ಇಂದ್ರಜಿತ್ತನ್ನು ಹುಡುಕುವುದಕ್ಕಾಗಿ ಭೂ ಮ್ಯಾಕಾಶಗಳನ್ನೆ ಲ್ಲಾ ಸುತ್ತಿ ಸುತ್ತಿ ನೋಡುತ್ತ, ಇತ್ತಲಾಗಿ ಸಾಂಗಗಳಲ್ಲಿ ಯೂ ಬಾಣಗಳು ನಾಟಿ ನೆಲದಮೇಲೆ ಮಲಗಿ ಸಹೋದರರಾದ ರಾಮ ಲಕ್ಷಣರಿಬ್ಬರನ್ನೂ ಕಂಡರು, ಮಳೆಸುರಿದು ಶಾಂತವಾದ ಮೇಫುದಂತೆ, ಇಂದ್ರಜಿತು, ಈ ರಾಮಲಕ್ಷಣರಮೇಲೆ ಬಾಣವರ್ಷಗಳನ್ನು ಕರೆದು ಸುಮ್ಮನಾದಮೇಲೆ, ಸುಗ್ರೀವವಿಭೀಷಣರಿಬ್ಬರೂ ರಾಮನಿದ್ದ ಕಡೆಗೆ ಬಂದರು. ಅದಕ್ಕೆ ಮೊದಲೇ ಹನುಮಂತನೂ, ನೀಲನೂ,ಮೈಂದದ್ವಿವಿದರೂ, ಸುಷೇಣನೂ ಅಲ್ಲಿಗೆ ಬಂದು ರಾಮಲಕ್ಷ್ಮಣರನ್ನು ನೋಡಿ ಬಹಳ ದುಃಖಾ ಕ್ರಾಂತರಾಗಿ ನಿಂತಿದ್ದರು. ಅಲ್ಲಿ ರಾಮಲಕ್ಷ್ಮಣರಿಬ್ಬರೂ ಅತ್ತಿತ್ತ ಕದಲ ಲಾರದೆ ನಿಶ್ಲೇಷ್ಯರಾಗಿ, ನಡುನಡುವೆ ಮೆಲ್ಲಗೆ ಶ್ಯಾಸವನ್ನು ಬಿಡುತ್ತಲೂ, ನಡುನಡುವೆ ಮೆಲ್ಲಗೆ ಕೈ ಕಾಲುಗಳನ್ನಾಡಿಸುತ್ತಲೂ, ರಕ್ತದಿಂದ ತೊಯ್ಕ ಸಾವಯವಗಳುಳ್ಳವರಾಗಿದ್ದರು ಅವರ ಸಾಂಗಗಳಲ್ಲಿಯೂ ಬಾಣ ಸಮೂಹಗಳು ನಾಟಿದ್ದುವು ಒಮ್ಮೊಮ್ಮ ಸರ್ಪದಂತೆ ಉದ್ದವಾಗಿ ನಿಟ್ಟುಸಿರನ್ನು ಬಿಡುತಿದ್ದರು ಅವರ ವೀರವು ಕ್ರಮಕ್ರಮವಾಗಿ ತಗ್ಗು ತ್ಯ ಬಂbತು ಸಾಂಗಗಳೂ ರಕ್ತದಿಂದ ತೊಯ್ದು ಕೆಂಪಾಗಿದ್ದುದರಿಂದ, ನೆಲದಮೇಲೆ ಮಲಗಿಸಿಡಲ್ಪಟ್ಟ ಸುವರ್ಣಧ್ವಜಗಳಂತೆ ಶರತಲ್ಪದಲ್ಲಿ ಮಲ ಗಿದ್ದರು. ಆ ಅಣ್ಣತಮ್ಮಂದಿರಿಬ್ಬರ ಸುತ್ತಲೂ, ವಾನರ ಯೂಥಪತಿಗಳೆ